ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜುಲೈ, 2023 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹುಳಿಯಾರು: ಕಾಲೇಜು ಬಳಿ ರಸ್ತೆ ಉಬ್ಬು ಹಾಕಲು ಎಬಿವಿಪಿ ಮನವಿ

ಹುಳಿಯಾರು : ಹುಳಿಯಾರು ಹಿರಿಯೂರು ರಸ್ತೆಯ ಕೋಡಿಪಾಳ್ಯದ ಸರ್ಕಾರಿ ಶಾಲಾಕಾಲೇಜು ಬಳಿ ಸೂಚನಾ ಫಲಕ ಹಾಗೂ ರಸ್ತೆ ಉಬ್ಬು ಹಾಕುವಂತೆ ಎಬಿವಿಪಿ ಕಾರ್ಯಕರ್ತರು ಹೈವೆ ಎಂಜಿನಿಯರ್ ಅವರಿಗೆ ಮನವಿ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿದ ಎಬಿವಿಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಹೆಚ್.ಆರ್.ಗುರುಪ್ರಸಾದ್ ಹಾಗೂ ಮತ್ತಿತರರು   ಹುಳಿಯಾರು ಹಿರಿಯೂರು ರಸ್ತೆಯು ರಾಷ್ಟ್ರೀಯ ಹೆದ್ದಾರಿಯಾಗಿದ್ದು ಇದೇ ಮಾರ್ಗವಾಗಿ ಹಾಸನಕ್ಕೆ ನೂರಾರು ಪೆಟ್ರೋಲ್ ಟ್ಯಾಂಕರ್‌ಗಳು ಸೇರಿದಂತೆ ನಿತ್ಯ ಸಾವಿರಾರೂ ವಾಹನಗಳು ಓಡಾಡುತ್ತವೆ. ಈ ವಾಹನಗಳ ಚಾಲಕರೆಲ್ಲರೂ ಪರಸ್ಥಳದವರಾಗಿರುವುದರಿಂದ ಕೋಡಿಪಾಳ್ಯದ ಬಳಿ ಶಾಲೆ ಕಾಲೇಜು ಇದೆ ಎನ್ನುವ ಅರಿವಿಲ್ಲದೆ ಸಿಕ್ಕಾ ಪಟ್ಟೆ ಹಾರನ್ ಮಾಡುತ್ತಾರೆ.ಇದರಿಂದ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗಿದೆ. ಅಲ್ಲದೆ ಬೆಳಗ್ಗೆಯಿಂದ ಸಂಜೆಯವರೆವಿಗೂ ಇಲ್ಲಿನ ಹೌಸ್ಕೂಲ್, ಪಿಯು ಕಾಲೇಜು, ಪದವಿ ಕಾಲೇಜಿಗೆ ಸುಮಾರು 2500 ವಿದ್ಯಾರ್ಥಿಗಳು ಈ ರಸ್ತೆಯಲ್ಲಿ ಓಡಾಡುತ್ತಿರುತ್ತಾರೆ. ಆದರೆ ವಾಹನಗಳು ಅತೀ ವೇಗದಲ್ಲಿ ಓಡಾಡುತ್ತಿರುವುದರಿಂದ ವಿದ್ಯಾರ್ಥಿಗಳು ಅಂಗೈಯಲ್ಲಿ ಜೀವ ಹಿಡಿದಿಟ್ಟುಕೊಂಡು ಓಡಾಡುವಂತ್ತಾಗಿದೆ. ಹಾಗಾಗಿ ತಕ್ಷಣ ಸೂಚನ ಫಲಕಾ ಹಾಗೂ ರಸ್ತೆ ಉಬ್ಬು ನಿರ್ಮಿಸುವಂತೆ ಪಟ್ಟಣ ಪಂಚಾಯ್ತಿ ಮೂಲಕ ಹೈವೆ ಎಂಜಿನಿಯರ್ ಅವರಿಗೆ ಮನವಿ ಮಾಡಿದ್ದಾರೆ. ಈ ವೇಳೆ ಎ.ಪಿ.ಬಿ.ಪಿ. ರಾಜ್ಯ ಕಾರ್ಯಕಾರಣಿ ಸದಸ್ಯರಾದ ಗುರು ಪ್ರಸಾದ್,