ಹುಳಿಯಾರು : ರೈತರಿಂದ ರೈತರಿಗಾಗಿ, ರೈತರಿಗೋಸ್ಕರ, ರೈತರೇ ಮಾಲೀಕರಾಗಿರುವ ಕಂಪನಿ ರೈತ ಉತ್ಪಾದಕ ಕಂಪನಿಯಾಗಿದ್ದು ಇದರ ಏಳಿಗೆಯನ್ನು ರೈತರೇ ಮಾಡಬೇಕಿದ್ದು, ರೈತರು ಉತ್ಪಾದಕ ಕಂಪನಿಯಲ್ಲಿ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡರೆ ಕಂಪನಿ ಉತ್ತಮವಾಗಿ ಬೆಳೆದು ಅಧಿಕ ಲಾಭ ಪಡೆಯಬಹುದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಂಗಳೂರು ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಶೀನಪ್ಪ ಅಭಿಪ್ರಾಯ ಪಟ್ಟರು. ಚಿಕ್ಕನಾಯಕನಹಳ್ಳಿ ತಾಲ್ಲೂಕು ಹುಳಿಯಾರು ಹೋಬಳಿಯ ಯಳನಾಡು ಗ್ರಾಮದಲ್ಲಿ ಜರುಗಿದ ಚಿಕ್ಕನಾಯಕನಹಳ್ಳಿ ರೈತ ಉತ್ಪಾದಕ ಕಂಪನಿಯ 4ನೇ ವಾರ್ಷಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿದ ಯಳನಾಡು ಅರಸೀಕೆರೆ ಮಹಾಸಂಸ್ಥಾನ ಮಠದ ಶ್ರೀ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಮಹಾಸ್ವಾಮೀಜಿಯವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸರ್ಕಾರದಿಂದ ಸ್ಥಾಪಿಸಿದವಾದ ಈ ರೈತ ಉತ್ಪಾದಕ ಕಂಪನಿಯು ಉತ್ತಮ ರೀತಿಯಲ್ಲಿ ನಡೆಯುತ್ತಿದ್ದು, ಇದಕ್ಕೆ ಧರ್ಮಸ್ಥಳದ ಕೊಡುಗೆ ಅಪಾರವಾಗಿದ್ದು ಇದರಿಂದ ಹಳ್ಳಿಗಳ ಉದ್ದಾರ ಸಾಕಾರಗೊಳ್ಳಲಿದೆ. ಪೂಜ್ಯ ವೀರೇಂದ್ರ ಹೆಗ್ಗಡೆಯವರ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದ್ದು ಇಂತಹ ಕಾರ್ಯಕ್ರ...
📰 ಹುಳಿಯಾರು ಸೇರಿದಂತೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸ್ಥಳಿಯ ಸುದ್ದಿ ಸಮಾಚಾರದ ಬ್ಲಾಗ್........ ✍️ನರೇಂದ್ರಬಾಬು ಹುಳಿಯಾರು-📞9448760070