ಸ್ಕೂಲ್‌ನ ಕಾರ್ಯದರ್ಶಿ ಕವಿತಾಕಿರಣ್ ಅವರು ಮಾತನಾಡಿ ಭಾರತವು ಶ್ರೇಷ್ಠ ಸಂಸ್ಕೃತಿಗಳ ಆಗರವಾಗಿದ್ದು ಅವುಗಳಲ್ಲಿ ಹಬ್ಬಗಳು ಮೊದಲ ಸ್ಥಾನದಲ್ಲಿ ನಿಲ್ಲುತ್ತವೆ.ಇಂತಹ ಹಬ್ಬಗಳಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯು ಸಹ ಒಂದು. ಈ ಹಬ್ಬದ ಉದ್ದೇಶ ಸರ್ವ ಜನರು ಸುಖ ಸಂತೋಷ ಸಮೃದ್ಧಿಯಿಂದ ಬದುಕಬೇಕು ಮತ್ತು ನಮ್ಮೊಳಗಿರುವ ರಾಗ ದ್ವೇಷಗಳನ್ನು ಕಿತ್ತೊಗೆದು ಉತ್ತಮ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ಬದುಕಬೇಕು ಎಂಬ ಸಂದೇಶವನ್ನು ಈ ಹಬ್ಬ ನೀಡುತ್ತದೆ ಎಂದರು.
ಪುರಾಣ ಕಾಲದಲ್ಲಿ ಭೂಮಿಯ ಮೇಲೆ ದುಷ್ಟರ ಉಪಟಳ ಹೆಚ್ಚಾದಾಗ ಅವರ ಸಂಹಾರಕ್ಕಾಗಿ ವಿಷ್ಣು ವಿವಿಧ ಅವತಾರಗಳಲ್ಲಿ ಅವತರಿಸಿ ಜಗತ್ತಮನ್ನು ಕಾಪಾಡಿದ ವಿಷಯ ಎಲ್ಲರಿಗೂ ತಿಳಿದಿದೆ. ಕೃಷ್ಣನ ಅವತಾರದಲ್ಲಿ ಭೂಮಿ ಮೇಲೆ ಅವತರಿಸಿದಂತಹ ವಿಷ್ಣು ಕಂಸನಂತಹ ರಾಕ್ಷಸನನ್ನು ಕೊಂದು ನಂದಗೋಕುಲವನ್ನು ಕಾಪಾಡಿದ ದೇವರಾಗಿ ನಮ್ಮ ನಿಮ್ಮೆಲ್ಲರ ಮುಂದೆ ನಿಲ್ಲುತ್ತಾನೆ ಎಂದು ವಿವರಿಸಿದರು.
ಶಾಲೆಯ ಶಿಕ್ಷಕರಾದ ಷಣ್ಮುಖ ಅವರು ಮಾತನಾಡಿ ಮಕ್ಕಳು ಹಬ್ಬಗಳ ಆಚರಣೆಗಳ ಜೊತೆಯಲ್ಲಿ ಮಾನವೀಯ ಮೌಲ್ಯಗಳನ್ನ ತುಂಬಿಕೊಂಡು ಜೀವನ ಸುಧಾರಣೆಯ ಮಾಡಿಕೊಳ್ಳುವುದರ ಮೂಲಕ ಸಮಾಜಕ್ಕೆ ಒಳ್ಳೆಯ ವ್ಯಕ್ತಿಗಳಾಗಿ ಬದುಕಿ' ಎಂದರು.
ಈ ಸಮಾರಂಭದಲ್ಲಿ ಶಾಲೆ ಆಡಳಿತ ಅಧಿಕಾರಿ ಅಮಿತ್, ಪ್ರಾಂಶುಪಾಲರಾದ ದಿಲೀಪ್ ಮತ್ತು ಶಾಲಾ ಸಿಬ್ಬಂದಿ ವರ್ಗ ಹಾಜರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ