ಚಿಕ್ಕನಾಯಕನಹಳ್ಳಿ ತಾಲ್ಲೂಕು ಹುಳಿಯಾರು ಹೋಬಳಿಯ ಯಳನಾಡು ಗ್ರಾಮದಲ್ಲಿ ಜರುಗಿದ ಚಿಕ್ಕನಾಯಕನಹಳ್ಳಿ ರೈತ ಉತ್ಪಾದಕ ಕಂಪನಿಯ 4ನೇ ವಾರ್ಷಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿದ ಯಳನಾಡು ಅರಸೀಕೆರೆ ಮಹಾಸಂಸ್ಥಾನ ಮಠದ ಶ್ರೀ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಮಹಾಸ್ವಾಮೀಜಿಯವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸರ್ಕಾರದಿಂದ ಸ್ಥಾಪಿಸಿದವಾದ ಈ ರೈತ ಉತ್ಪಾದಕ ಕಂಪನಿಯು ಉತ್ತಮ ರೀತಿಯಲ್ಲಿ ನಡೆಯುತ್ತಿದ್ದು, ಇದಕ್ಕೆ ಧರ್ಮಸ್ಥಳದ ಕೊಡುಗೆ ಅಪಾರವಾಗಿದ್ದು ಇದರಿಂದ ಹಳ್ಳಿಗಳ ಉದ್ದಾರ ಸಾಕಾರಗೊಳ್ಳಲಿದೆ. ಪೂಜ್ಯ ವೀರೇಂದ್ರ ಹೆಗ್ಗಡೆಯವರ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದ್ದು ಇಂತಹ ಕಾರ್ಯಕ್ರಮಗಳು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಇನ್ನಷ್ಟು ಸಾಕಾರಗೊಳ್ಳಲಿ, ಇದರ ಪ್ರಯೋಜನವನ್ನು ಹೆಚ್ಚು ಹೆಚ್ಚು ರೈತರು ಪಡೆದುಕೊಳ್ಳುವಂತಾಗಲಿ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಮನೋಜ್ ಮಿನೇಜಸ್ ಮಾತನಾಡಿ ರೈತ ಉತ್ಪಾದಕ ಕಂಪನಿಯ ಉದ್ದೇಶ ಸಾಕಾರಗೊಳ್ಳಬೇಕಾದರೆ ರೈತರು ಹೆಚ್ಚು ಸಕ್ರಿಯವಾಗಿ ಕಂಪನಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ವ್ಯವಹಾರ ಮಾಡುವುದರ ಜೊತೆಗೆ, ಹೊಸ ಹೊಸ ವ್ಯವಹಾರಗಳನ್ನು ಪ್ರಾರಂಭಿಸಿದಲ್ಲಿ ಹೆಚ್ಚು ಹೆಚ್ಚು ಆದಾಯಗಳಿಸಿಕೊಳ್ಳಬಹುದು. ಇದರಿಂದ ಕಂಪನಿಗೆ ಹೆಚ್ಚು ಆದಾಯ ಬರುತ್ತದೆ. ಇದರ ಜೊತೆಗೆ ರೈತರು ತಮ್ಮ ಕಂಪನಿಯ ವ್ಯವಹಾರದ ಬಗ್ಗೆ ಗಮನಕೊಟ್ಟು ಕಂಪನಿಯ ಆಗುಹೋಗುಗಳು ಸ್ವತಃ ಪರಮರ್ಶಿಸಿ ಸಲಹೆ ಸೂಚನೆಗಳನ್ನು ನೀಡಬೇಕು ಎಂದು ತಿಳಿಸಿದರು.
ರೈತ ಉತ್ಪಾದಕ ಕಂಪನಿಯ ಯೋಜನಾಧಿಕಾರಿ ನಿಖಿಲೇಶ್ ಮಾತನಾಡಿ ಕಂಪನಿಯ 3 ವರ್ಷದ ಆಯವ್ಯಯ ಪಟ್ಟಿಯನ್ನು ಮಂಡಿಸಿ, ಕಂಪನಿಯು ಮೂರು ವರ್ಷದಲ್ಲಿ ಏನೆಲ್ಲಾ ವ್ಯವಹಾರ ಮಾಡಿದೆ, ಎಷ್ಟೆಷ್ಟು ಲಾಭಗಳಿಸಿದೆ ಎಂಬುದರ ಬಗ್ಗೆ ವಿವರಣೆ ನೀಡಿದರು.
ಕಾರ್ಯಕ್ರಮದಲ್ಲಿ ತುಮಕೂರು-2 ಜಿಲ್ಲೆಯ ಜಿಲ್ಲಾ ನಿರ್ದೇಶಕರಾದ ದಿನೇಶ್, ರೈತ ಉತ್ಪಾದಕ ಕಂಪನಿಯ ಅಧ್ಯಕ್ಷರು, ಕಂಪನಿ ಆಡಳಿತ ಮಂಡಳಿಯ ನಿರ್ದೇಶಕರುಗಳು, ಷೇರುದಾರರು, ಚಿಕ್ಕನಾಯಕನಹಳ್ಳಿ ಯೋಜನಾಧಿಕಾರಿಗಳಾದ ಪ್ರೇಮಾನಂದ್, ಚಿಕ್ಕನಾಯಕನಹಳ್ಳಿ-2 ಯೋಜನಾಧಿಕಾರಿಗಳ ರಾಮಚಂದ್ರ, ಸಾವಯವ ಕೃಷಿಕರಾದ ಶ್ರೀ ಗುರು, ವಲಯ ಮೇಲ್ವಿಚಾರಕರು, ಕೃಷಿ ಮೇಲ್ವಿಚಾರಕರು, ಕಂಪನಿಯ ಸಿಬ್ಬಂದಿಗಳು, ಸೇವಾ ಪ್ರತಿನಿಧಿಗಳು,ವಿಎಲ್‌ಇಗಳು, ಪ್ರಗತಿಪರ ರೈತರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಂಪನಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಷೇರುದಾರರನ್ನು ಗೌರವಿಸಲಾಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ