ಕಣ್ಣೀರ ಕಥೆ: ಸೌಲಭ್ಯಗಳ ಕೊರತೆಯಿಂದ ನಲುಗಿದ 70ರ ಹರೆಯದ ಕರಿಯಮ್ಮ ಅಜ್ಜಿ ------------------------ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರು ಹೋಬಳಿಯ ಗಾಣಧಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಸೋಮನಹಳ್ಳಿ ಎಸ್.ಸಿ. ಕಾಲೋನಿಯ ಕರಿಯಮ್ಮ ಅಜ್ಜಿ (70) ಇಂದಿಗೂ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದು ಅಜ್ಜಿಯ ಕಣ್ಣೀರಿನ ಕಥೆ, ನಮ್ಮ ಆಡಳಿತ ವ್ಯವಸ್ಥೆಯ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯ : ಈ ವೃದ್ಧಾಪ್ಯದಲ್ಲಿ ಅಜ್ಜಿಗೆ ಯಾವುದೇ ರೀತಿಯ ಸರಕಾರಿ ಸೌಲಭ್ಯಗಳು ದೊರೆತಿಲ್ಲ ಎನ್ನಲಾಗಿದ್ದು ಮತದಾನದ ಹಕ್ಕು ಮಾತ್ರ ದೊರೆತಿದ್ದು, ಜೀವನಕ್ಕೆ ಅಗತ್ಯವಾದ ಇತರೆ ಎಲ್ಲಾ ಹಕ್ಕುಗಳನ್ನು ಪಡೆಯಲು ಅಧಿಕಾರಿಗಳು ನಿರ್ಲಕ್ಷ್ಯದಿಂದ ವಿಫಲವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ವಸತಿ, ಶುದ್ಧ ಕುಡಿಯುವ ನೀರು, ವಯೋವೃದ್ಧ ಪಿಂಚಣಿ ಅಥವಾ ವಿಧವಾ ವೇತನ, ಶೌಚಾಲಯ ಮತ್ತು ಸರ್ಕಾರದ ಗೃಹಲಕ್ಷ್ಮಿ, ಅನ್ನಭಾಗ್ಯ, ನಾರಿಶಕ್ತಿ ಮುಂತಾದ ಪ್ರಮುಖ ಯೋಜನೆಗಳಿಂದ ಈ ಅಜ್ಜಿ ವಂಚಿತರಾಗಿರುವುದು ತೀವ್ರ ಕಳವಳಕಾರಿ ಸಂಗತಿಯಾಗಿದೆ. ದಾಖಲೆಗಳ ಕೊರತೆಯೇ ಸಮಸ್ಯೆಯೇ : ಅಜ್ಜಿಯ ಬಳಿ ಗುರುತಿನ ಚೀಟಿಗಳಾದ ರೇಷನ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಆಧಾರ್ ಕಾರ್ಡ್‌ಗಳೂ ಇಲ್ಲ. ಅವರ ಗಂಡ ನಿಧನರಾದ ನಂತರ ರೇಷನ್ ಕಾರ್ಡ್ ರದ್ದುಗೊಂಡಿದೆ. ಮಕ್ಕಳು ಇಲ್ಲದ ಅಜ್ಜಿ, ನೆರೆಹೊರೆಯವರ ಸಹಾಯದಿಂದ ದಿನ ದೂ...
Huliyar Babu's NEWS
📰 ಹುಳಿಯಾರು ಸೇರಿದಂತೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸ್ಥಳಿಯ ಸುದ್ದಿ ಸಮಾಚಾರದ ಬ್ಲಾಗ್........ ✍️ನರೇಂದ್ರಬಾಬು ಹುಳಿಯಾರು-📞9448760070