ಭಯೋತ್ಪಾದಕರಿಂದ ದೇಶ ರಕ್ಷಿಸಲು ವಿದ್ಯಾರ್ಥಿಗಳು ಕಂಕಣಬದ್ಧರಾಗಬೇಕು:ಕೆಎಸ್ಕೆ ------------------------------------------------ ಭಯೋತ್ಪಾದನೆಯು ಇಂದು ರಾಷ್ಟೀಯ ಪಿಡುಗಾಗಿ ಪರಿಣಮಿಸುತ್ತಿದ್ದು ಇದರಿಂದ ದೇಶವನ್ನು ರಕ್ಷಿಸಲು ವಿದ್ಯಾರ್ಥಿಗಳು ಕಂಕಣಬದ್ಧರಾಗಬೇಕು ಎಂದು ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಅವರು ಕರೆ ನೀಡಿದರು. ಹುಳಿಯಾರು ಸಮೀಪದ ಬಳ್ಳೆಕಟ್ಟೆ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಶಾಲೆಯ ಏರ್ಪಡಿಸಿದ್ದ 61 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರನಾಯಕರ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು. ಸಂವಿಧಾನವನ್ನು ಗೌರವಿಸಿ, ಪ್ರಜಾಪ್ರಭುತ್ವಕ್ಕೆ ತಲೆಬಾಗಿ ದೇಶದ ಸರ್ವತೋಮುಖ ಅಭಿವೃದ್ಧಿ ಮಾಡುವಲ್ಲಿ ಭಾರತವು ವಿಶ್ವದಲ್ಲಿಯೇ ದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಿದೆ. ಎಲ್ಲಾ ಜಾತಿ, ಪಂಗಡ, ಬಡವ ಶ್ರೀಮಂತ ಎಂಬ ಬೇದಬಾವ ತೋರದೆ, ಎಲ್ಲಾ ಧರ್ಮಗಳ ಆಚರಣೆಗೆ ಸಮಾನ ಅವಕಾಶ ಕಲ್ಪಿಸುವಲ್ಲಿ ಭಾರತ ದೇಶವು ಇತರ ರಾಷ್ಟ್ರಗಳಿಗೆ ಮಾದರಿಯಾಗಿದೆ ಎಂದು ವಿವರಿಸಿದರು. ಭಾರತ ದೇಶವು ಆಥರ್ಿಕರಂಗ, ವಿಜ್ಞಾನರಂಗ, ಸಾಂಸ್ಕೃತಿಕರಂಗದಲ್ಲಿ ಬಹು ದೊಡ್ಡ ಸಾಧನೆ ಮಾಡುತ್ತಿರುವುದನ್ನು ಇತರ ರಾಷ್ಟ್ರಗಳು ಸಹಿಸಲಾಗದೆ ನಮ್ಮ ದೇಶವನ್ನು ತಮ್ಮ ಕಪಿಮುಷ್ಠಿಯಲ್ಲಿ ಹಿಡಿದಿಟ್ಟುಕೊಳ್ಳುವ ದುರುದ್ದೇಶದಿಂದ ಭಯೋತ್ಪಾದನ ಚಟುವಟಿಕೆಗಳಿಗೆ ಮುಂದಾಗುತ್ತಿವೆ. ಈ ನಿಟ್ಟಿನಲ್ಲಿ ಇಂತಹ ದುಷ್ಟಶಕ್ತಿಗಳನ್ನು ತಡೆಯಲು ದೇಶದ ಪ್ರಜೆಗಳು ಸಮರ...
📰 ಹುಳಿಯಾರು ಸೇರಿದಂತೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸ್ಥಳಿಯ ಸುದ್ದಿ ಸಮಾಚಾರದ ಬ್ಲಾಗ್........ ✍️ನರೇಂದ್ರಬಾಬು ಹುಳಿಯಾರು-📞9448760070