
ಭಯೋತ್ಪಾದಕರಿಂದ ದೇಶ ರಕ್ಷಿಸಲು ವಿದ್ಯಾರ್ಥಿಗಳು ಕಂಕಣಬದ್ಧರಾಗಬೇಕು:ಕೆಎಸ್ಕೆ
------------------------------------------------
ಭಯೋತ್ಪಾದನೆಯು ಇಂದು ರಾಷ್ಟೀಯ ಪಿಡುಗಾಗಿ ಪರಿಣಮಿಸುತ್ತಿದ್ದು ಇದರಿಂದ ದೇಶವನ್ನು ರಕ್ಷಿಸಲು ವಿದ್ಯಾರ್ಥಿಗಳು ಕಂಕಣಬದ್ಧರಾಗಬೇಕು ಎಂದು ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಅವರು ಕರೆ ನೀಡಿದರು.
ಹುಳಿಯಾರು ಸಮೀಪದ ಬಳ್ಳೆಕಟ್ಟೆ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಶಾಲೆಯ ಏರ್ಪಡಿಸಿದ್ದ 61 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರನಾಯಕರ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು. ಸಂವಿಧಾನವನ್ನು ಗೌರವಿಸಿ, ಪ್ರಜಾಪ್ರಭುತ್ವಕ್ಕೆ ತಲೆಬಾಗಿ ದೇಶದ ಸರ್ವತೋಮುಖ ಅಭಿವೃದ್ಧಿ ಮಾಡುವಲ್ಲಿ ಭಾರತವು ವಿಶ್ವದಲ್ಲಿಯೇ ದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಿದೆ. ಎಲ್ಲಾ ಜಾತಿ, ಪಂಗಡ, ಬಡವ ಶ್ರೀಮಂತ ಎಂಬ ಬೇದಬಾವ ತೋರದೆ, ಎಲ್ಲಾ ಧರ್ಮಗಳ ಆಚರಣೆಗೆ ಸಮಾನ ಅವಕಾಶ ಕಲ್ಪಿಸುವಲ್ಲಿ ಭಾರತ ದೇಶವು ಇತರ ರಾಷ್ಟ್ರಗಳಿಗೆ ಮಾದರಿಯಾಗಿದೆ ಎಂದು ವಿವರಿಸಿದರು. ಭಾರತ ದೇಶವು ಆಥರ್ಿಕರಂಗ, ವಿಜ್ಞಾನರಂಗ, ಸಾಂಸ್ಕೃತಿಕರಂಗದಲ್ಲಿ ಬಹು ದೊಡ್ಡ ಸಾಧನೆ ಮಾಡುತ್ತಿರುವುದನ್ನು ಇತರ ರಾಷ್ಟ್ರಗಳು ಸಹಿಸಲಾಗದೆ ನಮ್ಮ ದೇಶವನ್ನು ತಮ್ಮ ಕಪಿಮುಷ್ಠಿಯಲ್ಲಿ ಹಿಡಿದಿಟ್ಟುಕೊಳ್ಳುವ ದುರುದ್ದೇಶದಿಂದ ಭಯೋತ್ಪಾದನ ಚಟುವಟಿಕೆಗಳಿಗೆ ಮುಂದಾಗುತ್ತಿವೆ. ಈ ನಿಟ್ಟಿನಲ್ಲಿ ಇಂತಹ ದುಷ್ಟಶಕ್ತಿಗಳನ್ನು ತಡೆಯಲು ದೇಶದ ಪ್ರಜೆಗಳು ಸಮರ ಸಾರಿ ತಮ್ಮ ಸುತ್ತಮುತ್ತಲ ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ಸರ್ಕಾರಕ್ಕೆ ಮಾಹಿತಿ ತಿಳಿಸಿ ಹತ್ತಿಕ್ಕಲು ಮುಂದಾಗಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳಾದ ಆಶಾ, ಅನ್ನಪೂರ್ಣ, ಕೀತರ್ಿ, ಸೋಮೇಶ್, ಇಮ್ರಾಝ್ ಅಹಮದ್, ಸಿಂಚನ, ಭರತ್, ಶಮಾಝ್ ಅಹಮದ್, ದೀಪಶ್ರೀ ಅವರು ಗಣರಾಜ್ಯೋತ್ಸವದ ಬಗ್ಗೆ ಮಾತನಾಡಿದರು. ಶಿಕ್ಷಕಿ ಜಿ.ಎಸ್.ಕವಿತಾ ಅವರು ದೇಶದ ಇತಿಹಾಸದ ಬಗ್ಗೆ ತಿಳಿಸಿದರು. ಅಪೂರ್ವ ಸಂಗಡಿಗರು ದೇಶಭಕ್ತಿಗೀತೆ ಹಾಡಿದರು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಸಿದ್ಧಶೀ ಕ್ಲಿನಿಕ್ನ ಡಾ.ವೈ.ಜಿ.ಸಿದ್ಧರಾಮಯ್ಯ ಅವರು ಧ್ವಜಾರೋಹಣ ನೆರವೇರಿಸಿದರು. ಶ್ರೀಮತಿ ಕವಿತಾಕಿರಣ್ ಅವರು ಅಧ್ಯಕ್ಷತೆ ವಹಿಸಿದ್ದರು, ಮುಖ್ಯ ಶಿಕ್ಷಕ ಬಿ.ಸಿ.ಗಿರೀಶ್, ವೈದ್ಯೆ ಉಮಾಸಿದ್ಧರಾಮಯ್ಯ, ನಿವೃತ್ತ ಶಿಕ್ಷಕ ಜಗಧೀಶ್, ಏಜೆಂಟ್ ಗಂಗಾಧರ್ ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಜಿ.ಎಸ್.ಅಮೃತ ಅವರ ನಿರೂಪಣೆಯಲ್ಲಿ ಎಚ್.ಎ.ಸೌರಭ ಸ್ವಾಗತಿಸಿದರು, ಕೆ.ಅಮಿತ್ ಹಾಗೂ ಶಾಹಿದ್ ಅವರು ವಂದಿಸಿದರು.
ಇದಕ್ಕೆ ಸಂಬಂಧಿಸಿದ ಪೋಟೊವನ್ನು ಮೇಲ್ಭಾಗದಲ್ಲಿ ವೀಕ್ಷಿಸಿ.ಯಾರಿದ್ದಾರೆ ಗೊತ್ತಾ
ಹುಳಿಯಾರು ಸಮೀಪದ ಬಳ್ಳೆಕಟ್ಟೆ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಶಾಲೆಯ ಏರ್ಪಡಿಸಿದ್ದ 61 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಅವರು ಮಾತನಾಡಿದರು. ಡಾ.ವೈ.ಜಿ.ಸಿದ್ಧರಾಮಯ್ಯ, ಶ್ರೀಮತಿ ಕವಿತಾಕಿರಣ್, ಬಿ.ಸಿ.ಗಿರೀಶ್, ಉಮಾಸಿದ್ಧರಾಮಯ್ಯ ಇದ್ದಾರೆ.
ಇದಕ್ಕೆ ಸಂಬಂಧಿಸಿದ ಪೋಟೊವನ್ನು ಮೇಲ್ಭಾಗದಲ್ಲಿ ವೀಕ್ಷಿಸಿ.ಯಾರಿದ್ದಾರೆ ಗೊತ್ತಾ
ಹುಳಿಯಾರು ಸಮೀಪದ ಬಳ್ಳೆಕಟ್ಟೆ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಶಾಲೆಯ ಏರ್ಪಡಿಸಿದ್ದ 61 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಅವರು ಮಾತನಾಡಿದರು. ಡಾ.ವೈ.ಜಿ.ಸಿದ್ಧರಾಮಯ್ಯ, ಶ್ರೀಮತಿ ಕವಿತಾಕಿರಣ್, ಬಿ.ಸಿ.ಗಿರೀಶ್, ಉಮಾಸಿದ್ಧರಾಮಯ್ಯ ಇದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ