
ಬೆಂಕಿರೋಗ ನಿರೋಧಕ ಬಾಂಗ್ಲಾ ಭತ್ತ ಬೆಳೆಯಲು ಕರೆ
-------------------------------
ಹುಳಿಯಾರು: ಕೊನೇಹಳ್ಳಿ ಕೃಷಿ ವಿಜ್ಞಾನ ಕೇಂದ್ರವು ಹುಳಿಯಾರು ಹೋಬಳಿಯ ಕಲ್ಲಹಳ್ಳಿ ಗ್ರಾಮದ ಪ್ರಗತಿಪರ ರೈತ ಮಲ್ಲೇಶಯ್ಯನವರ ತೋಟದಲ್ಲಿ ಬೆಂಕಿರೋಗ ನಿರೋಧಕ ಬಾಂಗ್ಲಾ ಭತ್ತ ಬೆಳೆಯ ಕ್ಷೇತ್ರೋತ್ಸವ ನಡೆಸಿತು. ಕೊನೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ವೈ.ಎನ್.ಶಿವಲಿಂಗಯ್ಯನವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಇತ್ತೀಚೆಗೆ ಭತ್ತದ ಬೆಳೆಗೆ ಬೆಂಕಿ ರೋಗ ಅಧಿಕವಾಗಿ ಕಾಣಿಸಿಕೊಳ್ಳುತ್ತಿದ್ದು ಇದರಿಂದ ಮುಕ್ತಿಯೊಂದಲು ರೈತರು ಬಿ.ಆರ್.2655 ಬೆಂಕಿರೋಗ ನಿರೋಧಕ ಭತ್ತದ ತಳಿಯನ್ನು ಬೆಳೆಯಲು ಸಲಹೆ ನೀಡಿದರು. ಈ ಬೆಂಕಿರೋಗ ನಿರೋಧಕ ಬಾಂಗ್ಲಾ ಭತ್ತದ ತಳಿಯು 130 ರಿಂದ 135 ದಿನಗಳೊಳಗೆ ಕಟಾವಿಗೆ ಬರಲಿದ್ದು ಪ್ರತಿ ಎಕರೆಗೆ 28 ರಿಂದ 30 ಕ್ವಿಂಟಲ್ ಇಳುವರಿ ಪಡೆಯಬಹುದು ಎಂದು ತಿಳಿಸಿದರು. ಪ್ರಗತಿಪರ ರೈತ ಮಲ್ಲೇಶಯ್ಯ ಅವರು ಮಾತನಾಡಿ ಬಾಂಗ್ಲಾ ಭತ್ತ ಹೆಚ್ಚು ಹುಲ್ಲು ಹಾಗೂ ಉತ್ತಮ ಗುಣ ಮಟ್ಟದ ಕಾಳು ಕೊಡುವ ತಳಿಯಾಗಿದೆ ಎಂದು ತಿಳಿಸಿದರು. ಸಾವಯವ ಕೃಷಿಕರಾದ ಅಣೆಕಟ್ಟೆ ರಘುರಾಂ, ಬೀಮಸಂದ್ರ ವಿನೋದ್, ರಂಗನಕೆರೆ ವಿರೂಪಾಕ್ಷಯ್ಯ, ಬಿ.ಟಿ.ಕರಿಯಪ್ಪ, ಡಿ.ಕರಿಯಪ್ಪ, ಬಿ.ಎನ್.ಕುಮಾರ ಸ್ವಾಮಿ, ವಾಸು ಮತ್ತಿತರರು ಭಾಗವಹಿಸಿದ್ದರು.ಫೋಟೊದಲ್ಲಿ ಯಾರ್ಯಾರಿದ್ದಾರೆ ಗೊತ್ತಾ?ಹುಳಿಯಾರು ಹೋಬಳಿಯ ಕಲ್ಲಹಳ್ಳಿ ಗ್ರಾಮದ ಪ್ರಗತಿಪರ ರೈತ ಮಲ್ಲೇಶಯ್ಯನವರ ತೋಟದಲ್ಲಿ ಏರ್ಪಡಿಸಿದ್ದ ಬೆಂಕಿರೋಗ ನಿರೋಧಕ ಬಾಂಗ್ಲಾ ಭತ್ತ ಬೆಳೆಯ ಕ್ಷೇತ್ರೋತ್ಸವದಲ್ಲಿ ಡಾ.ವೈ.ಎನ್.ಶಿವಲಿಂಗಯ್ಯ, ಅಣೆಕಟ್ಟೆ ರಘುರಾಂ, ಬೀಮಸಂದ್ರ ವಿನೋದ್, ರಂಗನಕೆರೆ ವಿರೂಪಾಕ್ಷಯ್ಯ, ಬಿ.ಟಿ.ಕರಿಯಪ್ಪ, ಡಿ.ಕರಿಯಪ್ಪ ಮತ್ತಿತರರು ಇದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ