ಹೊನ್ನಮ್ಮಳ ಹತ್ಯೆ ಪೈಶಾಚಿಕ ಕೃತ್ಯ:ಸಚಿವ ಸುರೇಶ್ ಕುಮಾರ್ @ ಪ್ರಕರಣದಲ್ಲಿ ಎಎಸ್ಐ ಭಾಗಿಯಾಗಿದಲ್ಲಿ ಕೆಲಸದಿಂದ ವಜಾ @ 18 ಆರೋಪಿಗಳ ಬಂಧನ -------------------------------------------------------- ಹುಳಿಯಾರು: ಕಡೆ ಕ್ಷಣದಲ್ಲಿ ಗುಟುಕು ನೀರಿಗಾಗಿ ಮೊರೆಯಿಡುತ್ತಿದ್ದ ಹೊನ್ನಮ್ಮಳನ್ನು ಚರಂಡಿ ರಸ್ತೆಯಲ್ಲಿ ಎಳೆದಾಡಿ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವುದು ಮೈ ಜುಮ್ ಎನ್ನಿಸುವ ಪೈಶಾಚಿಕ ಕೃತ್ಯವಾಗಿದ್ದು ಇದನ್ನು ಆಡಳಿತ ಎಂದೂ ಸಹಿಸುವುದಿಲ್ಲ ಎಂದು ಕಾನೂನು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯಿಸಿದರು. ದಲಿತ ಬಿಜೆಪಿ ನಾಯಕಿ ಹೊನ್ನಮ್ಮಳ ಹತ್ಯೆ ಸಂಬಂಧ ಭಾನುವಾರ ಗೋಪಾಲಪುರಕ್ಕೆ ಭೇಟಿ ನೀಡಿ ಘಟನೆಯ ಪ್ರತ್ಯಕ್ಷ ಸಾಕ್ಷಿ ಮೀನಾಕ್ಷಮ್ಮ ಅವರಿಂದ ಘಟನಾ ಮಾಹಿತಿ ಪಡೆದು ನಂತರ ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಮನೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹೊನ್ನಮ್ಮಳ ಹತ್ಯೆಯನ್ನು ಜನತೆ, ಸಮಾಜ, ಹಾಗೂ ಆಡಳಿತ ಕ್ಷಮಿಸಲಾಗದ ಘೋರ ಕೃತ್ಯವಾಗಿದ್ದು ಆಕೆಯನ್ನು ಹತ್ಯೆಗೈದವರ ಮನದಲ್ಲಿ ಎಂತಹ ರಾಕ್ಷಸ ಪ್ರವೃತ್ತಿ ಮನೆಮಾಡಿತ್ತು ಎಂದು ಊಹಿಸಲು ಅಸಾಧ್ಯ ಎಂದರು. ಲಭ್ಯ ಮಾಹಿತಿಯಂತೆ ಅಮಾನುಷವಾಗಿ ಹತ್ಯೆಯಾದ ಹೊನ್ನಮ್ಮಳ ಪ್ರಕರಣದಲ್ಲಿ ಮೇಲ್ನೋಟಕ್ಕೆ ಹಂದನಕೆರೆ ಎಎಸ್ಐಗಳು ಪ್ರಚೋದನೆ ನೀಡಿ ಅಪರಾಧದಲ್ಲಿ ಭಾಗಿಯಾಗಿರುವ ವರ್ತನೆಯಿದ್ದು ತನಿಖೆಯಲ್ಲಿ ಇವರು ಭಾಗಿಯಾಗಿರುವುದು ಸಾಬೀತಾದಲ್ಲಿ ಈಗಾಗ...
📰 ಹುಳಿಯಾರು ಸೇರಿದಂತೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸ್ಥಳಿಯ ಸುದ್ದಿ ಸಮಾಚಾರದ ಬ್ಲಾಗ್........ ✍️ನರೇಂದ್ರಬಾಬು ಹುಳಿಯಾರು-📞9448760070