ವಿಷಯಕ್ಕೆ ಹೋಗಿ

ಕೊಲೆ ಘಟನೆ ಹಿಂದೆ ರಾಜಕೀಯ ಷಡ್ಯಂತ್ರ : ಮಾಜಿ ಶಾಸಕ ಕೆ.ಎಸ್.ಕೆ.






ಕೊಲೆ ಘಟನೆ ಹಿಂದೆ ರಾಜಕೀಯ ಷಡ್ಯಂತ್ರ : ಮಾಜಿ ಶಾಸಕ ಕೆ.ಎಸ್.ಕೆ.
-------------------- ----------------------------------------
ಹೊನ್ನಮ್ಮಳ ಹತ್ಯೆಯ ಹಿಂದೆ ರಾಜಕೀಯ ಷಡ್ಯಂತ್ರವಿದ್ದು ಇದೊಂದು ಪೂರ್ವ ನಿಯೋಜಿತ ಕೃತ್ಯವಾಗಿದ್ದು ಇದರ ಹಿಂದೆ ಜೆಡಿಎಸ್ ಮುಖಂಡರ ಕೈವಾಡವಿದೆ ಎಂದು ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಗಂಭೀರ ಆರೋಪ ಮಾಡಿದರು.
ಹುಳಿಯಾರಿನ ಪರಿವೀಕ್ಷಣಾ ಮಂದಿರದಲ್ಲಿ ಕಳೆದ ರಾತ್ರಿ ಬಿಜೆಪಿ ಮುಖಂಡೆ ಹೊನ್ನಮ್ಮಳ ಹತ್ಯೆ ಖಂಡಿಸಿಸುವ ಸಲುವಾಗಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ರಾಜಕೀಯವಾಗಿ ಹೊನ್ನಮ್ಮ ಅವರನ್ನು ಮುಗಿಸಲು ಕಳ್ಳತನದ ಹಾಗೂ ಸುಳ್ಳು ಕೇಸು ದಾಕಲಿಸುವ ಮೂಲಕ ಆಕೆಯನ್ನು ಈ ಹಿಂದೆಯೇ ಮಾನಸಿಕವಾಗಿ ಕೊಂದಿದ್ದರು. ತನನ್ನು ಹತ್ಯೆ ಮಾಡಬಹುದೆಂದು ಅನುಮಾನ ಹೊಂದಿದ್ದ ಆಕೆ ಸಿಎಂ, ರಾಜ್ಯಪಾಲ, ಐಜಿಯವರಿಗೂ ಪ್ರಾಣರಕ್ಷಣೆಗೆ ಮನವಿ ಮಾಡಿದ್ದು ಹಂದನಕೆರೆ ಪೊಲೀಸ್ ವೈಪಲ್ಯದಿಂದಾಗಿ ಹತ್ಯೆಗೆ ಒಳಗಾದಳು ಎಂದು ವಿಶ್ಲೇಷಿಸಿದ್ದಾರೆ.

ಹಂದನಕೆರೆ ಪೊಲೀಸರ ಮೇಲೆ ಜೆಡಿಎಸ್ ಮುಖಂಡರ ಪ್ರಭಾವದಿಂದಲೇ ಆಕೆ ದೂರು ನೀಡಿದರೂ ಸೂಕ್ತ ರಕ್ಷಣೆ ನೀಡದಿದ್ದೇ ಘಟನೆಗೆ ಕಾರಣವಾಗಿದೆ. ಅಲ್ಲಿನ ಎಎಸ್ಐಗಳಾದ ಕೃಷ್ಣನಾಯ್ಕ ಹಾಗೂ ಗಂಗಾಧರ್ ಅವರುಗಳೇ ಪರೋಕ್ಷವಾಗಿ ಕಾರಣರಾಗಿದ್ದು ಅವರುಗಳನ್ನೇ ಆರೋಪಿಗಳಾಗಿ ದಾಖಲು ಮಾಡುವಂತೆ ಒತ್ತಾಯಿಸಿದರು.

ಒಂಟಿ ಹೆಣ್ಣಿನ ಮೇಲೆ ಬರೋಬ್ಬರಿ ಇಪ್ಪತ್ತು ಮಂದಿ ಹಾರಿಬಿದ್ದು ಕಪಾಳಕ್ಕೆ ಹೊಡೆದು, ಚಪ್ಪಡಿಕಲ್ಲುಗಳನ್ನು ಹಾಕಿ, ಬಟ್ಟೆ ಕಿತ್ತು ಅರೆ ಬೆತ್ತಲೆ ಮಾಡಿ, ರಸ್ತೆಯ ತುಂಬೆಲ್ಲ ಎಳೆದಾಡಿ ಸಾಯಿಸಿರುವುದು ಮೃಗೀಯ ವರ್ತನೆಯಾಗಿದ್ದು ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು ಎಂದಿದ್ದಾರೆ.

ಸದ್ಯ ಪೊಲೀಸರು ಬಂಧಿಸಿರುವ ಆರೋಪಿಗಳಲ್ಲಿ ಕೆಲವರು ನಿಜವಾದ ಆರೋಪಿಗಳಲ್ಲ. ಅವರು ಕೂಲಿ ಕೆಲಸಕ್ಕೆ ಬಂದಿದ್ದ ಚನ್ನರಾಯಪಟ್ಟಣದ ಮೂಲದವರಾಗಿದ್ದು ಯಾವುದೇ ಒತ್ತಡಕ್ಕೆ ಮಣಿಯದೆ ಎಲ್ಲಾ ಆರೋಪಿಗಳನ್ನು ವಿಳಂಭಮಾಡದೆ ಬಂಧಿಸುವಂತೆ ಆಗ್ರಹಿಸಿದ್ದಾರೆ.

ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವಪ್ರಸಾದ್ ಅವರು ಮಾತನಾಡಿ ರಾಜಕೀಯ ಹಗೆಯೇ ಈ ಹತ್ಯೆಗೆ ಕಾರಣವಾಗಿದ್ದು ಇದು ಸಮಾಜ ತಲೆ ತಗ್ಗಿಸುವ ವಿಚಾರವಾಗಿದೆ. ಹತ್ಯೆಗೊಳಗಾದ ಕುಟುಂಬಕ್ಕೆ ಎಲ್ಲಾ ರೀತಿಯ ರಕ್ಷಣೆ ಹಾಗೂ ನೆರವು ಪಕ್ಷದಿಂದ ನೀಡಲಾಗುತ್ತದೆ ಎಂದರು.

ಬಿಜೆಪಿ ಎಸ್ಸಿ ಘಟಕದ ರಾಜ್ಯ ಪ್ರಧಾನ ಕಾರ್ಯದಶಿ೯ ಗಂಗರಾಜ್ ಅವರು ಮಾತನಾಡಿ ಘಟನೆಯನ್ನು ಖಂಡಿಸಿ ಆರೋಪಿಗಳನ್ನು ಶೀಘ್ರ ಬಂಧಿಸಿ ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.

ಬಿಜೆಪಿ ಎಸ್ಸಿ ಘಟಕದ ರಾಜ್ಯ ಪ್ರಧಾನ ಕಾರ್ಯದಶಿ೯ ಮೋಹನ್ ಅವರು ಮಾತನಾಡಿ ಬಿಜೆಪಿ ಸಕಾ೯ರ ದಲಿತರ ಪರವಿದ್ದು ಮೊದಲಿಂದಲೂ ದಲಿತರ ಸಮಸ್ಯೆಗಳಿಗೆ ಸ್ಪಂಧಿಸುತ್ತಲೇ ಬಂದಿದೆ. ಮುಖ್ಯಮಂತ್ರಿಗಳು ಈಗಾಗಲೇ ಘಟನೆ ಬಗ್ಗೆ ವರದಿ ಪಡೆದು ತ್ವರಿತ ಕ್ರಮಕ್ಕೆ ಆದೇಶಿಸಿದ್ದು ಇದರ ಬಗ್ಗೆ ಯಾವುದೇ ಗೊಂದಲವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಗಂಗಹನುಮಯ್ಯ, ರವಿ, ತಾಲೂಕು ಅಧ್ಯಕ್ಷ ಮಿಲ್ಟ್ರಿ ಶಿವಣ್ಣ, ಹಳೇಮನೆ ಸುರೇಶ್, ಶ್ರೀನಿವಾಸ ಮೂತಿ೯, ಶಿವನಂಜಪ್ಪ, ಬಿ.ಕೆ.ಸದಾಶಿವು ಮತ್ತಿತರರು ಇದ್ದರು.


ಹೊನ್ನಮ್ಮನ ಹತ್ಯೆ ಹಿಂದೆ ಪೊಲೀಸ್ ವೈಪಲ್ಯ: ಪಾವಗಡ ಶ್ರೀರಾಂ
------------------------
ದಲಿತ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವುದು ಜಿಲ್ಲೆಯಲ್ಲಿ ನಡೆದ ಪ್ರಥಮ ಅಮಾನುಷ ಕೃತ್ಯವಾಗಿದ್ದು ಹೊರ ರಾಜ್ಯಗಳಲ್ಲಿ ಕೇಳುತ್ತಿದ್ದ ದಲಿತರ ಹತ್ಯೆ ಈಗ ಮನೆ ಬಾಗಿಲಿಗೆ ಬಂದು ನಿಂತಿದ್ದು ಇದನ್ನು ಮಾದಿಗ ದಂಡೋರ ಖಂಡಿಸುತ್ತದೆ ಎಂದು ರಾಜ್ಯಾಧ್ಯಕ್ಷ ಪಾವಗಡ ಶ್ರೀರಾಂ ತಿಳಿಸಿದರು.
ಹುಳಿಯಾರಿನ ಪರಿವೀಕ್ಷಣಾ ಮಂದಿರದಲ್ಲಿ ಕಳೆದ ರಾತ್ರಿ ದಲಿತ ಮುಖಂಡೆ ಹೊನ್ನಮ್ಮಳ ಹತ್ಯೆ ಖಂಡಿಸಿಸುವ ಸಲುವಾಗಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಪೊಲೀಸ್ ಇಲಾಖೆ ನಿರ್ಲಕ್ಷ್ಯದಿಂದಾಗಿ ಈ ಕೊಲೆ ನಡೆಯಲು ಕಾರಣವಾಗಿದ್ದು ಕೇವಲ ಎಎಸ್ಐಗಳನ್ನು ಅಮಾನತು ಮಾಡಿದರೆ ಸಾಲದು, ಸಂಬಂಧಪಟ್ಟ ಪಿಎಸ್ಐ ಮತ್ತು ಸಿಪಿಐ ಅವರನ್ನು ಡಿಸ್ಮಿಸ್ ಮಾಡಬೇಕು. ನಿಜವಾದ ಕೊಲೆಗಾರರು ರಾಜಕೀಯ ಮುಖಂಡರ ರಕ್ಷಣೆಯಲ್ಲಿದ್ದು ಅವರೆಲ್ಲರನ್ನು ಬಂಧಿಸಬೇಕು ಹಾಗೂ ಎಫ್ಐರ್ ಹಾಗೂ ಚಾಜ್೯ಶೀಟ್ ಹಾಕುವಾಗ ಯಾರೂ ತಪ್ಪಿಸಿಕೊಳ್ಳಲು ಅವಕಾಶವಾಗದಂತೆ ಹಾಕಬೇಕು ಎಂದು ಆಗ್ರಹಿಸಿದರು.
ಹಿರಿಯೂರಿನ ಶ್ರೀಗಳಾದ ಮಾರ್ಕಂಡೇಯ ಮಹಾಮುನಿಗಳು ಮಾತನಾಡಿ ಇತ್ತಿಚೆಗೆ ದಲಿತರ ಮೇಲಿನ ಅತ್ಯಾಚಾರ ನಿರಂತರವಾಗಿದ್ದು ಸಂಘಟನೆಗಳು ಇಬ್ಬಾಗವಾಗದೆ ಎಚ್ಚರ ವಹಿಸಿದಲ್ಲಿ ಇಂತಹ ಘಟನೆಗಳನ್ನು ತಡೆಗಟ್ಟಬಹುದಾಗಿದೆ. ಹೊನ್ನಮ್ಮನವರಿಗೆ ಆಗಿರುವ ಘಟನೆಗಳು ರಾಜ್ಯದಲ್ಲಿ ಮತ್ತೆಲ್ಲೂ ಮರುಕಳಿಸದಂತೆ ಸಕಾ೯ರ ಎಚ್ಚರ ವಹಿಸಬೇಕು ಎಂದರು.

ಹೊಸಕೆರೆ ಮಲ್ಲಿಕಾಜು೯ನ್ ಅವರು ಮಾತನಾಡಿ ಬಿಜೆಪಿ ಸಕಾ೯ರ ಅಧಿಕಾರ ವಹಿಸಿಕೊಂಡು ಅಂಬೇಡ್ಕರ್ ಪೋಟೋವನ್ನು ಕಛೇರಿಯಲ್ಲಿ ತೆಗೆದು ಹಾಕಿದ ದಿನದಿಂದಲೂ ದಲಿತರ ಮೇಲೆ ಒಂದಿಲ್ಲೊಂದು ದೌರ್ಜನ್ಯಗಳು ಆಗುತ್ತಿದೆ. ದಲಿತೆ ಹೊನ್ನಮ್ಮಳ ವಿಚಾರದಲ್ಲೂ ಗೃಹ ಇಲಾಖೆ ಎಚ್ಚರ ವಹಿಸದಿದ್ದ ಕಾರಣ ಹೊನ್ನಮ್ಮನ ಹತ್ಯೆಯಾಗಿದೆ. ಇನ್ನಾದರೂ ಯಡಿಯೂರಪ್ಪನವರೂ ಎಚ್ಚರ ವಹಿಸದಿದ್ದಲ್ಲಿ ಇದಕ್ಕೆ ತಕ್ಕ ದಂಡ ತೆತ್ತ ಬೇಕಾಗುತ್ತದೆ ಎಂದರು.

ಬಹುಜನ ಪಾಟಿ೯ಯ ರಾಜ್ಯ ವಲಯ ಸಂಚಾಲಕ ರಾಜಸಿಂಹ, ತೀರ್ಥಪುರ ಕುಮಾರ್, ಕಂಟಲಗೆರೆ ಸತೀಶ್ ಮಾತನಾಡಿದರು.

ಹೊನ್ನಮ್ಮಳ ಹತ್ಯೆ ಪ್ರಕರಣವನ್ನು ಸಿಓಡಿ ಒಪ್ಪಿಸಿ:ದೊಡ್ಡೇಗೌಡ
--------------------------------
ಹೊನ್ನಮ್ಮಳ ಹತ್ಯೆಯ ಧಾರುಣ ಘಟನೆಯ ಹಿಂದೆ ರಾಜಕಾರಣಿಗಳ ಹಾಗೂ ಅಧಿಕಾರಿಗಳ ಕೈವಾಡವಿದ್ದು ಈ ಪ್ರಕರಣ ತನಿಖೆಯನ್ನು ಸಿಓಡಿಗೆ ಒಪ್ಪಿಸಬೇಕು ಎಂದು ಕನಾ೯ಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಎಂ.ಡಿ.ದೊಡ್ಡೇಗೌಡ ಒತ್ತಾಯಿಸಿದ್ದಾರೆ.
ಹುಳಿಯಾರಿನ ಪರಿವೀಕ್ಷಣಾ ಮಂದಿರದಲ್ಲಿ ಕಳೆದ ರಾತ್ರಿ ದಲಿತ ಮುಖಂಡೆ ಹೊನ್ನಮ್ಮಳ ಹತ್ಯೆ ಖಂಡಿಸಿಸುವ ಸಲುವಾಗಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ಈ ಹಿಂದೆ ಹೊನ್ನಮ್ಮ ಕಂಪ್ಲೇಟ್ ನೀಡಿದ್ದರೂ ಸಹ ಹಂದನಕೆರೆ ಎ.ಎಸ್.ಐ ಗಳು ದಾಖಲಿಸಿಕೊಂಡಿಲ್ಲ. ಅಲ್ಲದೆ, ಘಟನೆ ವಿಷಯ ತಿಳಿದಿದ್ದರೂ ಮೇಲಾಧಿಕಾರಿಗಳಿಗೆ ತಿಳಿಸದೆ ತಾವೂ ರಕ್ಷಣೆ ನೀಡದೆ ನಿರ್ಲಕ್ಷ್ಯ ವಹಿಸದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದು ತನಿಖೆಯಿಂದ ಮಾತ್ರ ಸತ್ಯ ಸಂಗತಿ ಹೊರ ಬೀಳಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಹೊನ್ನಮ್ಮಳ ಹತ್ಯೆಗೆ ಸಂಬಂಧಿಸಿದಂತೆ ಆರೋಪಿಗಳಿಗೆ ಕಾನೂನು ರೀತಿ ಉಗ್ರಶಿಕ್ಷೆ ಆಗಬೇಕಲ್ಲದೆ, ಅವರುಗಳನ್ನು ಗಡಿಪಾರು ಮಾಡಬೇಕು ಹಾಗೂ ಮೃತರ ಕುಟುಂಬಕ್ಕೆ ಕಾನೂನು ರಕ್ಷಣೆ, ಪರಿಹಾರ ಸೌಲಭ್ಯದ ಜೊತೆಗೆ ಆಕೆಯ ಪುತ್ರನಿಗೆ ಸಕಾ೯ರಿ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದರು.
ಮುಖ್ಯಮಂತ್ರಿಗಳು ಈ ಹಿಂದೆಯೇ ದಲಿತರ ಮೇಲೆ ಹಲ್ಲೆಯಾದಲ್ಲಿ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಅವರನ್ನು ಹೊಣೆ ಮಾಡುವುದಾಗಿ ಹೇಳಿಕೆಗಳನ್ನು ನೀಡಿದರು. ಆದರೆ ಆ ಹೇಳಿಕೆಗಳು ಕೇವಲ ಪತ್ರಿಕೆಗಳಿಗೆ ಮಾತ್ರ ಸೀಮಿತವಾಗಿದ್ದು ಕೂಡಲೇ ಈ ಸಂಬಂಧ ಸಕಾ೯ರಿ ಸುತ್ತೋಲೆ ಹೊರಡಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ತಾಲೂಕು ಸಂಚಾಲಕ ನಾರಾಯಣ್, ಸಂಘಟನಾ ಸಂಚಾಲಕ ಪಿ.ಕೃಷ್ಣಮೂತಿ೯, ಜಿಲ್ಲಾ ಖಜಾಂಜಿ ನಾರಾಯಣ್ ರಾಜ್, ಬಿ.ಎಸ್.ಮುನಿಸ್ವಾಮಿ, ಎಚ್.ಮಹಾಲಿಂಗಪ್ಪ ಹಾಗೂ ನಂದಿಹಳ್ಳಿ ಕೆಂಚಪ್ಪ ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹುಳಿಯಾರು ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 96.59 ಶೇಕಡವಾರು ಫಲಿತಾಂಶ

ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ-ವಾಣಿಜ್ಯ- ವಿಜ್ಞಾನ ವಿಭಾಗದಿಂದ ಒಟ್ಟು 272 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಆ ಪೈಕಿ 263 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಕಾಲೇಜಿಗೆ ಶೇಕಡ 96.59 ಫಲಿತಾಂಶ ಲಭಿಸಿದೆ. ವಾಣಿಜ್ಯ ವಿಭಾಗದಲ್ಲಿ 98 ವಿದ್ಯಾರ್ಥಿಗಳ ಪೈಕಿ 97 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 99 % ಫಲಿತಾಂಶ ಲಭಿಸಿದೆ. ಕಲಾವಿಭಾಗದಲ್ಲಿ 92 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 88 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 95.65 % ಫಲಿತಾಂಶ ಲಭಿಸಿದರೆ, ವಿಜ್ಞಾನ ವಿಭಾಗದಲ್ಲಿ 82 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 78 ವಿದ್ಯಾರ್ಥಿಗಳು ಉತ್ತೀರ್ಣರಾಗಿ 95.12 ಶೇಕಡವಾರು ಫಲಿತಾಂಶ ಲಭಿಸಿದೆ. Rakesh ದಿವ್ಯಶ್ರೀ ವಾಣಿಜ್ಯ ವಿಭಾಗದಲ್ಲಿ ದಿವ್ಯಶ್ರೀ ಹಾಗೂ ರಾಕೇಶ್ 577 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನಕ್ಕೆ ಭಾಜನರಾದರೆ, Dayana ಹಾಗೂ ವೆಂಕಟೇಶಮೂರ್ತಿ 574 ಅಂಕ ಗಳಿಸುವ ಮೂಲಕ ದ್ವಿತೀಯ ಸ್ಥಾನ ಮತ್ತು ದಿಲೀಪ್ ಹಾಗೂ ವೀಣಾ 572 ಅಂಕಗಳಿಸುವ ಮೂಲಕ ತೃತೀಯ ಸ್ಥಾನ ಪಡೆದಿದ್ದಾರೆ. ಮಹಾಲಕ್ಷ್ಮಿ ಕಲಾವಿಭಾಗದಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈಯಾಗಿದ್ದು ಮಹಾಲಕ್ಷ್ಮಿ 575 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದರೆ, 570 ಅಂಕಗಳಿಸಿರುವ ಗೀತಾ ಹಾಗೂ ರೂಪ ದ್ವಿತೀಯ ಸ್ಥಾನ ಹಾಗೂ 564 ಅಂಕ ಗಳಿಸಿದ ಕಾವ್ಯ ತೃತೀಯ ಸ್

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ

ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಪಕ್ವಾಡ್ ಕಾರ್ಯಕ್ರಮ

ಚಿಕ್ಕನಾಯಕನಹಳ್ಳಿ ತಾಲೋಕ್ ಮತಿಘಟ್ಟ 01 ವೃತ್ತದ ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ  ಪೋಷಣ್ ಪಕ್ವಾಡ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜಿಲ್ಲಾ ಪೋಷಣ್ ಅಧಿಕಾರಿಯಾದ ಶ್ರೀಮತಿ ರಂಜಿತಾ ಹಾಗೂ ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ವೃತ್ತದ ಮೇಲ್ವಿಚಾರಕರಾದ ಶ್ರೀ ಮತಿ ಶಾರದಮ್ಮನವರು ಬಾಲವಿಕಾಸ ಸಮಿತಿ ಅಧ್ಯಕ್ಷರಾದ ಶ್ರೀ ಮತಿ ಗೀತಾ ಮುಖ್ಯ ಶಿಕ್ಷಕರಾದ ನಾಗರತ್ನಮ್ಮ ಹಾಗೂ ಅರೋಗ್ಯಧಿಕಾರಿ ದಿಲೀಪ್ ರವರು  ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಅಂಗನವಾಡಿ ಕಾರ್ಯಕರ್ತೆ ಗಂಗಮ್ಮ ಸ್ವಾಗತ ಕೋರಿದರು. ಶ್ರೀಮತಿ ರಂಜಿತಾರವರು ಪೋಷಣ್ ಪಾಕ್ವಾಡ್ ದ ಮಹತ್ವವನ್ನು ತಿಳಿಸಿ ಸ್ಥಳೀಯವಾಗಿ ಸಿಗುವ ಆಹಾರಗಳಾದ ಸೊಪ್ಪು ತರಕಾರಿ ಸಿರಿಧಾನ್ಯಗಳ ಬಳಕೆ ಮಾಡುವುದರಿಂದ ಅಪೌಷ್ಠಿಕತೆ ಹೋಗಲಾಡಿಸಲು ಮಾರ್ಗಸೂಚಿ ನೀಡಿದರು. ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ಮಕ್ಕಳ ತೂಕ- ಎತ್ತರ ಹಾಗೂ ಸಮುದಾಯದ ಫಲಾನುಭವಿಗಳಿಗೆ ಪೋಷಣ್ ಪಕ್ವಾಡ್ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಕಾರ್ಯಕರ್ತೆಯಾದ ಸುಮಲತಾ ವಂದಸಿದರು. ಕಾರ್ಯಕ್ರಮದಲ್ಲಿ ಮತಿಘಟ್ಟ ವೃತ್ತದ ಎಲ್ಲಾ ಕಾರ್ಯಕರ್ತೆಯರು ಭಾಗವಹಿಸಿದ್ದರು.