ಹೊನ್ನಮ್ಮಳ ಹತ್ಯೆ ಪೈಶಾಚಿಕ ಕೃತ್ಯ:ಸಚಿವ ಸುರೇಶ್ ಕುಮಾರ್
@ ಪ್ರಕರಣದಲ್ಲಿ ಎಎಸ್ಐ ಭಾಗಿಯಾಗಿದಲ್ಲಿ ಕೆಲಸದಿಂದ ವಜಾ @ 18 ಆರೋಪಿಗಳ ಬಂಧನ
--------------------------------------------------------
ಹುಳಿಯಾರು: ಕಡೆ ಕ್ಷಣದಲ್ಲಿ ಗುಟುಕು ನೀರಿಗಾಗಿ ಮೊರೆಯಿಡುತ್ತಿದ್ದ ಹೊನ್ನಮ್ಮಳನ್ನು ಚರಂಡಿ ರಸ್ತೆಯಲ್ಲಿ ಎಳೆದಾಡಿ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವುದು ಮೈ ಜುಮ್ ಎನ್ನಿಸುವ ಪೈಶಾಚಿಕ ಕೃತ್ಯವಾಗಿದ್ದು ಇದನ್ನು ಆಡಳಿತ ಎಂದೂ ಸಹಿಸುವುದಿಲ್ಲ ಎಂದು ಕಾನೂನು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯಿಸಿದರು.
@ ಪ್ರಕರಣದಲ್ಲಿ ಎಎಸ್ಐ ಭಾಗಿಯಾಗಿದಲ್ಲಿ ಕೆಲಸದಿಂದ ವಜಾ @ 18 ಆರೋಪಿಗಳ ಬಂಧನ
--------------------------------------------------------
ಹುಳಿಯಾರು: ಕಡೆ ಕ್ಷಣದಲ್ಲಿ ಗುಟುಕು ನೀರಿಗಾಗಿ ಮೊರೆಯಿಡುತ್ತಿದ್ದ ಹೊನ್ನಮ್ಮಳನ್ನು ಚರಂಡಿ ರಸ್ತೆಯಲ್ಲಿ ಎಳೆದಾಡಿ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವುದು ಮೈ ಜುಮ್ ಎನ್ನಿಸುವ ಪೈಶಾಚಿಕ ಕೃತ್ಯವಾಗಿದ್ದು ಇದನ್ನು ಆಡಳಿತ ಎಂದೂ ಸಹಿಸುವುದಿಲ್ಲ ಎಂದು ಕಾನೂನು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯಿಸಿದರು.
ದಲಿತ ಬಿಜೆಪಿ ನಾಯಕಿ ಹೊನ್ನಮ್ಮಳ ಹತ್ಯೆ ಸಂಬಂಧ ಭಾನುವಾರ ಗೋಪಾಲಪುರಕ್ಕೆ ಭೇಟಿ ನೀಡಿ ಘಟನೆಯ ಪ್ರತ್ಯಕ್ಷ ಸಾಕ್ಷಿ ಮೀನಾಕ್ಷಮ್ಮ ಅವರಿಂದ ಘಟನಾ ಮಾಹಿತಿ ಪಡೆದು ನಂತರ ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಮನೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹೊನ್ನಮ್ಮಳ ಹತ್ಯೆಯನ್ನು ಜನತೆ, ಸಮಾಜ, ಹಾಗೂ ಆಡಳಿತ ಕ್ಷಮಿಸಲಾಗದ ಘೋರ ಕೃತ್ಯವಾಗಿದ್ದು ಆಕೆಯನ್ನು ಹತ್ಯೆಗೈದವರ ಮನದಲ್ಲಿ ಎಂತಹ ರಾಕ್ಷಸ ಪ್ರವೃತ್ತಿ ಮನೆಮಾಡಿತ್ತು ಎಂದು ಊಹಿಸಲು ಅಸಾಧ್ಯ ಎಂದರು.
ಲಭ್ಯ ಮಾಹಿತಿಯಂತೆ ಅಮಾನುಷವಾಗಿ ಹತ್ಯೆಯಾದ ಹೊನ್ನಮ್ಮಳ ಪ್ರಕರಣದಲ್ಲಿ ಮೇಲ್ನೋಟಕ್ಕೆ ಹಂದನಕೆರೆ ಎಎಸ್ಐಗಳು ಪ್ರಚೋದನೆ ನೀಡಿ ಅಪರಾಧದಲ್ಲಿ ಭಾಗಿಯಾಗಿರುವ ವರ್ತನೆಯಿದ್ದು ತನಿಖೆಯಲ್ಲಿ ಇವರು ಭಾಗಿಯಾಗಿರುವುದು ಸಾಬೀತಾದಲ್ಲಿ ಈಗಾಗಲೇ ಅಮಾನತ್ತು ಮಾಡಲಾಗಿರುವ ಇವರನ್ನು ಕೆಲಸದಿಂದಲೇ ತೆಗೆದುಹಾಕಲಾಗುವುದು ಎಂದರು.
ಇದೊಂದು ದಲಿತ ದೌರ್ಜನ್ಯ ಪ್ರಕರಣವಾಗಿದ್ದು ಹತ್ಯೆಗೊಳಗಾದವಳು ಮಹಿಳೆ ಎನ್ನುವುದು ಪ್ರಮುಖವಾಗಿದೆ. ಇಲ್ಲಿಯವರೆವಿಗೆ ಘಟನೆಗೆ ಸಂಬಂಧಿಸಿದಂತೆ 18 ಆರೋಪಿಗಳನ್ನು ಬಂಧಿಸಲಾಗಿದ್ದು ಆಡಳಿತ ಕಡೆಯಿಂದ ಕಟ್ಟುನಿಟ್ಟಾದ ಪ್ರಾಸಿಕ್ಯೂಷನ್ ನಡೆಸಿ ಕಠಿಣ ಶಿಕ್ಷೆಗೆ ಗುರಿಪಡಿಸಲಾಗುವುದು. ತಿಪಟೂರು ಡಿವೈಎಸ್ಪಿಯನ್ನು ತನಿಖಾಧಿಕಾರಿಯನ್ನಾಗಿ ಮಾಡಲಾಗಿದ್ದು ಇವರ ನೇತೃತ್ವದಲ್ಲಿ ಜಿಲ್ಲಾ ಮಟ್ಟದತನಿಖಾ ತಂಡ ರಚಿಸಿದ್ದು ಸಕ್ಷಮ ಅಧಿಕಾರಿಗಳಾಗಿ ಇಬ್ಬರು ಸಿಪಿಐ ಹಾಗೂ ಇಬ್ಬರು ಪಿಎಸ್ಐ ಅವರುಗಳು ಒಳಗೊಂಡಿರುತ್ತಾರೆ. ಉಳಿದ ಆರೋಪಿಗಳ ಪತ್ತೆಗೆ ವ್ಯಾಪಕ ಜಾಲ ಬೀಸಲಾಗಿದೆ ಎಂದರು.
ಮೃತ ಹೊನ್ನಮ್ಮಳ ಕುಟುಂಬದ ಜೀವನಾಂಶಕ್ಕೆ ಈಗಾಗಲೇ 1 ಲಕ್ಷ ರು. ಪರಿಹಾರ ನೀಡಲಾಗಿದ್ದು ಮತ್ತಷ್ಟು ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗಿದೆ. ಮಗನಿಗೆ ಭವಿಷ್ಯದ ದೃಷ್ಠಿಯಿಂದ ಅರ್ಹತೆ ಆಧಾರದ ಮೇಲೆ ಸಕಾ೯ರಿ ಉದ್ಯೋಗ ನೀಡಲು ಸಮಾಜ ಕಲ್ಯಾಣ ಇಲಾಖೆಗೆ ಸೂಚಿಸಿದ್ದು ತಾವೂ ಕೂಡ ಮುಖ್ಯ ಕಾರ್ಯದಶಿ೯ಯೊಂದಿಗೆ ಮಾತನಾಡುವುದಾಗಿ ಹೇಳಿದರು.
ಒಟ್ಟಾರೆ ಕಾನೂನು ಹಿಡಿತದಲ್ಲಿ ತಪ್ಪಿಸಿಕೊಳ್ಳದಂತೆ ಎಲ್ಲಾ ಆರೋಪಿಗಳನ್ನು ಬಂಧಿಸಿ ವಿಕಟ ನಗೆ ನಕ್ಕು ಹೊರ ಬಾರದ ರೀತಿ ಕಠಿಣ ಶಿಕ್ಷೆಗೆ ಒಳಪಡಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್, ಪೊಲೀಸ್ ವರಿಷ್ಠಾಧಿಕಾರಿ ಡಾ.ಪಿ.ಎಸ್.ಹರ್ಷ, ತನಿಖಾಧಿಕಾರಿ ಶಿವರುದ್ರಸ್ವಾಮಿ,ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವಪ್ರಸಾದ್, ತಾ.ಪಂ.ಅಧ್ಯಕ್ಷ ಮಲ್ಲಿಕಾಜು೯ನಯ್ಯ, ತಿಪಟೂರು ಪ್ರಭಾರ ಉಪವಿಭಾಗಾಧಿಕಾರಿ ವಿಜಯಕುಮಾರ್, ತಹಸೀಲ್ದಾರ್ ಟಿ.ಸಿ.ಕಾಂತರಾಜು, ಸಿಪಿಐ ಪಿ.ರವಿಪ್ರಸಾದ್ ಪಿಎಸ್ಐಗಳಾದ ಶಿವಕುಮಾರ್, ಪಾರ್ವತಿ ಯಾದವ್, ವಕೀಲ ಬಿ.ಕೆ.ಸದಾಶಿವು ಮತ್ತಿತರರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ