ಸಹಕಾರ ಸಂಘದಿಂದ ಸಾಲ ನೀಡಿ ಆಥಿ೯ಕ ಸಹಕಾರ ಒದಗಿಸಿ ಕೈಕಸುಬುಗಳಿಗೆ ಉತ್ತೇಜನ ನೀಡುವುದು ತಮ್ಮ ಮುಖ್ಯ ಗುರಿಯಾಗಿದೆ. ಹಾಗಾಗಿ ಸಹಕಾರ ಸಂಘದ ಸಾಲ ಸೌಲಭ್ಯದಿಂದ ವಂಚಿತರಾಗುತ್ತಿರುವ ಗ್ರಾಮಗಳಲ್ಲಿ ಸಾಲ ಸೌಲಭ್ಯ ನೀಡಲು ಒತ್ತು ನೀಡಲಾಗುತ್ತಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರು ತಿಳಿಸಿದರು.
ಹುಳಿಯಾರು ಹೋಬಳಿ ದಸೂಡಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್ ಏರ್ಪಡಿಸಿದ್ದ ವಿವಿಧ ಯೋಜನೆಯ ಸಾಲ ಸೌಲಭ್ಯ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹುಳಿಯಾರು ಹೋಬಳಿ ದಸೂಡಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್ ಏರ್ಪಡಿಸಿದ್ದ ವಿವಿಧ ಯೋಜನೆಯ ಸಾಲ ಸೌಲಭ್ಯ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಚಿನಾಹಳ್ಳಿಯಿಂದ ಸ್ಪಧೆ೯ಇಲ್ಲ:ಮುಂದಿನ ವಿಧಾನಸಭಾ ಚುನಾವಣೆಗೆ ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ಸ್ಪಧಿ೯ಸುತ್ತಾರೆ. ಇದಕ್ಕಾಗಿ ತಾಲೂಕಿನ ಹಳ್ಳಿ ಹಳ್ಳಿ ಸುತ್ತಿ ಸಾಲ ಸೌಲಭ್ಯ ನೀಡುತ್ತಿದ್ದಾರೆ ಎಂಬ ಮಾತು ವಿರೋಧಿ ಗುಂಪು ಹುಟ್ಟು ಹಾಕುತ್ತಿದ್ದು ಇದರಲ್ಲಿ ಯಾವುದೇ ಹುರುಳಿಲ್ಲ. ತಾವು ಯಾವುದೇ ಕಾರಣಕ್ಕೂ ಮಧುಗಿರಿ ಬಿಟ್ಟು ಬೇರೆಲ್ಲೂ ಸ್ಪಧಿ೯ಸುವುದಿಲ್ಲ. ಈ ಬಗ್ಗೆ ಅನಗತ್ಯ ಅನುಮಾನ ಬೇಡ ಎಂದು ರಾಜಣ್ಣ ಅವರು ಸ್ಫಷ್ಠಪಡಿಸಿದರು.
ದಸೂಡಿ ಗ್ರಾಮ ಜಿಲ್ಲೆಯ ಗಡಿ ಗ್ರಾಮವಲ್ಲದೆ ಅತ್ಯಂತ ಹಿಂದುಳಿದ ಗ್ರಾಮವಾಗಿದ್ದು ಆಥಿ೯ಕ ಅಸಮತೋಲನದಿಂದ ಇಲ್ಲಿನ ಜನ ಕಷ್ಟ-ಕಾರ್ಪಣ್ಯದಿಂದ ಮೇಲೆ ಬರಲು ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ ಸಹಕಾರ ಸಂಘದಿಂದ ಸಾಲ ನೀಡಿ ಆಥಿ೯ಕ ಸಹಕಾರ ನೀಡಿ ಕೈಕಸುಬುಗಳಿಗೆ ಉತ್ತೇಜನ ನೀಡುವುದು ತಮ್ಮ ಮುಖ್ಯ ಗುರಿಯಾಗಿದೆ. ಬರುವ 6 ತಿಂಗಳಲ್ಲಿ ಹೈನುಗಾರಿಕೆ ಸಾಲ, ಅಡಿಕೆ ದಾಸ್ತಾನು ಸಾಲ, ವಾಹನ, ಚಿನ್ನಾಭರಣ ಸಾಲ ಹೀಗೆ ವಿವಿಧ ರೀತಿಯಲ್ಲಿ 1 ಕೋಟಿ ರು. ಸಾಲ ನೀಡುವುದಾಗಿ ಘೋಷಿಸಿದರು.
ಚಿ.ನಾ.ಹಳ್ಳಿ ಟಿ.ಎ.ಪಿ.ಎಂ.ಎಸ್ ಅಧ್ಯಕ್ಷ ಲೋಕೇಶ್ ಅವರು ಮಾತನಾಡಿ ಮೂಲ ಸೌಲಭ್ಯಗಳಿಂದ ವಂಚಿತವಾದ ಗ್ರಾಮಗಳಲ್ಲಿ ರೈತರು ಗೊಬ್ಬರ, ಬೀಜ, ಔಷಧಿ ಮತ್ತಿತರ ಕೃಷಿ ಸಲಕರಣೆಗಳಿಗೆ ಸಾಲ ಪಡೆಯಲು ಪತ್ತಿನ ಸಹಕಾರ ಸಂಘ ಅಗತ್ಯ ಎಂದರಲ್ಲದೆ ಸಾಲ ಪಡೆಯುವಾಗ ಇರುವ ಹುಮ್ಮಸ್ಸು ಪ್ರಾಮಾಣಿಕವಾಗಿ ಮರುಪಾವತಿ ಮಾಡುವಲ್ಲಿಯೂ ಸಹ ಇರಬೇಕು ಎಂದರು.
ಡಿಸಿಸಿ ಬ್ಯಾಂಕ್ ಚಿ.ನಾ.ಹಳ್ಳಿ ತಾಲೂಕು ನಿದೇ೯ಶಕ ಸಿಂಗದಹಳ್ಳಿ ರಾಜ್ ಕುಮಾರ್ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಸೂಡಿ ಪ್ರಾ.ಕೃ.ಸ.ಸಂಘದ ಅಧ್ಯಕ್ಷ ಎಂ.ಕೆ.ಕಾರಪ್ಪ ವಹಿಸಿದ್ದರು. ಗ್ರಾಮ ಮಂಚಾಯ್ತಿ ಅಧ್ಯಕ್ಷೆ ರೇಣುಕಮ್ಮ, ರಾಮಕೃಷ್ಣಪ್ಪ, ಜಯರಾಂ, ಈಶ್ವರಪ್ಪ, ನೀಲಕಂಠಪ್ಪ, ಹೊನ್ನಪ್ಪ, ಚಿತ್ತಯ್ಯ, ಲಕ್ಷ್ಮೀದೇವಿ, ಪಿ.ಟಿ.ಅಶ್ವಥನಾರಾಯಣ್, ಗೊಳ್ಳೆನಟ್ಟಿ ಚಿತ್ತಪ್ಪ, ಹನುಮಂತಯ್ಯ, ಜಯಣ್ಣ, ಲಕ್ಷ್ಮಕ್ಕ, ಸಣ್ಣನಿಂಗಮ್ಮ ಮತ್ತಿತರರು ಉಪಸ್ಥಿತರಿದ್ದರು.
ಸುಧಾ ಪ್ರಾಥಿ೯ಸಿದರು. ರಂಗಸ್ವಾಮಿ ಸ್ವಾಗತಿಸಿದರು. ರಂಗಸ್ವಾಮಿ ನಿರೂಪಿಸಿದರು. ಕೃಷ್ಣಪ್ಪ ವಂದಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ