ಗ್ರಾಮದ ಅಭಿವೃದ್ದಿ,ಸ್ವಚ್ಚತೆಯ ಬಗ್ಗೆ ಕಾಳಜಿವಹಿಸಬೇಕಾದ ಗ್ರಾಮ ಪಂಚಾಯ್ತಿಯವರು ಗ್ರಾಮಕ್ಕೆ ಬರುವ ಸೌಲಭ್ಯಗಳಿಗೆ ತೊಡೆರುಕಾಲು ಹಾಕುವುದಲ್ಲದೆ, ಗ್ರಾಮದ ಸ್ವಚ್ಚತೆ ಬಗ್ಗೆ ನಿರ್ಲಕ್ಷ್ಯವಹಿಸಿ ತಮಗೂ ಈ ಗ್ರಾಮಕ್ಕೂ ಸಂಬಂಧವಿಲ್ಲ ಎಂಬಂತೆ ಪಂಚಾಯ್ತಿಯ ಅಧ್ಯಕ್ಷರು ಹಾಗೂ ಕೆಲ ಸದಸ್ಯರು ನಡೆದುಕೊಳ್ಳುತ್ತಿದ್ದಾರೆಂದು ಆರೋಪಿಸಿದ ಹೋಬಳಿಯ ದೊಡ್ಡಬಿದರೆ ಸಾರ್ವಜನಿಕರು ಗುರುವಾರ ಪ್ರತಿಭಟಿಸಿ ಗ್ರಾ.ಪಂ. ಕಾರ್ಯಾಲಕ್ಕೆ ಮುತ್ತಿಗೆ ಹಾಕಿ ಪಿಡಿಓ ಅವರನ್ನು ತರಾಟೆಗೆ ತೆಗೆದುಕೊಂಡರು. ಗ್ರಾ.ಪಂ ಮುಂದೆ ಪ್ರತಿಭಟಿಸುತ್ತಿದ್ದ ಗ್ರಾಮಸ್ಥರ ಮನವೊಲಿಕೆಗೆ ಮುಂದಾದ ಪಿಎಸೈ ರಾಜು. ದೊಡ್ಡಬಿದರೆ ಗ್ರಾಮದಲ್ಲಿ ನೆಪಮಾತ್ರಕ್ಕೆ ಗ್ರಾ.ಪಂ.ಯಿದೆಯೇ ಹೊರತು ಯಾವುದೇ ಅಭಿವೃದ್ದಿ ಕಾರ್ಯಗಳಿಗಾಗಲಿ, ಸರ್ಕಾರ ದಿಂದ ಬರುವ ಸವಲತ್ತುಗಳಿಗಾಗಲಿ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ,ಊರಿನ ಪ್ರತಿಬೀದಿಯ ಚರಂಡಿಗಳ ತುಂಬೆಲ್ಲ ಹೂಳು ತುಂಬಿಕೊಂಡು ಕ್ರಿಮಿಕೀಟಗಳ ಸಂಖ್ಯೆಗೆ ಹೆಚ್ಚಾಗಿವೆ,ಅಲ್ಲದೆ ಬೀದಿ ಬದಿಯ ಕಂಬಗಳಲ್ಲಿ ಬೀದಿದೀಪಗಳಿಲ್ಲದೆ ರಾತ್ರಿ ಸಮಯದಲ್ಲಿ ಸಂಚರಿಸುವುದು ಕಷ್ಟಕರವಾಗಿದೆ.ಈ ಬಗ್ಗೆ ಪಂಚಾಯ್ತಿಯ ಪಿಡಿಓಗೆ ತಿಳಿಸಿದರೆ ಸರಿ ಸರಿ ಮಾಡಿಸುವುದಾಗಿ ಹೇಳಿ ಕೈತೊಳೆದುಕೊಳ್ಳುತ್ತಾರೆ,ತಮ್ಮಿಂದ ಆಯ್ಕೆಯಾದ ಸದಸ್ಯರು ಇತ್ತ ತಿರುಗಿನೋಡುವುದಿಲ್ಲ, ತಮ್ಮ ಗ್ರಾಮಕ್ಕೆ ಬರುವ ಅನೇಕ ಸೌಲಭ್ಯಗಳನ್ನು ಅನುಷ್ಠಾನಗೊಳಿಸದೇ ಇಲ್ಲ ಸಲ್ಲದ ಸಬೂಬ...
📰 ಹುಳಿಯಾರು ಸೇರಿದಂತೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸ್ಥಳಿಯ ಸುದ್ದಿ ಸಮಾಚಾರದ ಬ್ಲಾಗ್........ ✍️ನರೇಂದ್ರಬಾಬು ಹುಳಿಯಾರು-📞9448760070