ಗ್ರಾಮದ ಅಭಿವೃದ್ದಿ,ಸ್ವಚ್ಚತೆಯ ಬಗ್ಗೆ ಕಾಳಜಿವಹಿಸಬೇಕಾದ ಗ್ರಾಮ ಪಂಚಾಯ್ತಿಯವರು ಗ್ರಾಮಕ್ಕೆ ಬರುವ ಸೌಲಭ್ಯಗಳಿಗೆ ತೊಡೆರುಕಾಲು ಹಾಕುವುದಲ್ಲದೆ, ಗ್ರಾಮದ ಸ್ವಚ್ಚತೆ ಬಗ್ಗೆ ನಿರ್ಲಕ್ಷ್ಯವಹಿಸಿ ತಮಗೂ ಈ ಗ್ರಾಮಕ್ಕೂ ಸಂಬಂಧವಿಲ್ಲ ಎಂಬಂತೆ ಪಂಚಾಯ್ತಿಯ ಅಧ್ಯಕ್ಷರು ಹಾಗೂ ಕೆಲ ಸದಸ್ಯರು ನಡೆದುಕೊಳ್ಳುತ್ತಿದ್ದಾರೆಂದು ಆರೋಪಿಸಿದ ಹೋಬಳಿಯ ದೊಡ್ಡಬಿದರೆ ಸಾರ್ವಜನಿಕರು ಗುರುವಾರ ಪ್ರತಿಭಟಿಸಿ ಗ್ರಾ.ಪಂ. ಕಾರ್ಯಾಲಕ್ಕೆ ಮುತ್ತಿಗೆ ಹಾಕಿ ಪಿಡಿಓ ಅವರನ್ನು ತರಾಟೆಗೆ ತೆಗೆದುಕೊಂಡರು.
ಗ್ರಾ.ಪಂ ಮುಂದೆ ಪ್ರತಿಭಟಿಸುತ್ತಿದ್ದ ಗ್ರಾಮಸ್ಥರ ಮನವೊಲಿಕೆಗೆ ಮುಂದಾದ ಪಿಎಸೈ ರಾಜು.
|
ದೊಡ್ಡಬಿದರೆ ಗ್ರಾಮದಲ್ಲಿ ನೆಪಮಾತ್ರಕ್ಕೆ ಗ್ರಾ.ಪಂ.ಯಿದೆಯೇ ಹೊರತು ಯಾವುದೇ ಅಭಿವೃದ್ದಿ ಕಾರ್ಯಗಳಿಗಾಗಲಿ, ಸರ್ಕಾರ ದಿಂದ ಬರುವ ಸವಲತ್ತುಗಳಿಗಾಗಲಿ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ,ಊರಿನ ಪ್ರತಿಬೀದಿಯ ಚರಂಡಿಗಳ ತುಂಬೆಲ್ಲ ಹೂಳು ತುಂಬಿಕೊಂಡು ಕ್ರಿಮಿಕೀಟಗಳ ಸಂಖ್ಯೆಗೆ ಹೆಚ್ಚಾಗಿವೆ,ಅಲ್ಲದೆ ಬೀದಿ ಬದಿಯ ಕಂಬಗಳಲ್ಲಿ ಬೀದಿದೀಪಗಳಿಲ್ಲದೆ ರಾತ್ರಿ ಸಮಯದಲ್ಲಿ ಸಂಚರಿಸುವುದು ಕಷ್ಟಕರವಾಗಿದೆ.ಈ ಬಗ್ಗೆ ಪಂಚಾಯ್ತಿಯ ಪಿಡಿಓಗೆ ತಿಳಿಸಿದರೆ ಸರಿ ಸರಿ ಮಾಡಿಸುವುದಾಗಿ ಹೇಳಿ ಕೈತೊಳೆದುಕೊಳ್ಳುತ್ತಾರೆ,ತಮ್ಮಿಂದ ಆಯ್ಕೆಯಾದ ಸದಸ್ಯರು ಇತ್ತ ತಿರುಗಿನೋಡುವುದಿಲ್ಲ, ತಮ್ಮ ಗ್ರಾಮಕ್ಕೆ ಬರುವ ಅನೇಕ ಸೌಲಭ್ಯಗಳನ್ನು ಅನುಷ್ಠಾನಗೊಳಿಸದೇ ಇಲ್ಲ ಸಲ್ಲದ ಸಬೂಬು ಹೇಳಿ ಅಭಿವೃದ್ದಿ ಕಾರ್ಯಗಳಿಗೆ ತೊಡಕುಂಟು ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.
ಕಳೆದ ಕೆಲ ದಿನಗಳ ಹಿಂದಷ್ಟೆ ಪಂಚಾಯ್ತಿ ಕೇಂದ್ರವಾದ ದೊಡ್ಡಬಿದರೆ ಗ್ರಾಮದಲ್ಲಿ ಕೆನರಾ ಬ್ಯಾಂಕ್ ಗ್ರಾಮೀಣ ಶಾಖೆಯನ್ನು ಸ್ಥಾಪಿಸುವ ವಿಚಾರವಾಗಿ ಗ್ರಾ..ಪಂ.ಗೆ ಬ್ಯಾಂಕ್ ಅಧಿಕಾರಿಗಳು ಆಗಮಿಸಿದ್ದಾಗ ಇಲ್ಲಿನ ಗ್ರಾ.ಪಂ.ಅಧ್ಯಕ್ಷರು ಹಾಗೂ ಸದಸ್ಯರು ಸೂಕ್ತ ಮಾಹಿತಿಯನ್ನು ನೀಡದೆ ತಮ್ಮ ಗ್ರಾಮಕ್ಕೆ ಬ್ಯಾಂಕ್ ಬೇಡವೆಂದಿದ್ದಾರೆಂಬುದೇ ಇವತ್ತಿನ ಪ್ರತಿಭಟನೆಗೆ ಕಾರಣಾವಾಯಿತು.
ಹುಳಿಯಾರು ಹೋಬಳಿ ದೊಡ್ಡಬಿದರೆ ಗ್ರಾ.ಪಂ.ವಿರುದ್ದ ಆಕ್ರೋಶಗೊಂಡ ಗ್ರಾಮಸ್ಥರು ಪಿಡಿಓ ಅವರನ್ನು ತರಾಟೆಗೆ ತೆಗೆದುಕೊಂಡರು. |
ಈ ವಿಷಯದ ಬಗ್ಗೆ ಪಿಡಿಓ ಅವರೊಂದಿಗೆ ಮಾತಿಗೆ ಮುಂದಾದ ಜನರಿಗೆ ಪಿಡಿಓ ಬಸವರಾಜು ತಮಗೆ ಈ ಬಗ್ಗೆ ಏನು ಗೊತ್ತಿಲ್ಲ,ಬ್ಯಾಂಕ್ ಅಧಿಕಾರಿಗಳು ಬಂದಾಗ ತಾವು ಇರಲಿಲ್ಲ ಎಂದು ಹಾರಿಕೆ ಉತ್ತರ ನೀಡಿದರು.ಇದರಿಂದ ಆಕ್ರೋಶಗೊಂಡ ಜನ ಗ್ರಾ.ಪಂ ಬೀಗ ಹಾಕಿದ್ದಲ್ಲದೆ ಊರಿನ ಸಮಸ್ಯೆಗಳಾದರು ತಮಗೆ ತಿಳಿದಿದೆಯೇ ಎಂದು ಪ್ರಶ್ನಿಸಿ ಹೂಳು ತುಂಬಿಕೊಂಡಿದ್ದ ಚರಂಡಿಗಳ ಹತ್ತಿರಕ್ಕೆ ಅವರನ್ನು ಕರೆದೊಯ್ಯುದು ನೈಜ ಸಂಗತಿಯನ್ನು ಎದುರಿಗಿಟ್ಟರು.
ಪಿಎಸೈ ಮಧ್ಯಸ್ತಿಕೆ: ಪ್ರತಿಭಟನೆಯ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪಿಎಸೈ ರಾಜು ಅವರು ಪ್ರತಿಭಟನಕಾರರೊಂದಿಗೆ ಮಾತನಾಡಿ ಗ್ರಾಮದ ಅಭಿವೃದ್ದಿಯಲ್ಲಿ ರಾಜಕೀಯವಿರಬಾರದು ಗ್ರಾ.ಪಂ.ಸದಸ್ಯರಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಗೆ ಎಡೆ ಮಾಡಿಕೊಡದೆ ಸಹಕಾರ ಮನೋಭಾವದಿಂದ ನಡೆಯಬೇಕು ಎಂದರು.ಬ್ಯಾಂಕ್ ಸ್ಥಳಾಂತರವಾಗಿದೆ ಎಂಬುದು ಗ್ರಾ.ಪಂ.ಯವರಿಗೆ ತಿಳಿದಿಲ್ಲದಿರುವುದರಿಂದ ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳೊಂದಿಗೆ ಮಾತನಾಡಿ ಎಂದು ಜನರ ಮನವೋಲಿಸಿ ಪ್ರತಿಭಟನೆ ಹಿಂಪಡೆಯುವಂತೆ ಮಾಡಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ