ಸಂಕಷ್ಟದಲ್ಲಿರುವವರಿಗೆ ನೆರವಿನ ಹಸ್ತ ಚಾಚುವುದರಿಂದ ಮನಸ್ಸಿಗೆ ಸಮಾಧಾನ ಸಂತಸ ಸಿಗಲಿದ್ದು, ಪ್ರತಿಯುಬ್ಬರೂ ಸ್ವಲ್ಪಕಾಲವಾದರೂ ಸಮಾಜ ಸೇವೆಗೆ ಮೀಸಲಿಡಿ ಎಂದು ರೋಟರಿ ಸಂಸ್ಥೆಯ ಮಾಜಿ ಜಿಲ್ಲಾ ಗವರ್ನರ್ ಹೆಚ್.ಕೆ.ವಿ.ರೆಡ್ಡಿ ಕಿವಿ ಮಾತು ಹೇಳಿದರು.
ಹುಳಿಯಾರಿನ ರೋಟರಿ ಸಂಸ್ಥೆಯ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭವನ್ನು ಮಾಜಿ ಜಿಲ್ಲಾ ಗವರ್ನರ್ ಹೆಚ್.ಕೆ.ವಿ.ರೆಡ್ಡಿ ಉದ್ಘಾಟಿಸಿದರು.ಎನ್.ಎಸ್.ನಾಗರಾಜು,ಗಂಗಾಧರ್ ರಾವ್,ರವೀಶ್,ಮಂಜುನಾಥ ಗುಪ್ತ,ಹನುಮಂತಯ್ಯ ಇದ್ದಾರೆ. |
ಹುಳಿಯಾರಿನ ರೋಟರಿ ಸಂಸ್ಥೆಯ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು,ಕೇವಲ ನಾಲ್ಕು ಮಂದಿಯಿಂದ ಸ್ಥಾಪಿತವಾದ ರೋಟರಿ ಸಂಸ್ಥೆ ಇಂದು ಪ್ರಪಂಚದಾದ್ಯಂತ ಮೂವತ್ನಾಲ್ಕು ಸಾವಿರ ಶಾಖೆಗಳನ್ನು ಹೊಂದಿ ಹನ್ನೆರೆಡುವರೆ ಲಕ್ಷ ಸದಸ್ಯರನ್ನು ಒಳಗೊಂಡು ಸಮಾಜ ಸೇವೆಯಲ್ಲಿ ನಿರತವಾಗಿದೆ.ಇನ್ನೂರಆರು ರಾಷ್ಟ್ರಗಳಲ್ಲಿ ವ್ಯಾಪಿಸಿರುವ ಈ ಅಂತರರಾಷ್ಟ್ರೀಯ ಸಂಸ್ಥೆಗೆ ಸದಸ್ಯರಾಗುವ ಮೂಲಕ ಸೇವಾ ಕಾರ್ಯದಲ್ಲಿ ನಿರತರಾಗಿ ಎಂದು ಕರೆ ನೀಡಿದರು.
ರೋಟರಿ ಉಪರಾಜ್ಯಪಾಲ ನಾಗರಾಜ್ ಮಾತನಾಡಿ, ಈಡಿ ಪ್ರಪಂಚದಲ್ಲಿ ಲಿಂಗ ,ಜಾತಿ ,ವಯಸ್ಸಿನ ತಾರತಮ್ಯವಿಲ್ಲದೆ ಯಾವುದೇ ಅಡ್ಡ ಗೋಡೆಗಳಿಲ್ಲದೆ ಎಲ್ಲರೂ ತೊಡಗಿಕೊಂಡು ಸೇವೆಸಲ್ಲಿಸಲು ಅವಕಾಶ ಒದಗಿಸಿರುವ ಏಕೈಕ ಸಂಸ್ಥೆ ರೋಟರಿ. ಇನ್ನಿತರ ಸಂಘಸಂಸ್ಥೆಗಳಲ್ಲಿ ಅಧ್ಯಕ್ಷ ಹಾಗೂ ಕಾರ್ಯಕಾರಿ ಮಂಡಳಿ ಅವಧಿ ದೀರ್ಘಾವಧಿಯಿದ್ದು ಕೇವಲ ಒಬ್ಬ ವ್ಯಕ್ತಿಯಿಂದಲೇ ಸಂಸ್ಥೆ ನಿಂತಿರುತ್ತದೆ. ರೋಟರಿ ಇದಕ್ಕಿಂತ ಭಿನ್ನವಾಗಿದ್ದು ಅಧ್ಯಕ್ಷ ಹಾಗೂ ಕಾರ್ಯಕಾರಿ ಮಂಡಳಿ ಒಂದು ವರ್ಷಕ್ಕೆ ಸೀಮಿತವಾಗಿದ್ದು ಸಂಸ್ಥೆಯ ಎಲ್ಲಾ ಸದಸ್ಯರಿಗೆ ಇಲ್ಲಿ ಅವಕಾಶವಿದ್ದು ಸಮಾಜ ಸೇವೆ ,ವಿಭಿನ್ನಸ್ಥರಗಳಲ್ಲಿ ಸೇವೆ ಸಲ್ಲಿಸುವ ಅವಕಾಶವಿದೆ ಎಂದರು.
ರೋಟರಿಸಂಸ್ಥೆಯ ನೂತನ ಅಧ್ಯಕ್ಷರಾಗಿ ಪದವಿ ಸ್ವೀಕರಿಸಿದ ಗಂಗಾಧರ್ ರಾವ್ ಈ ಸಾಲಿನ ಉದ್ದೇಶಿತ ಕಾರ್ಯ ಯೋಜನೆ ಬಗ್ಗೆ ವಿವರಿಸಿ ಮಾತನಾಡಿ,ಪಟ್ಟಣ ವಿವಿಧ ಸಂಘ ಸಂಸ್ಥೆಗಳು ಹಾಗೂ ಪಂಚಾಯ್ತಿ ಸದಸ್ಯರುಗಳು ಸಹಕಾರ ನೀಡಿದಲ್ಲಿ ಹೆಚ್ಚಿನ ಸೇವೆ ಸಲ್ಲಿಸುವುದಾಗಿ ತಿಳಿಸಿದರು.ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ವದ್ದಿಗಪ್ಪ,ಗ್ರಾ.ಪಂ.ಅಧ್ಯಕ್ಷೆ ಪುಟ್ಟಿಬಾಯಿ,ಟಿ.ಆರ್.ಎಸ್.ಶಾಲೆಯ ಮುಖ್ಯಶಿಕ್ಷಕಿಯಾಗಿ ಸೇವೆಸಲ್ಲಿಸಿದ ಡಿ.ಜೆ.ಗಾಯತ್ರಿ ಅವರನ್ನು ಸನ್ಮಾನಿಸಲಾಯಿತು.ವಾಸವಿ ಶಾಲೆಗೆ ಪೀಠೋಪಕರಣ ಹಾಗೂ ಇತರೆ ಶಾಲಾಮಕ್ಕಳಿಗೆ ಪಾಠೋಪಕರಣಗಳನ್ನು ವಿತರಿಸಲಾಯಿತು.ಕಾರ್ಯದರ್ಶಿಯಾಗಿ ಹನುಮಂತಪ್ಪ ಅವರನ್ನು ನೇಮಕ ಮಾಡಲಾಯಿತು.ಟಿ.ಆರ್.ಲಕ್ಷ್ಮಿಕಾಂತ್ ನೂತನ ಅಧ್ಯಕ್ಷರ ಪರಿಚಯಿಸಿ,ರವೀಶ್ ಸ್ವಾಗತಿಸಿ, ಮಂಜುನಾಥ ಗುಪ್ತ ನಿರೂಪಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ