ಚಿಕ್ಕನಾಯಕನಹಳ್ಳಿ ಕ್ಷೇತ್ರದ ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಅವರ 50ನೇ ವರ್ಷದ ಹುಟ್ಟುಹಬ್ಬವನ್ನು ಹೋಬಳಿಯ ಖಾಸಗಿ ಬಸ್ ಮಾಲೀಕರ ಹಾಗೂ ಏಜೆಂಟರ ಚಾರಿಟಬಲ್ ಟ್ರಸ್ಟ್ ವತಿಯಿಂದ ಇಲ್ಲಿನ ಪರಿವೀಕ್ಷಣಾ ಮಂದಿರದಲ್ಲಿ ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. ಏಜೆಂಟರ್ ಸೇವಾ ಚಾರಿಟಬಲ್ ಟ್ರಸ್ಟ್ ನ ಲೋಕೇಶ್, ಹು.ಕೃ.ವಿಶ್ವನಾಥ್, ಇಂತಿಯಾಜ್, ಗಂಗಣ್ಣ,ರಾಜಣ್ಣ,ರಾಘವೇಂದ್ರ.ಎಸ್.ಎಲ್.ಆರ್.ಪ್ರದೀಪ್,ಕರವೇ ಅಧ್ಯಕ್ಷ ಶ್ರೀನಿವಾಸ್,ಗ್ರಾ.ಪಂ.ಸದಸ್ಯ ಹೇಮಂತ್ ಇನ್ನಿತರರು ಪಾಲ್ಗೊಂಡಿದ್ದು,ಸಂಘದ ಪರವಾಗಿ ಏಜೆಂಟ್ ಲೋಕೇಶಣ್ಣ ಸ್ವಾಗತಿಸಿ ಶುಭಕೊರಿದರು. ಸಂಘದವರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕಿರಣ್ ಕುಮಾರ್ ಬಸ್ಸಿನ ಪ್ರಯಾಣಿಕರೊಂದಿಗೆ ಸ್ನೇಹಯುತವಾಗಿ ನಡೆದುಕೊಳ್ಳುವಂತೆ ಏಜೆಂಟರ್ ಗಳಿಗೆ ಕಿವಿಮಾತು ಹೇಳಿದರು. ಬಸ್ ನಿಲ್ದಾಣದ ಸಮಸ್ಯೆಯ ಬಗ್ಗೆ ತಮಗೆ ತಿಳಿದಿದ್ದು, ಶೀಘ್ರದಲ್ಲಿ ಈ ಸಮಸ್ಯೆಯ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಪರಿಹಾರ ಕಲ್ಪಿಸುವುದಾಗಿ ತಿಳಿಸಿದರು. ಹುಳಿಯಾರಿನ ಖಾಸಗಿ ಬಸ್ ಮಾಲೀಕರ ಹಾಗೂ ಏಜೆಂಟರ ಸೇವಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಪರಿವೀಕ್ಷಣಾ ಮಂದಿರದಲ್ಲಿ ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ...