ತವರಿನೊಂದಿಗಿನ ಅವಿನಾಭಾವ ಸಂಬಂಧದ ಸಂಕೇತವಾಗಿ ಆಚರಿಸುವ , ಹೆಣ್ಣುಮಕ್ಕಳಿಗೆ ಪ್ರಿಯವಾದ ಗೌರಿ ಹಬ್ಬವನ್ನು ಮದುವೆಯಾಗಿರಲಿ, ಆಗಿರದೆ ಇರಲಿ ಎಲ್ಲಾ ಹೆಣ್ಣು ಮಕ್ಕಳು ಸೇರಿ ಹೆತ್ತವರು ಅಥವಾ ಸೋದರ ಸಂಬಂಧಿಗಳಿಂದ ಉಡುಗೊರೆಯನ್ನು ಪಡೆದು ನೂರ್ಕಾಲ ಬಾಳು ಎಂಬ ಆಶೀರ್ವಾದ ಪಡೆಯುವುದರೊಂದಿಗೆ ಗೌರಿಹಬ್ಬವನ್ನು ಆಚರಿಸುತ್ತಾರೆ. ಅಂತೆಯೇ ಭಾನುವಾರದಂದು ಪಟ್ಟಣದ ಮನೆಮನೆಗಳಲ್ಲಿ ಗೌರಿ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ವಿವಿಧ ಹೂಗಳಿಂದ ಅಲಂಕರಿಸಿ, ಸಿಹಿ ಅಡುಗೆ ಮಾಡಿ, ಮನೆಗೆ ಬಂದವರಿಗೆ ಬಾಗೀನ ನೀಡುವ ಮೂಲಕ ಹಬ್ಬವನ್ನು ಸಡಗರ ಸಂಭ್ರಮ ಹಾಗೂ ಶ್ರದ್ದಾಭಕ್ತಿಯಿಂದ ಆಚರಿಸಲಾಯಿತು.
ಹುಳಿಯಾರಿನಲ್ಲಿ ಭಾನುವಾರದಂದು ಗೌರಿ ಹಬ್ಬದ ದಿನ ಮನೆಯೊಂದರಲ್ಲಿ ಪ್ರತಿಷ್ಠಾಪಿಸಿದ್ದ ಪುಟ್ಟ ಗೌರಿ ವಿಗ್ರಹ ನೋಡುಗರ ಗಮನ ಸೆಳೆಯಿತು.
|
ಗೌರಿ ಹಬ್ಬವನ್ನು ಹಿಂದಿನಿಂದಲೂ ಭಕ್ತಿಯಿಂದ ಆಚರಿಸಿಕೊಂಡು ಬಂದಿರುವ ಮಹಿಳೆಯರು ಗೌರಿ ಪೂಜೆ ಸಲ್ಲಿಸಿ ನಂತರ ಮುತ್ತೈದಯರಿಗೆ ಬಾಗಿನ ಅರ್ಪಿಸುವಲ್ಲಿ ನಿರತರಾಗಿದ್ದರು. ತವರುಮನೆಗೆ ಬಂದಿದ್ದ ಹೆಣ್ಣುಮಕ್ಕಳು ಮುಂಜಾನೆಯಿಂದಲೇ ಮನೆಯ ಆವರಣವನ್ನು ಸಾರಿಸಿ, ಸಿಂಗರಿಸಿ ಗೌರಿ ವಿಗ್ರಹವನ್ನು ಫಲ-ಪುಷ್ಪಗಳಿಂದ ಅಲಂಕರಿಸಿದ್ದಲ್ಲದೆ, ವಿವಿದ ಪೂಜಾ ಕಾರ್ಯಗಳನ್ನು ಮಾಡಿ ಹಿರಿಯರಿಂದ ಆಶೀರ್ವಾದ ಪಡೆಯುವ ಮೂಲಕ ಹಬ್ಬದ ಶುಭಾಷಯವನ್ನು ಹಂಚಿಕೊಳ್ಳುತ್ತಿದ್ದರು. ಪಟ್ಟಣದ ದೇವಾಲಯಗಳಲ್ಲಿ ದೇವರುಗಳಿಗೆ ವಿಶೇಷ ಪೂಜೆ,ಅಲಂಕಾರಗಳನ್ನು ಮಾಡಿದ್ದು ಅನೇಕರು ದೇವಾಲಯಗಳಿಗೆ ಬಂದು ಪೂಜೆ ಸಲ್ಲಿಸಿದರು.
![]() |
ಹುಳಿಯಾರಿನಲ್ಲಿ ಭಾನುವಾರದಂದು ಗೌರಿ ಹಬ್ಬದ ದಿನ ಮನೆಯೊಂದರಲ್ಲಿ ಸುಮಂಗಲಿಯರು ಗೌರಿಪೂಜೆ ಮಾಡುತ್ತಿರುವ ಒಂದು ದೃಶ್ಯ. |
ಗಣೇಶ ಚರ್ಥುತಿ ಅಂಗವಾಗಿ ಗಣೇಶ ವಿಗ್ರಹಗಳನ್ನು ಕೊಳ್ಳಲು ಜನ ಮುಗಿಬಿದಿದ್ದು,ಹುಳಿಯಾರಿನ ಬಸ್ ನಿಲ್ದಾಣದಲ್ಲಿ ಜನಜಂಗುಳಿಯೇ ನೆರೆದಿತ್ತು,ಸುತ್ತಮುತ್ತಲಿನ ಹಳ್ಳಿಗಳಿಂದ ಬಂದಿದ್ದ ರೈತರು,ಯುವಕರು ತಮ್ಮ ತಮ್ಮ ಊರುಗಳಿಗೆ ವಿವಿಧ ಬಗೆಯ ಗಣೇಶನ ಮೂರ್ತಿಗಳನ್ನು, ಅದರ ಅಲಂಕಾರಕ್ಕೆ ಬೇಕಾದ ಹೂ,ಹಣ್ಣು,ಬಾಳೆಕಂದು ಸೇರಿದಂತೆ ನಾನಾ ಬಗೆಯ ವಸ್ತುಗಳನ್ನು ಕೊಂಡೈಯುತ್ತಿದ್ದರು.
ಹುಳಿಯಾರಿನ ಗ್ರಾಮದೇವತೆ ಹುಳಿಯಾರಮ್ಮನವರಿಗೆ ಗೌರಿಹಬ್ಬದ ಅಂಗವಾಗಿ ಅರ್ಚಕ ರವೀಂದ್ರಾಚಾರ್ ಅವರು ಮಾಡಿದ್ದ ಸ್ವರ್ಣಗೌರಿ ಅಂಕಾರ ಭಕ್ತರ ಗಮನ ಸೆಳೆಯಿತು. |
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ