ಚಿಕ್ಕನಾಯಕನಹಳ್ಳಿ ಕ್ಷೇತ್ರದ ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಅವರ 50ನೇ ವರ್ಷದ ಹುಟ್ಟುಹಬ್ಬವನ್ನು ಹೋಬಳಿಯ ಖಾಸಗಿ ಬಸ್ ಮಾಲೀಕರ ಹಾಗೂ ಏಜೆಂಟರ ಚಾರಿಟಬಲ್ ಟ್ರಸ್ಟ್ ವತಿಯಿಂದ ಇಲ್ಲಿನ ಪರಿವೀಕ್ಷಣಾ ಮಂದಿರದಲ್ಲಿ ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. ಏಜೆಂಟರ್ ಸೇವಾ ಚಾರಿಟಬಲ್ ಟ್ರಸ್ಟ್ ನ ಲೋಕೇಶ್, ಹು.ಕೃ.ವಿಶ್ವನಾಥ್, ಇಂತಿಯಾಜ್, ಗಂಗಣ್ಣ,ರಾಜಣ್ಣ,ರಾಘವೇಂದ್ರ.ಎಸ್.ಎಲ್.ಆರ್.ಪ್ರದೀಪ್,ಕರವೇ ಅಧ್ಯಕ್ಷ ಶ್ರೀನಿವಾಸ್,ಗ್ರಾ.ಪಂ.ಸದಸ್ಯ ಹೇಮಂತ್ ಇನ್ನಿತರರು ಪಾಲ್ಗೊಂಡಿದ್ದು,ಸಂಘದ ಪರವಾಗಿ ಏಜೆಂಟ್ ಲೋಕೇಶಣ್ಣ ಸ್ವಾಗತಿಸಿ ಶುಭಕೊರಿದರು. ಸಂಘದವರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕಿರಣ್ ಕುಮಾರ್ ಬಸ್ಸಿನ ಪ್ರಯಾಣಿಕರೊಂದಿಗೆ ಸ್ನೇಹಯುತವಾಗಿ ನಡೆದುಕೊಳ್ಳುವಂತೆ ಏಜೆಂಟರ್ ಗಳಿಗೆ ಕಿವಿಮಾತು ಹೇಳಿದರು. ಬಸ್ ನಿಲ್ದಾಣದ ಸಮಸ್ಯೆಯ ಬಗ್ಗೆ ತಮಗೆ ತಿಳಿದಿದ್ದು, ಶೀಘ್ರದಲ್ಲಿ ಈ ಸಮಸ್ಯೆಯ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಪರಿಹಾರ ಕಲ್ಪಿಸುವುದಾಗಿ ತಿಳಿಸಿದರು.
ವಿದ್ಯಾವಾರಿಧಿ ಶಾಲೆಯಲ್ಲಿ ಆಚರಣೆ: ಶಾಲಾ ಅಧ್ಯಕ್ಷರಾಗಿರುವ ಕಿರಣ್ ಕುಮಾರ್ ಅವರ ಹುಟ್ಟುಹಬ್ಬದ ಅಂಗವಾಗಿ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಶಾಲೆಯ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಪ್ರಾಂಶುಪಾಲ ರವಿ ಅವರು ಶಾಲಾ ಆಡಳಿತ ಮಂಡಳಿ ಪರವಾಗಿ ಕಿರಣ್ ಕುಮಾರ್ ಅವರಿಗೆ ಹುಟ್ಟುಹಬ್ಬದ ಶುಭಾಷಯ ಕೋರಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಂತರ ಅವರ ಹುಟ್ಟುಹಬ್ಬದ ನೆನಪಿಗಾಗಿ ಶಾಲಾ ಮಕ್ಕಳಿಗಾಗಿ ನೂತನ ಫನ್ ವರ್ಲ್ಡ್ ಉದ್ಯಾನವನ್ನು ಉದ್ಘಾಟಿಸಿ, ಶಾಲಾ ಮಕ್ಕಳಿಗೆ ಸಿಹಿಹಂಚಲಾಯಿತು.
ಹುಳಿಯಾರಿನ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಅವರ ಹುಟ್ಟುಹಬ್ಬವನ್ನು ಆಚರಿಸಿ,ಶುಭಾಷಯ ತಿಳಿಸಿದರು. |
ತಾ.ಪಂ.ಸದಸ್ಯರಾದ ನವೀನ್, ವಸಂತಯ್ಯ, ವಕೀಲರಾದ ರಮೇಶ್ ಬಾಬು, ವಿಶ್ವನಾಥ್, ಶಾಲೆಯ ಕಾರ್ಯದರ್ಶಿ ಕವಿತಾ ಕಿರಣ್ ಕುಮಾರ್, ಕನಕದಾಸ ಶಾಲೆಯ ಶಿವಪ್ರಸಾದ್, ಶಾಲಾ ಸಿಬ್ಬಂದಿವರ್ಗದವರು ಸೇರಿದಂತೆ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಅವರು ತಮ್ಮ ಹುಟ್ಟುಹಬ್ಬದ ಅಂಗವಾಗಿ ಹುಳಿಯಾರಿನ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಶಾಲಾ ಆವರಣದಲ್ಲಿ ಮಕ್ಕಳಿಗಾಗಿ ನೂತನ ಫನ್ ವರ್ಲ್ಡ್ ಉದ್ಯಾನವನ್ನು ಉದ್ಘಾಟಿಸಿದರು. |
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ