ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಡಿಸೆಂಬರ್, 2013 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಪುರದ ಚನ್ನಬಸವಣ್ಣನ ಕಡೆಕಾರ್ತೀಕ ಮಹೋತ್ಸವದಲ್ಲಿ ರಾಗಿಮುದ್ದೆ ಊಟದ ವಿಶೇಷ

ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದ ಪುರಾಣ ಪ್ರಸಿದ್ದ ಶ್ರೀಚನ್ನಬಸವೇಶ್ವರ ಸ್ವಾಮಿಯ ಕೃತಿಕಾ ಮಹೋತ್ಸವವು ಸ್ವಾಮಿಯ ಮೂಲಸ್ಥಾನವಾದ ಪುರದಮಠದಲ್ಲಿ ಸೋಮವಾರ ಗ್ರಾಮದೇವತೆ ಶ್ರೀಕಾಳಿಕಾಂಭ ದೇವಿ ಹಾಗೂ ಸಹಸ್ರಾರು ಭಕ್ತರ ಸಮ್ಮುಖದಲ್ಲಿ,ವಿವಿಧ ಧಾರ್ಮಿಕ ಕೈಂಕರ್ಯಗಳೊಂದಿಗೆ ವೈಭವಯುತವಾಗಿ ನಡೆಯಿತು. 16ನೇ ಶತಮಾನದ ಸಂತ ಗೋಸಲ ಚನ್ನಬಸವಣ್ಣನವರ ತಪೋಕ್ಷೇತ್ರವೆಂದೇ ಖ್ಯಾತವಾಗಿರುವ ಪುರದ ಮಠದಲ್ಲಿ ಪ್ರತಿವರ್ಷದ ಕಾರ್ತಿಕ ಮಾಸದ ಪೂರ್ಣಿಮದಂದು ಈ ಕಾರ್ತಿಕ ಮಹೋತ್ಸವ ನಡೆಯುತ್ತದೆ. ಅದರಂತೆ ಸೋಮವಾರ ಬೆಳಿಗ್ಗೆ ಕೆಂಕೆರೆ ಗ್ರಾಮದಲ್ಲಿರುವ ಸ್ವಾಮಿಗೆ ವಿಶೇಷ ಪೂಜೆ ನಡೆಸಿ,ನಂತರ ಗ್ರಾಮದೇವತೆ ಕಾಳಮ್ಮ ಹಾಗೂ ಸ್ವಾಮಿಯವರನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಿದ್ದಲ್ಲದೆ, ಬಸವನ ಉತ್ಸವದೊಂದಿಗೆ ಮೂಲಸ್ಥಾನ ಪುರದಮಠಕ್ಕೆ ಕರೆದ್ಯೊಯಲಾಯಿತು. ಮೂಲಸ್ಥಾನದಲ್ಲಿರುವ ಸ್ವಾಮಿಯ ಮೂಲವಿಗ್ರಹಕ್ಕೆ ನಟರಾಜ್ ಪೌರೋಹಿತ್ಯದಲ್ಲಿ ಅಭಿಷೇಕ, ಮಾಡಿ ನಂತರ ಬಗೆಬಗೆ ಹೂಗಳಿಂದ ಸಿಂಗರಿಸಿ,ಮಧ್ಯಾಹ್ನ 1 ಗಂಟೆಗೆ ಪುರದಮಠದಲ್ಲಿ ಬಸವನ ಉತ್ಸವ ನಡೆಸಿ, ತಯಾರಿಸಿದ್ದ ಪ್ರಸಾದವನ್ನು ಸ್ವಾಮಿಯ ಗದ್ದಿಗೆ ಇರುವ ಪುರಾತನ ಗುಹೆಗಳಿಗೆ ತೆಗೆದುಕೊಂಡು ಹೋಗಿ ಅಲ್ಲಿ ಪೂಜೆ ನೆರವೇರಿಸಿ ಬಂದ ನಂತರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಮಹಾಮಂಗಳಾರತಿ ನಡೆಯಿತು. ರಾಗಿಮುದ್ದೆಸಾರಿನ ಊಟ : ಇಲ್ಲಿನ ವಿಶೇಷವೆಂದರೆ ಮಹೊತ್ಸವಕ್ಕೆ ಆಗಮಿಸಿದ್ದ ಭಕ್ತಾಧಿಗಳಿಗೆ ರಾಗಿ

ಆಶಾಸತೀಶ್ ಅವರ ಹುಟ್ಟುಹಬ್ಬದ ಅಂಗವಾಗಿ ಉಚಿತ ಕಣ್ಣಿನ ಪೂರೆ ಶಸ್ತ್ರಚಿಕಿತ್ಸಾ ಶಿಬಿರ

ಹುಳಿಯಾರಿನ ಸರ್ಕಾರಿ ಪ್ರಾಥಮಿಕ ಆರೋಗ್ಯಕೇಂದ್ರದಲ್ಲಿ ಬೆಂಗಳೂರಿನ ಕೆ.ವಿ.ಎಸ್. ಫ್ಯಾನ್ಸ್ ಛಾರಿಟಬಲ್ ಟ್ರಸ್ಟ್ ನವರು ಆಶಾಸತೀಶ್ ಅವರ ಹುಟ್ಟು ಹಬ್ಬದ  ಅಂಗವಾಗಿ ಉಚಿತ ಕಣ್ಣಿನ ಪೂರೆ ಶಸ್ತ್ರಚಿಕಿತ್ಸಾ ಶಿಬಿರ ನಡೆಸಿದರು.ರೋಟರಿ ಸಂಸ್ಥೆ ಅಧ್ಯಕ್ಷ ಗಂಗಾಧರರಾವ್,ರವೀಶ್ ವೈದ್ಯರುಗಳಾದ ಬ್ಯಾನರ್ಜಿ,ಸದಾಶಿವಯ್ಯ ಇತರರಿದ್ದಾರೆ.

ಹುಳಿಯಾರಿನಲ್ಲಿ ಅದ್ದೂರಿ ಹನುಮಜಯಂತಿ

      ಪಟ್ಟಣದ ಮಾರುತಿ ನಗರದ ಆಂಜನೇಯ ಸ್ವಾಮಿ ದೇವಾಲಯದಲ್ಲಿ ದೇವಾಲಯ ಜಿರ್ಣೋದ್ದಾರ ಸಮಿತಿ ಹಾಗೂ ಭಕ್ತಾಧಿಗಳಿಂದ ಸ್ವಾಮಿಯ ಐದನೇ ವರ್ಷದ ಅದ್ದೂರಿ ಹನುಮಜಯಂತಿ ಮಹೋತ್ಸವ ಹಾಗೂ ಪ್ರಥಮ ವರ್ಷದ ಆಂಜನೇಯಸ್ವಾಮಿ ಮಹಾರಥೋತ್ಸವ ಶನಿವಾರದಂದುವಿಜೃಂಭಣೆಯಿಂದ ನಡೆಯಿತು.        ಇದರಂಗವಾಗಿ ಮುಂಜಾನೆಯಿಂದಲೇ ಧಾರ್ಮಿಕ ವಿಧಿವಿಧಾನಗಳು ರಾಮಚಮ್ದ್ರ ಭಟ್ಟರ ನೇತೃತ್ವದಲ್ಲಿ ಪ್ರಾರಂಭಗೊಂಡು ಗಣಪತಿ ಪೂಜೆ,ನವಗ್ರಹ ಪೂಜೆ,ಆಂಜನೇಯಸ್ವಾಮಿಗೆ ಪಂಚಾಮೃತ ಅಭಿಷೇಕ, ಪವಮಾನ ಹೋಮ, ಆಂಜನೇಯ ಮಹಾಮಂತ್ರ ಜಪ ನಡೆದು ಪೂರ್ಣಾಹುತಿ, ಮಹಾಮಂಗಳಾರತಿ ನಂತರ ಸರ್ವಾಲಂಕೃತಗೊಡಿದ್ದ ಆಂಜನೇಯಸ್ವಾಮಿಯವರನ್ನು ಗ್ರಾಮದೇವತೆಗಳಾದ ಹುಳಿಯಾರಮ್ಮ ಹಾಗೂ ದುರ್ಗಮ್ಮನವರ ಸಾನಿಧ್ಯದಲ್ಲಿ ನೂತನ ರಥಕ್ಕೇರಿಸಲಾಯಿತು.ಸಡಗರ ಮತ್ತು ಸಂಭ್ರಮಗಳಿಂದ ಪಾಲ್ಗೊಂಡಿದ್ದ ಅಪಾರ ಭಕ್ತರು ಜಯಘೋಷದೊಂದಿಗೆ ರಥಕ್ಕೆ ಪೂಜೆ ಸಲ್ಲಿಸಿ, ಹಣ್ಣು ದವನ ಎಸೆದು ಪುನೀತ ಭಾವ ಹೊಂದಿದರು. ಅಲಂಕೃತ ರಥವನ್ನು ದೇವಾಲಯದ ಮುಂಭಾಗ ದಿಂದ  ರಾಮಗೋಪಾಲ್ ಸರ್ಕಲ್ ವರೆಗೆ ಎಳೆದು ತಂದರು. ಹನುಮನ ಮೂರ್ತಿಗೆ ಮಾಡಲಾಗಿದ್ದ ಅಲಂಕಾರವನ್ನು ಭಕ್ತರು ಕಣ್ತುಂಬಿಕೊಂಡರು. ದೇವಾಲಯದ ಆವರಣದಲ್ಲಿ ನಡೆದ ಅನ್ನಸಂತರ್ಪಣೆಯಲ್ಲಿ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು           ಸಂಜೆ ದೇವಾಲಯದ ಆವರಣದಿಂದ ರಾಜಬೀದಿಯಲ್ಲಿ ಜಾನಪದ ಕಲಾ ತಂಡಗಳ ಮೆರವಣಿಗೆ ನಡೆಯಿತು. ದಾವಣಗೆರೆಯ ಬಸವಕಲಾ ತಂಡದವರಿಂದ ನಂದಿಧ್ವಜಕ

ಹುಳಿಯಾರು ವಿವಿಧಡೆ ಹನುಮಜಯಂತಿ

ಹುಳಿಯಾರು: ಪಟ್ಟಣ ಸೇರಿದಂತೆ ವಿವಿಧಡೆಯಲ್ಲಿ ನಡೆದ ಹನುಮ ಜಯಂತಿ ಅಂಗವಾಗಿ ಆಂಜನೇಯ ಮಂದಿರಗಳಲ್ಲಿ ಕಾಲಿಡಲು ಜಾಗ ಇಲ್ಲದಷ್ಟು ಭಕ್ತರಿದ್ದರು.            ಪಟ್ಟಣದ ವಾಸವಿ ದೇವಾಲಯದಲ್ಲಿ ಸೀತಾರಾಮಾಂಜನೇಯ ಮೂರ್ತಿಗಳು ಅಲಂಕಾರದಿಂದ ಕಂಗೊಳಿಸಿದ್ದವು. ಹೋಮ, ಮಹಾಭಿಷೇಕ, ಕುಂಕುಮಾರ್ಚನೆ ಸೇರಿದಂತೆ ಹಲವು ಧಾರ್ಮಿಕ ವಿಧಿಗಳನ್ನು ನೆರವೇರಿಸಲಾಯಿತು.          ಶಂಕರಪುರದಲ್ಲಿ ಬಸ್ಟಾಂಡ್ ಹೋಟಲ್ ನ ಗೋಪಾಲ್ ಅವರ ನಿವಾಸದಲ್ಲಿ ಪವಮಾನ ಹೋಮ,ವಿಪ್ರಮಹಿಳಾ ಸಂಘದಿಂದ ಭಜನೆ ಹಾಗೂ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ನಡೆಯಿತು.       ತಿರುಮಲಾಪುರದಲ್ಲಿ ಅರ್ಚಕ ಮಂಜುನಾಥ್ ನೇತೃತ್ವದಲ್ಲಿ ಸ್ವಾಮಿಯವರಿಗೆ ಮಹನ್ಯಾಸಪೂರಕ ರುದ್ರಾಭಿಷೇಕ,ಆಂಜನೇಯಸ್ವಾಮಿಗೆ ಪಂಚಾಮೃತ ಅಭಿಷೇಕ ನಡೆಯಿತು.ತೇರಿನೆಳೆದು ಸಂಭ್ರಮಿಸಿದ ಭಕ್ತಾಧಿಗಳಿಗೆ ಪಾನಕ ಪನಿವಾರ ವಿತರಿಸಲಾಯಿತು.         ಹೊಸಹಳ್ಳಿಯ ಶ್ರೀ ಅಂಜನೇಯ ಸ್ವಾಮಿ. ಇದೇರೀತಿ ಸಮೀಪದ ಹೊಸಹಳ್ಳಿ ಹಾಗೂ ಸೀಗೆಬಾಗಿಯ ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನದಲ್ಲೂ `ಮುಖ್ಯಪ್ರಾಣ'ನಿಗೆ ವಿಶೇಷ ಪೂಜೆ, ಅಲಂಕಾರ ನಡೆದಿದ್ದು ಭಾರಿ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.