ಹುಳಿಯಾರು: ಪಟ್ಟಣ ಸೇರಿದಂತೆ ವಿವಿಧಡೆಯಲ್ಲಿ ನಡೆದ ಹನುಮ ಜಯಂತಿ ಅಂಗವಾಗಿ ಆಂಜನೇಯ ಮಂದಿರಗಳಲ್ಲಿ ಕಾಲಿಡಲು ಜಾಗ ಇಲ್ಲದಷ್ಟು ಭಕ್ತರಿದ್ದರು.
ಪಟ್ಟಣದ ವಾಸವಿ ದೇವಾಲಯದಲ್ಲಿ ಸೀತಾರಾಮಾಂಜನೇಯ ಮೂರ್ತಿಗಳು ಅಲಂಕಾರದಿಂದ ಕಂಗೊಳಿಸಿದ್ದವು. ಹೋಮ, ಮಹಾಭಿಷೇಕ, ಕುಂಕುಮಾರ್ಚನೆ ಸೇರಿದಂತೆ ಹಲವು ಧಾರ್ಮಿಕ ವಿಧಿಗಳನ್ನು ನೆರವೇರಿಸಲಾಯಿತು.
ಶಂಕರಪುರದಲ್ಲಿ ಬಸ್ಟಾಂಡ್ ಹೋಟಲ್ ನ ಗೋಪಾಲ್ ಅವರ ನಿವಾಸದಲ್ಲಿ ಪವಮಾನ ಹೋಮ,ವಿಪ್ರಮಹಿಳಾ ಸಂಘದಿಂದ ಭಜನೆ ಹಾಗೂ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ನಡೆಯಿತು.
ತಿರುಮಲಾಪುರದಲ್ಲಿ ಅರ್ಚಕ ಮಂಜುನಾಥ್ ನೇತೃತ್ವದಲ್ಲಿ ಸ್ವಾಮಿಯವರಿಗೆ ಮಹನ್ಯಾಸಪೂರಕ ರುದ್ರಾಭಿಷೇಕ,ಆಂಜನೇಯಸ್ವಾಮಿಗೆ ಪಂಚಾಮೃತ ಅಭಿಷೇಕ ನಡೆಯಿತು.ತೇರಿನೆಳೆದು ಸಂಭ್ರಮಿಸಿದ ಭಕ್ತಾಧಿಗಳಿಗೆ ಪಾನಕ ಪನಿವಾರ ವಿತರಿಸಲಾಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ