ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಮಾರ್ಚ್, 2014 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಗೌಡಗೆರೆ ದುರ್ಗಮ್ಮನ ಜಾತ್ರೆಗೆ ತೆರೆ

ಹುಳಿಯಾರು: ಹೋಬಳಿ ಗೌಡಗೆರೆಯ ಶ್ರೀ ದುರ್ಗಮ್ಮದೇವಿಯ ಜಾತ್ರಾ ಮಹೋತ್ಸವಕ್ಕೆ ಶುಕ್ರವಾರದಂದು ಸಿಡಿ ಸೇವಾ ಕಾರ್ಯ ನಡೆಸುವ ಮೂಲಕ ವೈಭವಯುತ ತೆರೆ ಎಳೆಯಲಾಯಿತು. ಜಾತ್ರೆಯ ಅಂಗವಾಗಿ ಅಮ್ಮನವರಿಗೆ ಮದುವಣಗಿತ್ತಿಸೇವೆ,ಮಡಲಕ್ಕಿಸೇವೆಯೊಂಡಿಗೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ನಡೆಸಿ, ಕೆಂಕೆರೆ ಕಾಳಮ್ಮ,ಹುಳಿಯಾರು ದುರ್ಗಮ್ಮ,ದಮ್ಮಡಿಹಟ್ಟಿ ಈರಬೊಮ್ಮಕ್ಕದೇವರುಗಳ ಸಮ್ಮುಖದಲ್ಲಿ ಅಮ್ಮನವರ ಪಟ್ಟದಕಳಸಮಹೋತ್ಸವ ಹಾಗೂ ಸಿಡಿ ಸೇವಾಕಾರ್ಯ, ಓಕಳಿಭಂಡಾರ ಕಾರ್ಯದೊಂದಿಗೆ ಜಾತ್ರೆಗೆ ತೆರೆಬಿದ್ದಿದೆ. ಹುಳಿಯಾರು ಹೋಬಳಿ ಗೌಡಗೆರೆ ಶ್ರೀ ದುರ್ಗಮ್ಮದೇವಿಯ ಜಾತ್ರಾ ಮಹೋತ್ಸವದ ಸಿಡಿಕಾರ್ಯಕ್ಕೆ ಗ್ರಾಮದೇವತೆಗಳನ್ನು ಮದಾಸಿಯಲ್ಲಿ ಕರೆದೊಯ್ಯುತ್ತಿರುವುದು.

ಹುಳಿಯಾರು ಸರ್ಕಾರಿ ಪ್ರೌಢಶಾಲೆಗೆ ಪರಿಸರ ಮಿತ್ರ ಶಾಲೆ ಪ್ರಶಸ್ತಿ

ಹುಳಿಯಾರು: ಇಲ್ಲಿನ ಸರ್ಕಾರಿ ಪ್ರೌಢಶಾಲೆಯ ಶಾಲಾ ಆವರಣದಲ್ಲಿ ಕೈಗೊಂಡಿರುವ ಪರಿಸರಕ್ಕೆ ಪೂರಕವಾದ ಚಟುವಟಿಕೆಗಳನ್ನು ಪರಿಗಣಿಸಿ ತುಮಕೂರು ಜಿಲ್ಲೆಯ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯವರು ಈ ಶಾಲೆಯನ್ನು 2013-14 ನೇ ಸಾಲೀನ ಜಿಲ್ಲಾ ಮಟ್ಟದ "ಪರಿಸರ ಮಿತ್ರಶಾಲೆ" ಎಂದು ಗುರ್ತಿಸಿ 10 ಸಾವಿರ ನಗದು ಪುರಸ್ಕಾರವನ್ನು ನೀಡಿ ಅಭಿನಂದಿಸಿದ್ದಾರೆ. ವಿಜ್ಞಾನ ಶಿಕ್ಷಕಿ ವಿದ್ಯಾಕುಂಚನೂರು ಅವರ ಮಾರ್ಗದರ್ಶನದಲ್ಲಿ ಶಾಲೆಯ ಹತ್ತು ಮಂದಿ ವಿದ್ಯಾರ್ಥಿಗಳನ್ನೊಳಗೊಂಡ ತಂಡ ಶಾಲೆಯ ಕೈತೋಟದಲ್ಲಿ ಕಾಡುಕೃಷಿ ಯೋಜನೆಯಡಿ ವಿವಿಧ ಪ್ರಕಾರದಲ್ಲಿ ಶಾಲಾಮಟ್ಟದಲ್ಲಿ ಪರಿಸರಕ್ಕೆ ಪೂರಕವಾದ ಚಟುವಟಿಕೆಗಳನ್ನು ಕೈಗೊಂಡು ತರಕಾರಿ ಸೇರಿದಂತೆ ಇತರೆ ಪದಾರ್ಥಗಳನ್ನು ಬೆಳೆದಿರುವುದಲ್ಲದೆ, ಹೆಚ್ಚುತ್ತಿರುವ ಮಾಲಿನ್ಯವನ್ನು ಯಾವ ರೀತಿ ನಿಯಂತ್ರಣ ಮಾಡಬಹುದು ಎಂಬ ಅರಿವನ್ನು ಮೂಡಿಸುವ ಕಾರ್ಯದಲ್ಲಿ ಈ ತಂಡ ತೊಡಗಿದ್ದು ಪ್ರಶಸ್ತಿಗೆ ಭಾಜನವಾಗಿದೆ. ಹುಳಿಯಾರು-ಕೆಂಕೆರೆ ಸರ್ಕಾರಿ ಪ್ರೌಢಶಾಲೆಯನ್ನು 2013-14 ನೇ ಸಾಲೀನ ಜಿಲ್ಲಾ ಮಟ್ಟದ "ಪರಿಸರ ಮಿತ್ರಶಾಲೆ" ಎಂದು ಗುರ್ತಿಸಿ ಪ್ರಶಸ್ತಿಪತ್ರ ವಿತರಿಸಿರುವುದು. ಕಳೆದ ಕೆಲ ತಿಂಗಳುಗಳಿಂದ ನಾವುಗಳು ಶಾಲಾ ಕೈತೋಟದಲ್ಲಿ ಪರಿಸರಕ್ಕೆ ಪೂರಕವಾದ ಚಟುವಟಿಕೆಗಳನ್ನು ಕೈಗೊಂಡಿದ್ದು, ನಿತ್ಯ ಶಾಲಾ ಆವರಣದಲ್ಲಿ ಸೃಷ್ಠಿಯಾಗುವ ತ್ಯಾಜ್ಯವನ್ನು ಒಂದೆಡೆ

ಬಿಎಂಎಸ್ ಕಾಲೇಜಿನ ಎನ್ನೆಸ್ಸಸ್ ಶಿಬಿರದ ಸಮಾರೋಪ

ಹುಳಿಯಾರು: ಹೋಬಳಿ ಯಗಚಿಹಳ್ಳಿಯಲ್ಲಿ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ನೆಸ್ಸಸ್ ಘಟಕದವತಿಯಿಂದ ಆಯೋಜಿಸಿದ್ದ ಒಂದು ವಾರದ ಸ್ವಯಂಸೇವಾ ಶಿಬಿರ ಯಶಸ್ವಿಯಾಗಿ ನಡೆದಿದ್ದು, ಗ್ರಾಮದಲ್ಲಿ ಹಿಂಗುಡಿ ನಿರ್ಮಾಣ, ಚರಂಡಿಗಳನ್ನು ಸ್ವಚ್ಚಗೊಳಿಸುವ ಕಾರ್ಯ ಸೇರಿದಂತೆ ಜನರಲ್ಲಿ ಸ್ವಚ್ಚತೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಸೇರಿದಂತೆ ಇತರ ಅನೇಕ ಸಾಮಾಜಿಕ ಚಟುವಟಿಗಳನ್ನು ಯಶಸ್ವಿಯಾಗಿ ನಡೆಸಲಾಯಿತು. ಪ್ರಾಚಾರ್ಯ ಆರ್.ಮೂಗೇಶಪ್ಪ ಶಿಬಿರದ ಮುಕ್ತಾಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದು, ಶಿಬಿರದಲ್ಲಿ ಕೈಗೊಂಡಿದ್ದ ಕಾರ್ಯಗಳನ್ನು ಶಿಬಿರಾಧಿಕಾರಿಗಳ ಹಾಗೂ ಸ್ಥಳೀಯರ ಮಾರ್ಗದರ್ಶನದಲ್ಲಿ ಶಿಬಿರಾರ್ಥಿಗಳು ಅಚ್ಚುಕಟ್ಟಾಗಿ ನಿರ್ವಹಿರುವುದನ್ನು ಶ್ಲಾಘಿಸಿದರು. ಶಿಬಿರದಲ್ಲಿ ಕಲಿತ ಸ್ವಚ್ಚತಾ ಮನೋಭಾವವನ್ನು ಎಂದಿಗೂ ಮರೆಯದೆ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಾಧನೆಯ ಹಾದಿಯಲ್ಲಿ ನಡೆಯಿರಿ ಎಂದು ಆಶಿಸಿದರು. ನಿವೃತ್ತ ಪ್ರಾಂಶುಪಾಲ ವಿಶ್ವೇಶ್ವರಯ್ಯ ಸಮಾರೋಪ ಭಾಷಣ ಮಾಡಿದರು.ಗ್ರಾ.ಪಂ.ಅಧ್ಯಕ್ಷ ಶ್ರೀನಿವಾಸ್, ಶಿಬಿರಾಧಿಕಾರಿಗಳಾದ ಎಸ್.ಶಂಕರಲಿಂಗಯ್ಯ, ಸೈಯ್ಯದ್ ಇಬ್ರಾಹಿಂ, ಉಪನ್ಯಾಸಕ ವರ್ಗದವರು, ಗ್ರಾಮಸ್ಥರು ಉಪಸ್ಥಿತರಿದ್ದರು. ಹುಳಿಯಾರು ಸಮೀಪದ ಯಗಚಿಹಳ್ಳಿಯಲ್ಲಿ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ನೆಸ್ಸಸ್ ಸ್ವಯಂಸೇವಾ ಶಿಬಿರದಲ್ಲಿ ನಿವೃತ್ತ ಪ್ರಾಂಶುಪಾಲ ವಿಶ್ವೇಶ್ವರಯ್ಯ ಸಮಾರೋಪ ಭಾಷಣ ಮಾಡಿದರು

ಮೇವಿನಬೀಜ ವಿತರಣೆ

ಹುಳಿಯಾರು ಹೋಬಳಿ ಗಾಣಧಾಳು ಪಶು ಆಸ್ಪತ್ರೆಯಲ್ಲಿ ಬರಪರಿಹಾರ ಯೋಜನೆಯಡಿ ರೈತರಿಗೆ ಉಚಿತವಾಗಿ ಮೇವಿನಬೀಜವನ್ನು ವೈದ್ಯಾಧಿಕಾರಿ ಟಿ.ನೇತ್ರಾವತಿ, ಜಿ.ವೆಂಕಟಪ್ಪ ವಿತರಿಸಿದರು.

ವೈಭವಯುತ ಕಾರೇಹಳ್ಳಿ ಶ್ರೀರಂಗನಾಥಸ್ವಾಮಿ ಬ್ರಹ್ಮರಥೋತ್ಸವ

ಹುಳಿಯಾರು: ಹೋಬಳಿಯ ಕಾರೆಹಳ್ಳಿಯ ಪುರಾಣ ಪ್ರಸಿದ್ಧ ಶ್ರೀ ರಂಗನಾಥಸ್ವಾಮಿಯ ಮೂಲಸ್ಥಾನದಲ್ಲಿ ದನಗಳ ಜಾತ್ರೆ ಹಾಗೂ ಬ್ರಹ್ಮರಥೋತ್ಸವ ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಮಾ.14ರ ಶುಕ್ರವಾರದಂದು ಸಂಭ್ರಮ ಹಾಗೂ ವೈಭವಯುತವಾಗಿ ಭಕ್ತರ ಹರ್ಷೋದ್ಘಾರದೊಂದಿಗೆ ಜರುಗಿತು. ಕಳೆದ ಮೂರುದಿನಗಳಿಂದ ಜಾತ್ರೆ ಅಂಗವಾಗಿ ಕಂಕಣ, ಅಂಕುರಾರ್ಪಣೆ, ಧ್ವಜಾರೋಹಣ, ಉಯ್ಯಾಲೋತ್ಸವ, ಗಜಾರೋಹಣ, ಗರುಡ ವಾಹನೋತ್ಸವ, ಅನ್ನಸಂತರ್ಪಣೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಭಕ್ತರ ಭಕ್ತಿಯೊಂದಿಗೆ ವಿಧಿವತ್ತಾಗಿ ನಡೆದಿದ್ದು ಇಂದು ಮುಂಜಾನೆಯಿಂದಲೆ ರಥೋತ್ಸವದ ಪೂಜಾ ಕೈಂಕರ್ಯ ನಡೆದು, ವಿಪ್ರರುಗಳು ಸ್ವಾಮಿಯನ್ನು ಮೂಲ ದೇವಸ್ಥಾನದಿಂದ ಮಂಗಳವಾಧ್ಯ ಹಾಗೂ ಪೂರ್ಣಕುಂಭದೊಂದಿಗೆ ಸಹಸ್ರಾರು ಭಕ್ತರು ಉದ್ಘೋಷದೊಂದಿಗೆ ಕರೆತಂದು ವೈಭವಯುತವಾಗಿ ಅಲಂಕರಿಸಿದ್ದ ರಥದಲ್ಲಿ ಶ್ರೀ ಸ್ವಾಮಿಯವರನ್ನು ಕುಳ್ಳಿರಿಸಿ, ರಥದ ಮುಂದಿನ ಅಂಬನ್ನು ತುಂಡರಿಸುವ ಮೂಲಕ ಭಕ್ತರ ಜೈಕಾರದೊಂದಿಗೆ,ಬೆನಕನಹಳ್ಳಿ ರಂಗನಾಥಸ್ವಾಮಿ,ಹೊಯ್ಸಲಕಟ್ಟೆ ಕರಿಯಮ್ಮ ಯರೆಹಳ್ಳಿ ಕರಿಯಮ್ಮ ಹಾಗೂ ಇತರ ದೇವರುಗಳ ಸಮ್ಮುಖದಲ್ಲಿ ರಥವನ್ನು ಎಳೆಯುವ ಮೂಲಕ ರಥೋತ್ಸವ ನೆರವೇರಿಸಲಾಯಿತು. ಸುಡುವ ಬಿಸಿಲನ್ನೂ ಲೆಕ್ಕಿಸದೆ ಬೆಳಿಗ್ಗೆಯಿಂದಲೇ ಕಿಕ್ಕಿರಿದು ನೆರೆದಿದ್ದ ಭಕ್ತರು ರಥದ ಮೇಲೆ ಸರ್ವಾಲಂಕೃತಗೊಂಡಿದ್ದ ಸ್ವಾಮಿಯನ್ನು ಕಂಡು ಕೈಮುಗಿದು ತಮ್ಮ ಭಕ್ತಿಯನ್ನು ಸಮರ್ಪಿಸಿದರೆ ಕೆಲವರು