ಹುಳಿಯಾರು: ಹೋಬಳಿ ಯಗಚಿಹಳ್ಳಿಯಲ್ಲಿ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ನೆಸ್ಸಸ್ ಘಟಕದವತಿಯಿಂದ ಆಯೋಜಿಸಿದ್ದ ಒಂದು ವಾರದ ಸ್ವಯಂಸೇವಾ ಶಿಬಿರ ಯಶಸ್ವಿಯಾಗಿ ನಡೆದಿದ್ದು, ಗ್ರಾಮದಲ್ಲಿ ಹಿಂಗುಡಿ ನಿರ್ಮಾಣ, ಚರಂಡಿಗಳನ್ನು ಸ್ವಚ್ಚಗೊಳಿಸುವ ಕಾರ್ಯ ಸೇರಿದಂತೆ ಜನರಲ್ಲಿ ಸ್ವಚ್ಚತೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಸೇರಿದಂತೆ ಇತರ ಅನೇಕ ಸಾಮಾಜಿಕ ಚಟುವಟಿಗಳನ್ನು ಯಶಸ್ವಿಯಾಗಿ ನಡೆಸಲಾಯಿತು.
ಪ್ರಾಚಾರ್ಯ ಆರ್.ಮೂಗೇಶಪ್ಪ ಶಿಬಿರದ ಮುಕ್ತಾಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದು, ಶಿಬಿರದಲ್ಲಿ ಕೈಗೊಂಡಿದ್ದ ಕಾರ್ಯಗಳನ್ನು ಶಿಬಿರಾಧಿಕಾರಿಗಳ ಹಾಗೂ ಸ್ಥಳೀಯರ ಮಾರ್ಗದರ್ಶನದಲ್ಲಿ ಶಿಬಿರಾರ್ಥಿಗಳು ಅಚ್ಚುಕಟ್ಟಾಗಿ ನಿರ್ವಹಿರುವುದನ್ನು ಶ್ಲಾಘಿಸಿದರು. ಶಿಬಿರದಲ್ಲಿ ಕಲಿತ ಸ್ವಚ್ಚತಾ ಮನೋಭಾವವನ್ನು ಎಂದಿಗೂ ಮರೆಯದೆ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಾಧನೆಯ ಹಾದಿಯಲ್ಲಿ ನಡೆಯಿರಿ ಎಂದು ಆಶಿಸಿದರು. ನಿವೃತ್ತ ಪ್ರಾಂಶುಪಾಲ ವಿಶ್ವೇಶ್ವರಯ್ಯ ಸಮಾರೋಪ ಭಾಷಣ ಮಾಡಿದರು.ಗ್ರಾ.ಪಂ.ಅಧ್ಯಕ್ಷ ಶ್ರೀನಿವಾಸ್, ಶಿಬಿರಾಧಿಕಾರಿಗಳಾದ ಎಸ್.ಶಂಕರಲಿಂಗಯ್ಯ, ಸೈಯ್ಯದ್ ಇಬ್ರಾಹಿಂ, ಉಪನ್ಯಾಸಕ ವರ್ಗದವರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಹುಳಿಯಾರು ಸಮೀಪದ ಯಗಚಿಹಳ್ಳಿಯಲ್ಲಿ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ನೆಸ್ಸಸ್ ಸ್ವಯಂಸೇವಾ ಶಿಬಿರದಲ್ಲಿ ನಿವೃತ್ತ ಪ್ರಾಂಶುಪಾಲ ವಿಶ್ವೇಶ್ವರಯ್ಯ ಸಮಾರೋಪ ಭಾಷಣ ಮಾಡಿದರು.ಪ್ರಾಚಾರ್ಯ ಆರ್.ಮೂಗೇಶಪ್ಪ ಇತರರಿದ್ದಾರೆ. |
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ