ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಏಪ್ರಿಲ್, 2014 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ
ಬಸವೇಶ್ವರ ಸ್ವಾಮಿಯ ರಥೋತ್ಸವ -------- ಈಗ ಎಲ್ಲೆಡೆ ಜಾತ್ರೆಯ ಸುಗ್ಗಿ.ಸುಡುವ ಬಿಸಿಲನ್ನು ಲೆಕ್ಕಿಸದೆ ತಮ್ಮೂರಿನ ಜಾತ್ರೆಯಲ್ಲಿ ಎಲ್ಲರೂ ಸಂತಸದಿಂದ ಪಾಲ್ಗೊಳ್ಳುವುದೇ ವಿಶೇಷ.ಹಳ್ಳಿ ಬಿಟ್ಟು ಪಟ್ಟಣ ಸೇರಿರುವವರು ಸಹ ಅವರೂರಿನ ಜಾತ್ರೆಗೆ ತಪ್ಪದೆ ಹಾಜರ್. ಹಳ್ಳಿಯವರಿಗೇನೋ ಈ ರೀತಿಯ ಜಾತ್ರೆ ಮಾಮೂಲು.ಆದ್ರೆ ಪಟ್ಟಣದಲ್ಲಿರೋ ಮಕ್ಕಳಿಗೆ ಈ ಜಾತ್ರೆಗಳೆಲ್ಲ ಬೆರಗು ಹುಟ್ಟಿಸುತ್ತೊ ಇಲ್ವೋ......   ನಿಮ್ಮೆಲ್ಲರಿಗಾಗಿ ನಮ್ಮೂರ ಸಮೀಪದ ತೊರೆಸೂರಗೊಂಡನಹಳ್ಳಿಯಲ್ಲಿ ನೂರಾರು ಭಕ್ತಾಧಿಗಳ ಹರ್ಷೋದ್ಘಾರದಲ್ಲಿ ಸೋಮವಾರ ಮಧ್ಯಾಹ್ನ ವೈಭವಯುತವಾಗಿ ನಡೆದ ಶ್ರೀಬಸವೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ಫೋಟೊ ಹಾಕ್ತಿದ್ದೀನಿ....  ಸೋಮವಾರ ಬೆಳಿಗ್ಗೆ ಸ್ವಾಮಿಯವರ ಮೂಲಸ್ಥಾನಕ್ಕೆ ದರ್ಬಾರ್ ಅಲಂಕಾರ ಕಾರ್ಯ ಮಾಡಿದ್ದು , ಹೊಳೆಸೇವೆ ಹಾಗೂ ಅಗ್ನಿಕೊಂಡ ಸೇವಾ ಕಾರ್ಯ ನಡೆಸಲಾಯಿತು.ರಥೋತ್ಸವದ ಅಂಗವಾಗಿ ನಾನಾ ಧಾರ್ಮಿಕಕಾರ್ಯಗಳು ನಡೆದು ಮಧ್ಯಾಹ್ನ 11.30ರ ಸಮಯದಲ್ಲಿ ಸಕಲವಾದ್ಯಗಳ ಸಮೇತ ಬಸವೇಶ್ವರ ಸ್ವಾಮಿಯನ್ನು ಚೌಡಮ್ಮನವರ ಸಮ್ಮುಖದಲ್ಲಿ ಕರೆತಂದು ಅಲಂಕೃತ ರಥದಲ್ಲಿ ಕುಳ್ಳಿರಿಸಿ ಭಕ್ತಾಧಿಗಳು ಜಯಕಾರ ಹಾಕುವ ಮೂಲಕ ರಥವನ್ನೆಳೆದು ತಮ್ಮ ಭಕ್ತಿಭಾವ ಅರ್ಪಿಸಿದರು. ಆಗಮಿಸಿದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆದು ನಂತರ ವೀರಗಾಸೆ ನೃತ್ಯದೊಂದಿಗೆ ಸ್ವಾಮಿಯವರ ಅಡ್ಡಪಲ್ಲಕ್ಕಿ ಉತ್ಸವ ನಡೆಯಿತು.  ಅಗ್ನಿಕುಂಡ ಸೇವೆ ಏನೂಂತ

ನಗರ ಸ್ವಚ್ಚವಾಗಿಡಲು ಪೌರಕಾರ್ಮಿಕ ಸಹಕಾರ ಅಗತ್ಯ : ಕಾರ್ಯದರ್ಶಿ ಅಡವೀಶ್

 ಯಾವುದೇ ಒಂದು ಪಟ್ಟಣವನ್ನು ಸ್ವಚ್ಚವಾಗಿಡುವುದು ಅಲ್ಲಿನ ಪಂಚಾಯ್ತಿಯ ಎಲ್ಲಾ ಪೌರಕಾರ್ಮಿಕರ ದೈನಂದಿನ ಕಾರ್ಯವಾಗಿದ್ದು ,ಕೆಲಸದ ವಿಚಾರವಾಗಿ ಪಂಚಾಯ್ತಿಸದಸ್ಯರುಗಳು ಹಾಗೂ ಅಲ್ಲಿನ ಅಧಿಕಾರಿಗಳ ಜೊತೆ ಅವರು ಸೌಹಾರ್ದಯುತವಾಗಿ ನಡೆದುಕೊಳ್ಳುವ ಮೂಲಕ ಪಂಚಾಯ್ತಿಗೆ ಉತ್ತಮ ಹೆಸರು ತರಬೇಕೆಂದು ಕಾರ್ಯದರ್ಶಿ ಅಡವೀಶ್ ಕುಮಾರ್ ತಿಳಿಸಿದರು. ಹುಳಿಯಾರು ಪಂಚಾಯ್ತಿಯಲ್ಲಿ ಸೋಮವಾರ ನಡೆದ ಪೌರಕಾರ್ಮಿಕರ ಸಭೆಯಲ್ಲಿ ಅವರು ಮಾತನಾಡಿದರು. ಬೇಸಿಗೆಯಲ್ಲಿ ನೀರಿನ ಸಮಸ್ಯೆ ಉಲ್ಬಣವಾಗಿದ್ದು ಯಾವುದೇಕಾರಣಕ್ಕೂ ನೀರಿನ ಸರಬರಾಜಿನಲ್ಲಿ ವ್ಯತ್ಯಾಸವಾಗದಂತೆ ನೋಡಿಕೊಳ್ಳಬೇಕೆಂದು ನೀರು ವಿತರಕರುಗಳಿಗೆ ಸೂಚಿಸಿದ ಅವರು ವಾಟರ್ ಟ್ಯಾಂಕ್,ಸಿಸ್ಟನ್ ತೊಳೆಯುವುದು,ಬೋರ್ ವೆಲ್,ಪೈಪ್ ಲೈನ್ ರಿಪೇರಿ ಕೆಲಸಗಳನ್ನು ಸಂಬಂಧಪಟ್ಟ ವಾಟರ್ಮೆನ್ ಸಕ್ರಿಯವಾಗಿ ನಿರ್ವಹಿಸುವುದು ನಿಮ್ಮಗಳ ಜವಬ್ದಾರಿಯಾಗಿದ್ದು ಈ ಬಗ್ಗೆ ಸಾರ್ವಜನಿಕರಿಂದ ದೂರು ಬಂದಲ್ಲಿ ನಿಮ್ಮನ್ನೆ ಗುರಿಯಾಗಿಸುವುದಾಗಿ ಎಚ್ಚರಿಸಿದರು. ಪೌರಕಾರ್ಮಿಕರು ತಮಗೆವಹಿಸಿ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ನಿರ್ವಹಿಸಿದಾಗ ಮಾತ್ರ ಪಟ್ಟಣ ಸ್ವಚ್ಚವಾಗಿರುತ್ತದೆ ಎಂದ ಅವರು ಅಧಿಕಾರಿಗಳು ಕೇಳಿದಾಗ ಅಲ್ಲಿ,ಇಲ್ಲಿ ಕೆಲಸ ಮಾಡುತ್ತಿದ್ದೇನೆಂದು ಹೇಳಿ ಹಾಜರಿ ಹಾಕಿಸುವ ಬದಲು ಪ್ರತಿ ದಿನ ಕಛೇರಿಗೆ ಬಂದು ಸಹಿ ಪುಸ್ತಕದಲ್ಲಿ ತಮ್ಮ ಹಾಜರಾತಿ ಹಾಕುವುದು ಕಡ್ಡಾಯವೆಂದರು. ಪ್ರತಿ ದಿನ ಮುಂಜಾನೆ 5ರಿಂದ 8

ಹುಳಿಯಾರು ಗ್ರಾ.ಪಂ : ನೌಕರ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ

 ಗ್ರಾಮಪಂಚಾಯಿತಿ ನೌಕರರಸಂಘದ 2014-15 ನೇ ಅವಧಿಯ ಪದಾಧಿಕಾರಿಗಳ ಆಯ್ಕೆ ಸೋಮವಾರ ಬೆಳಿಗ್ಗೆ ಗ್ರಾ.ಪಂ.ಅಧ್ಯಕ್ಷೆ ಪುಟ್ಟಿಬಾಯಿ ಹಾಗೂ ಕಾರ್ಯದರ್ಶಿ ಅಡವೀಶ್ ಕುಮಾರ್ ಸಮ್ಮುಖದಲ್ಲಿ ಪಂಚಾಯ್ತಿ ಕಛೇರಿಯಲ್ಲಿ ನಡೆಯಿತು. ಹುಳಿಯಾರು ಗ್ರಾ.ಪಂಯ ನೌಕರ ಸಂಘದ ಪದಾಧಿಕಾರಿಗಳು. ಸಂಘದ ಅಧ್ಯಕ್ಷರಾಗಿ ಸರ್ದಾರ್, ಉಪಾಧ್ಯಕ್ಷರಾಗಿ ಕರಿಯಪ್ಪ,ಖಜಾಂಜಿ ಬಿಲ್ ಕಲೆಕ್ಟರ್ ರಾಜಣ್ಣ, ಕಾರ್ಯದರ್ಶಿ ವೆಂಕಟೇಶ್(ಬಿಲ್ ಕಲೆಕ್ಟರ್), ಸಹಕಾರ್ಯದರ್ಶಿ ಆನಂದ್(ಬಿಲ್ ಕಲೆಕ್ಟರ್) ಅವರುಗಳನ್ನು ಉಳಿದ ಸಿಬ್ಬಂದಿವರ್ಗದವರು ಸಹಾನುಮತದಿಂದ ಆಯ್ಕೆ ಮಾಡಿದ್ದಾರೆ.

ನಾಳೆ(ತಾ.30) ಕೃಷಿ ಅಭಿವೃದ್ಧಿ ಸಾಲ ಸೌಲಭ್ಯ ಕುರಿತು ರೈತರ ಸಭೆ

ಹುಳಿಯಾರು: ಬೆಂಗಳೂರಿನ ಅಗ್ರಿ ಇನ್ ಸೈಟ್ಸ್ ಕನ್ಸಲ್ಟೆನ್ಸಿ ಸರ್ವೀಸಸ್ ಪ್ರೈವೇಟ್ ಲಿಮಿಡೆಡ್ ಹಾಗೂ ಕೆನರಾ ಬ್ಯಾಂಕ್ ನ ಗ್ರಾಮಾಂತರ ವೃತ್ತ ಕಛೇರಿಯ ಸಹಭಾಗಿತ್ವದಲ್ಲಿ ಹೋಬಳಿ ಕೆಂಕೆರೆ ಗ್ರಾಮದ ಗೊಲ್ಲರಹಟ್ಟಿ ಗೇಟ್ ನಲ್ಲಿರುವ ಈಶ್ವರಪ್ಪನವರ ತೋಟದಲ್ಲಿ ಕೃಷಿ ಅಭಿವೃದ್ಧಿ ಸಾಲ ಸೌಲಭ್ಯ ಕುರಿತು ರೈತರ ಸಭೆಯನ್ನು ನಾಳೆ(ತಾ.30) ಬುಧವಾರ ಬೆಳಿಗ್ಗೆ ಆಯೋಜಿಸಲಾಗಿದೆ. ಕೆನರಾ ಬ್ಯಾಂಕ್ ವೃತ್ತಕಛೇರಿಯ ಉಪಮಹಾ ಪ್ರಭಂದಕ ಎಂ.ಎಂ.ಚೀನಿವಾರ್ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದು, ಕೆನರಾಬ್ಯಾಂಕ್ ನ ಸಹಾಯಕ ಮಹಾಪ್ರಭಂಧಕ ಆರ್.ಜೆ.ಸ್ವಾಮಿ ಕೃಷಿಕರಿಗೆ ಆರ್ಥಿಕ ನೆರವಿನ ಬಗ್ಗೆ ಹಾಗೂ ಚಿ.ನಾ.ಹಳ್ಳಿ ಹಿರಿಯ ತೋಟಗಾರಿಕೆ ಅಧಿಕಾರಿಗಳು ಮಾಹಿತಿ ತಂತ್ರಜ್ಞಾನ ಹಾಗೂ ಅವುಗಳ ಪ್ರಯೋಜನದ ಬಗ್ಗೆ ಸೂಕ್ತ ಮಾಹಿತಿ ನೀಡುವರು. ಜೊತೆಗೆ ಈ ಸಭೆಯಲ್ಲಿ ದಾಳಿಂಬೆಕೃಷಿ, ಹಸಿರು ಮನೆಯಲ್ಲಿ ತರಕಾರಿ ಬೇಸಾಯ,ಹೈನುಗಾರಿಕೆ,ಕುರಿ ಮತ್ತು ಮೇಕೆ ಸಾಕಾಣಿಕೆ ಸೇರಿದಂತೆ ಕೃಷಿ ಚಟುವಟಿಕೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸೂಕ್ತ ಮಾಹಿತಿ ಹಾಗೂ ಅವುಗಳನ್ನು ಕೈಗೊಳ್ಳಲು ಕೆನರಾಬ್ಯಾಂಕ್ ನಿಂದ ತ್ವರಿತ ಕೃಷಿ ಸಾಲದ ವ್ಯವಸ್ಥೆಯ ಬಗ್ಗೆ ತಿಳಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಆರ್.ಜಿ.ಸ್ವಾಮಿ,(9845255395), ಹೇಮಾರೆಡ್ಡಿ(9986905962), ಸುಬ್ರಹ್ಮಣ್ಯ(9449028395), ಹುಳಿಯಾರು ಕೆನರಾಬ್ಯಾಂಕ್ ನ ಮ್ಯಾನೇಜರ್ ವಿಜಯ್ ಕುಮಾರ್(9483530533), ವಿಸ್