ಬಸವೇಶ್ವರ ಸ್ವಾಮಿಯ ರಥೋತ್ಸವ
ಸೋಮವಾರ ಬೆಳಿಗ್ಗೆ ಸ್ವಾಮಿಯವರ ಮೂಲಸ್ಥಾನಕ್ಕೆ ದರ್ಬಾರ್ ಅಲಂಕಾರ ಕಾರ್ಯ ಮಾಡಿದ್ದು , ಹೊಳೆಸೇವೆ ಹಾಗೂ ಅಗ್ನಿಕೊಂಡ ಸೇವಾ ಕಾರ್ಯ ನಡೆಸಲಾಯಿತು.ರಥೋತ್ಸವದ ಅಂಗವಾಗಿ ನಾನಾ ಧಾರ್ಮಿಕಕಾರ್ಯಗಳು ನಡೆದು ಮಧ್ಯಾಹ್ನ 11.30ರ ಸಮಯದಲ್ಲಿ ಸಕಲವಾದ್ಯಗಳ ಸಮೇತ ಬಸವೇಶ್ವರ ಸ್ವಾಮಿಯನ್ನು ಚೌಡಮ್ಮನವರ ಸಮ್ಮುಖದಲ್ಲಿ ಕರೆತಂದು ಅಲಂಕೃತ ರಥದಲ್ಲಿ ಕುಳ್ಳಿರಿಸಿ ಭಕ್ತಾಧಿಗಳು ಜಯಕಾರ ಹಾಕುವ ಮೂಲಕ ರಥವನ್ನೆಳೆದು ತಮ್ಮ ಭಕ್ತಿಭಾವ ಅರ್ಪಿಸಿದರು. ಆಗಮಿಸಿದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆದು ನಂತರ ವೀರಗಾಸೆ ನೃತ್ಯದೊಂದಿಗೆ ಸ್ವಾಮಿಯವರ ಅಡ್ಡಪಲ್ಲಕ್ಕಿ ಉತ್ಸವ ನಡೆಯಿತು.
--------
ಈಗ ಎಲ್ಲೆಡೆ ಜಾತ್ರೆಯ ಸುಗ್ಗಿ.ಸುಡುವ ಬಿಸಿಲನ್ನು ಲೆಕ್ಕಿಸದೆ ತಮ್ಮೂರಿನ ಜಾತ್ರೆಯಲ್ಲಿ ಎಲ್ಲರೂ ಸಂತಸದಿಂದ ಪಾಲ್ಗೊಳ್ಳುವುದೇ ವಿಶೇಷ.ಹಳ್ಳಿ ಬಿಟ್ಟು ಪಟ್ಟಣ ಸೇರಿರುವವರು ಸಹ ಅವರೂರಿನ ಜಾತ್ರೆಗೆ ತಪ್ಪದೆ ಹಾಜರ್.
ಹಳ್ಳಿಯವರಿಗೇನೋ ಈ ರೀತಿಯ ಜಾತ್ರೆ ಮಾಮೂಲು.ಆದ್ರೆ ಪಟ್ಟಣದಲ್ಲಿರೋ ಮಕ್ಕಳಿಗೆ ಈ ಜಾತ್ರೆಗಳೆಲ್ಲ ಬೆರಗು ಹುಟ್ಟಿಸುತ್ತೊ ಇಲ್ವೋ......
ನಿಮ್ಮೆಲ್ಲರಿಗಾಗಿ ನಮ್ಮೂರ ಸಮೀಪದ ತೊರೆಸೂರಗೊಂಡನಹಳ್ಳಿಯಲ್ಲಿ ನೂರಾರು ಭಕ್ತಾಧಿಗಳ
ಹರ್ಷೋದ್ಘಾರದಲ್ಲಿ ಸೋಮವಾರ ಮಧ್ಯಾಹ್ನ ವೈಭವಯುತವಾಗಿ ನಡೆದ ಶ್ರೀಬಸವೇಶ್ವರ ಸ್ವಾಮಿ
ಬ್ರಹ್ಮರಥೋತ್ಸವ ಫೋಟೊ ಹಾಕ್ತಿದ್ದೀನಿ....ಸೋಮವಾರ ಬೆಳಿಗ್ಗೆ ಸ್ವಾಮಿಯವರ ಮೂಲಸ್ಥಾನಕ್ಕೆ ದರ್ಬಾರ್ ಅಲಂಕಾರ ಕಾರ್ಯ ಮಾಡಿದ್ದು , ಹೊಳೆಸೇವೆ ಹಾಗೂ ಅಗ್ನಿಕೊಂಡ ಸೇವಾ ಕಾರ್ಯ ನಡೆಸಲಾಯಿತು.ರಥೋತ್ಸವದ ಅಂಗವಾಗಿ ನಾನಾ ಧಾರ್ಮಿಕಕಾರ್ಯಗಳು ನಡೆದು ಮಧ್ಯಾಹ್ನ 11.30ರ ಸಮಯದಲ್ಲಿ ಸಕಲವಾದ್ಯಗಳ ಸಮೇತ ಬಸವೇಶ್ವರ ಸ್ವಾಮಿಯನ್ನು ಚೌಡಮ್ಮನವರ ಸಮ್ಮುಖದಲ್ಲಿ ಕರೆತಂದು ಅಲಂಕೃತ ರಥದಲ್ಲಿ ಕುಳ್ಳಿರಿಸಿ ಭಕ್ತಾಧಿಗಳು ಜಯಕಾರ ಹಾಕುವ ಮೂಲಕ ರಥವನ್ನೆಳೆದು ತಮ್ಮ ಭಕ್ತಿಭಾವ ಅರ್ಪಿಸಿದರು. ಆಗಮಿಸಿದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆದು ನಂತರ ವೀರಗಾಸೆ ನೃತ್ಯದೊಂದಿಗೆ ಸ್ವಾಮಿಯವರ ಅಡ್ಡಪಲ್ಲಕ್ಕಿ ಉತ್ಸವ ನಡೆಯಿತು.
ಅಗ್ನಿಕುಂಡ ಸೇವೆ ಏನೂಂತ ನೋಡಿದ್ರಲ್ಲ......ಈ ಬಗ್ಗೆ ನಿಮಿಗೇನನ್ನಿಸಿತು ಹೇಳಿ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ