ಯಾವುದೇ ಒಂದು ಪಟ್ಟಣವನ್ನು ಸ್ವಚ್ಚವಾಗಿಡುವುದು ಅಲ್ಲಿನ ಪಂಚಾಯ್ತಿಯ ಎಲ್ಲಾ ಪೌರಕಾರ್ಮಿಕರ ದೈನಂದಿನ ಕಾರ್ಯವಾಗಿದ್ದು ,ಕೆಲಸದ ವಿಚಾರವಾಗಿ ಪಂಚಾಯ್ತಿಸದಸ್ಯರುಗಳು ಹಾಗೂ ಅಲ್ಲಿನ ಅಧಿಕಾರಿಗಳ ಜೊತೆ ಅವರು ಸೌಹಾರ್ದಯುತವಾಗಿ ನಡೆದುಕೊಳ್ಳುವ ಮೂಲಕ ಪಂಚಾಯ್ತಿಗೆ ಉತ್ತಮ ಹೆಸರು ತರಬೇಕೆಂದು ಕಾರ್ಯದರ್ಶಿ ಅಡವೀಶ್ ಕುಮಾರ್ ತಿಳಿಸಿದರು.
ಹುಳಿಯಾರು ಪಂಚಾಯ್ತಿಯಲ್ಲಿ ಸೋಮವಾರ ನಡೆದ ಪೌರಕಾರ್ಮಿಕರ ಸಭೆಯಲ್ಲಿ ಅವರು ಮಾತನಾಡಿದರು.
ಬೇಸಿಗೆಯಲ್ಲಿ ನೀರಿನ ಸಮಸ್ಯೆ ಉಲ್ಬಣವಾಗಿದ್ದು ಯಾವುದೇಕಾರಣಕ್ಕೂ ನೀರಿನ ಸರಬರಾಜಿನಲ್ಲಿ ವ್ಯತ್ಯಾಸವಾಗದಂತೆ ನೋಡಿಕೊಳ್ಳಬೇಕೆಂದು ನೀರು ವಿತರಕರುಗಳಿಗೆ ಸೂಚಿಸಿದ ಅವರು ವಾಟರ್ ಟ್ಯಾಂಕ್,ಸಿಸ್ಟನ್ ತೊಳೆಯುವುದು,ಬೋರ್ ವೆಲ್,ಪೈಪ್ ಲೈನ್ ರಿಪೇರಿ ಕೆಲಸಗಳನ್ನು ಸಂಬಂಧಪಟ್ಟ ವಾಟರ್ಮೆನ್ ಸಕ್ರಿಯವಾಗಿ ನಿರ್ವಹಿಸುವುದು ನಿಮ್ಮಗಳ ಜವಬ್ದಾರಿಯಾಗಿದ್ದು ಈ ಬಗ್ಗೆ ಸಾರ್ವಜನಿಕರಿಂದ ದೂರು ಬಂದಲ್ಲಿ ನಿಮ್ಮನ್ನೆ ಗುರಿಯಾಗಿಸುವುದಾಗಿ ಎಚ್ಚರಿಸಿದರು.
ಪೌರಕಾರ್ಮಿಕರು ತಮಗೆವಹಿಸಿ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ನಿರ್ವಹಿಸಿದಾಗ ಮಾತ್ರ ಪಟ್ಟಣ ಸ್ವಚ್ಚವಾಗಿರುತ್ತದೆ ಎಂದ ಅವರು ಅಧಿಕಾರಿಗಳು ಕೇಳಿದಾಗ ಅಲ್ಲಿ,ಇಲ್ಲಿ ಕೆಲಸ ಮಾಡುತ್ತಿದ್ದೇನೆಂದು ಹೇಳಿ ಹಾಜರಿ ಹಾಕಿಸುವ ಬದಲು ಪ್ರತಿ ದಿನ ಕಛೇರಿಗೆ ಬಂದು ಸಹಿ ಪುಸ್ತಕದಲ್ಲಿ ತಮ್ಮ ಹಾಜರಾತಿ ಹಾಕುವುದು ಕಡ್ಡಾಯವೆಂದರು. ಪ್ರತಿ ದಿನ ಮುಂಜಾನೆ 5ರಿಂದ 8 ಗಂಟೆವರೆಗೆ ಬಸ್ ಸ್ಟಾಂಡ್ ಸೇರಿದಂತೆ ಪಟ್ಟಣದ ಬೀದಿಗಳ ಕಸ ಗುಡಿಸಿ ತೆರವುಗೊಳಿಸಬೇಕು, ನಂತರ 10ರಿಂದ 3 ಗಂಟೆಯವರೆಗೆ ಪಟ್ಟಣದ ಚರಂಡಿಗಳನ್ನು ಸ್ವಚ್ಚ ಮಾಡುವ ಕಾರ್ಯ ಮಾಡಬೇಕಿದ್ದು ಪೌರಕಾರ್ಮಿಕರು ಗೊತ್ತು ಮಾಡಿರುವ ಸಮವಸ್ತ್ರವನ್ನು ತಮ್ಮ ಕೆಲಸದ ಅವಧಿಯಲ್ಲಿ ಧರಿಸಬೇಕೆಂದು ಸೂಚಿಸಿದರು. ಎಲ್ಲಾ ಪೌರಕಾರ್ಮಿಕರಿಗಾಗಿ ಜೀವವಿಮೆ ಮಾಡಿಸಿದ್ದು ಅವರ ವೇತನದಲ್ಲಿ ಕಟ್ ಆಗುತ್ತಿದೆ ಎಂದರು.
ಹುಳಿಯಾರು ಗ್ರಾ.ಪಂ.ಯ ಪೌರಕಾರ್ಮಿಕರ ಸಭೆಯಲ್ಲಿ ಅಧ್ಯಕ್ಷೆ ಪುಟ್ಟಿಬಾಯಿ,ಕಾರ್ಯದರ್ಶಿ ಅಡವೀಶ್ ಕುಮಾರ್ ಇದ್ದಾರೆ. |
ಇದೇ ಸಂದರ್ಭದಲ್ಲಿ ತಮ್ಮ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದ ಪೌರಕಾರ್ಮಿಕರು ಚರಂಡಿ ಕ್ಲೀನ್ ಮಾಡಲು ಹೋದಾಗ ಮನೆಯವರು ಗಲಾಟೆ ಮಾಡುವ ಬದಲು ತಮ್ಮೊಂದಿಗೆ ಸಹಕರಿಸಬೇಕು , ಪಂಚಾಯ್ತಿಯಿಂದ ಕೊಟ್ಟಿರುವ ಶೋ,ಹ್ಯಾಂಡ್ ಗ್ಲೋವ್ಸ್ ಶಿಥಿಲವಾಗಿದ್ದು ಹೊಸದನ್ನು ಕೊಡಬೇಕು ಹಾಗೂ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ಹೊದರೆ ನಮ್ಮ ಹತ್ತಿರವೂ ಸಹ ಹಣ ಕೇಳುತ್ತಾರೆ ಈ ಬಗ್ಗೆ ಪಂಚಾಯ್ತಿ ಅಧಿಕಾರಿಗಳು ಆಸ್ಪತ್ರೆಯ ವೈದ್ಯರಿಗೆ ತಿಳಿಸಬೇಕಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡು ಅವುಗಳನ್ನು ಪರಿಹರಿಸಿಕೊಡುವಂತೆ ಮತ್ತು ಯಶಸ್ವಿನಿ ಸೌಲಭ್ಯವನ್ನು ನಮಗೂ ಉಚಿತವಾಗಿ ದೊರೆಯುವಂತೆ ಮಾಡಬೇಕು ಎಂದು ಮನವಿ ಮಾಡಿದರು.
ಅಧ್ಯಕ್ಷೆ ಪುಟ್ಟಿಬಾಯಿ ಹಾಗೂ ಎಲ್ಲಾ ಪೌರಕಾರ್ಮಿಕರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ