ನಾಗಾಸಾಧುಗಳ ಉಪಸ್ಥಿತಿ:ಖ್ಯಾತ ಕಲಾವಿದರಿಂದ ಸಾಂಸ್ಕೃತಿಕಕಾರ್ಯಕ್ರಮ ಹುಳಿಯಾರು :ಪಟ್ಟಣದ ಕೋಡಿಪಾಳ್ಯದಲ್ಲಿ ಶ್ರೀ ಮಾತಾ ಚಾರಿಟಲ್ ಟ್ರಸ್ಟ್ ವತಿಯಿಂದ ನೂತನವಾಗಿ ಬಹುಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಶ್ರೀ ಕಂಕಾಳಿ ಮಾತೆ, ಶ್ರೀ ತುಳಜಾ ಭವಾನಿ, ಶ್ರೀ ಮರಿಯಮ್ಮ, ಶ್ರೀ ಬಲಮುರಿ ಗಣಪತಿ, ಶ್ರೀ ನವಗ್ರಹ ದೇವತೆಗಳು ಹಾಗೂ ಶ್ರೀ ಅನಂತ ಪದ್ಮನಾಭ ಸ್ವಾಮಿ ಮೂರ್ತಿಗಳ ಸ್ಥಿರಬಿಂಬ ಪ್ರತಿಷ್ಠಾಪನೆ ಹಾಗೂ ವಿಮಾನ ಗೋಪುರ ಸಹಸ್ರ ಕುಂಭಾಭಿಷೇಕ ಮಹೋತ್ಸವವು ಮೇ ೩ ರಿಂದ ೫ರವರೆಗೆ ಜರುಗಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಗಂಗಾಧರ್ ತಿಳಿಸಿದರು. ನೂತನ ದೇವಾಲಯ ಆವರಣದಲ್ಲಿನ ಸೇವಾಲಾಲ್ ಸಾಂಸ್ಕೃತಿಕ ಸದನದಲ್ಲಿ ಭಾನುವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ದೇವಾಲಯದ ಲೋಕಾರ್ಪಣೆ ಕುರಿತಂತೆ ಮಾತನಾಡಿದ ಅವರು ಮೇ ೩,೪ ಹಾಗೂ ೫ ರಂದು ದೇವಾಲಯಗಳ ಪ್ರಾರಂಭೋತ್ಸವವನ್ನು ಆಗಮ ಶಾಸ್ತ್ರದಂತೆ ನಡೆಸಲಾಗುವುದು ಎಂದರು.ಈ ನೂತನ ದೇವಾಲಯವನ್ನು ಸುಮಾರು ೩೦ ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ೫ ಎಕರೆ ಜಾಗದಲ್ಲಿ ದೇವಾಲಯ ಸೇರಿದಂತೆ,ಸೇವಾಲಾಲ್ ಸಾಂಸ್ಕೃತಿಕ ಸದನ, ಪಿರಮಿಡ್ ಆಕಾರದ ೨೦೦ ಮಂದಿ ಧ್ಯಾನ ಮಾಡಬಹುದಾದ ಧ್ಯಾನ ಮಂದಿರವನ್ನು ಕೂಡಾ ನಿರ್ಮಿಸಲಾಗಿದ್ದು ಪ್ರತಿಷ್ಟಾಪನೆಗೆ ಹಿಮಾಲಯದಲ್ಲಿ ತಪಸ್ಸು ನಿರತರಾಗಿರುವ ನಾಗಸಾಧುಗಳು ಆಗಮಿಸಲಿದ್ದಾರೆ ಎಂದರು.ಕಾರ್ಯಕ್ರಮಕ್ಕೆ ರಾಜ್ಯದ ವಿವಿಧೆ...
📰 ಹುಳಿಯಾರು ಸೇರಿದಂತೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸ್ಥಳಿಯ ಸುದ್ದಿ ಸಮಾಚಾರದ ಬ್ಲಾಗ್........ ✍️ನರೇಂದ್ರಬಾಬು ಹುಳಿಯಾರು-📞9448760070