ವಿಷಯಕ್ಕೆ ಹೋಗಿ

ಕೋಡಿಪಾಳ್ಯದಲ್ಲಿ ಮೇ ೩ ರಿಂದ ಕಂಕಾಳಿನೂತನ ಮತ್ತು ತುಳುಜಾ ಭವಾನಿ ದೇವಾಲಯದ ಉದ್ಘಾಟನೆ

ನಾಗಾಸಾಧುಗಳ ಉಪಸ್ಥಿತಿ:ಖ್ಯಾತ ಕಲಾವಿದರಿಂದ ಸಾಂಸ್ಕೃತಿಕಕಾರ್ಯಕ್ರಮ

ಹುಳಿಯಾರು:ಪಟ್ಟಣದ ಕೋಡಿಪಾಳ್ಯದಲ್ಲಿ ಶ್ರೀ ಮಾತಾ ಚಾರಿಟಲ್ ಟ್ರಸ್ಟ್ ವತಿಯಿಂದ ನೂತನವಾಗಿ ಬಹುಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಶ್ರೀ ಕಂಕಾಳಿ ಮಾತೆ, ಶ್ರೀ ತುಳಜಾ ಭವಾನಿ, ಶ್ರೀ ಮರಿಯಮ್ಮ, ಶ್ರೀ ಬಲಮುರಿ ಗಣಪತಿ, ಶ್ರೀ ನವಗ್ರಹ ದೇವತೆಗಳು ಹಾಗೂ ಶ್ರೀ ಅನಂತ ಪದ್ಮನಾಭ ಸ್ವಾಮಿ ಮೂರ್ತಿಗಳ ಸ್ಥಿರಬಿಂಬ ಪ್ರತಿಷ್ಠಾಪನೆ ಹಾಗೂ ವಿಮಾನ ಗೋಪುರ ಸಹಸ್ರ ಕುಂಭಾಭಿಷೇಕ ಮಹೋತ್ಸವವು ಮೇ ೩ ರಿಂದ ೫ರವರೆಗೆ ಜರುಗಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಗಂಗಾಧರ್ ತಿಳಿಸಿದರು.

           ನೂತನ ದೇವಾಲಯ ಆವರಣದಲ್ಲಿನ ಸೇವಾಲಾಲ್ ಸಾಂಸ್ಕೃತಿಕ ಸದನದಲ್ಲಿ ಭಾನುವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ದೇವಾಲಯದ ಲೋಕಾರ್ಪಣೆ ಕುರಿತಂತೆ ಮಾತನಾಡಿದ ಅವರು ಮೇ ೩,೪ ಹಾಗೂ ೫ ರಂದು ದೇವಾಲಯಗಳ ಪ್ರಾರಂಭೋತ್ಸವವನ್ನು ಆಗಮ ಶಾಸ್ತ್ರದಂತೆ ನಡೆಸಲಾಗುವುದು ಎಂದರು.ಈ ನೂತನ ದೇವಾಲಯವನ್ನು ಸುಮಾರು ೩೦ ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ೫ ಎಕರೆ ಜಾಗದಲ್ಲಿ ದೇವಾಲಯ ಸೇರಿದಂತೆ,ಸೇವಾಲಾಲ್ ಸಾಂಸ್ಕೃತಿಕ ಸದನ, ಪಿರಮಿಡ್ ಆಕಾರದ ೨೦೦ ಮಂದಿ ಧ್ಯಾನ ಮಾಡಬಹುದಾದ ಧ್ಯಾನ ಮಂದಿರವನ್ನು ಕೂಡಾ ನಿರ್ಮಿಸಲಾಗಿದ್ದು ಪ್ರತಿಷ್ಟಾಪನೆಗೆ ಹಿಮಾಲಯದಲ್ಲಿ ತಪಸ್ಸು ನಿರತರಾಗಿರುವ ನಾಗಸಾಧುಗಳು ಆಗಮಿಸಲಿದ್ದಾರೆ ಎಂದರು.ಕಾರ್ಯಕ್ರಮಕ್ಕೆ ರಾಜ್ಯದ ವಿವಿಧೆಡೆಗಳಿಂದ ಭಕ್ತಾದಿಗಳು ಬರುವ ನಿರೀಕ್ಷೆ ಇದ್ದು, ಬರುವ ಎಲ್ಲ ಭಕ್ತರಿಗೂ ಊಟದ ವ್ಯವಸ್ಥೆ ಕಲ್ಪಿಸಲು ವ್ಯವಸ್ಥೆ ಮಾಡಲಾಗಿದೆ ಎಂದರು.
ದೇವಾಲಯದ ಆವರಣದಲ್ಲಿ ನಿರ್ಮಿಸಲಾಗಿರುವ ಶ್ರೀ ಅನಂತಪದ್ಮನಾಭಸ್ವಾಮಿ
           ನಾಗಾಸಾಧುಗಳ ದಿವ್ಯ ಸಾನಿಧ್ಯದಲ್ಲಿ ಸ್ಥಿರಬಿಂಬ ಪ್ರತಿಷ್ಠಾಪನೆ ಹಾಗು ವಿಮಾನ ಗೋಪುರ ಸಹಸ್ರ ಕುಂಬಾಭಿಷೇಕ ಮಹೋತ್ಸವ ಜರುಗಲಿದ್ದು ಹೋಮಹವನಾದಿಗಳು,ಭಜನೆ ಮುಂತಾದ ಧಾರ್ಮಿಕ ವಿಧಿಗಳನ್ನು ನೆರವೇರಿಸಲು ಶೃಂಗೇರಿಯಿಂದ ೩೨ ಮಂದಿಯನ್ನು ಋತ್ವಿಜರು ಆಗಮಿಸಲಿದ್ದಾರೆ ಎಂದರು.
ಮೇ ೨ ರ ಸಂಜೆ ಹುಳಿಯಾರು ಗ್ರಾಮದ ಮುಖ್ಯದ್ವಾರದಲ್ಲಿ ನಾಗಸಾಧುಗಳ ಸ್ವಾಗತದೊಂದಿಗೆ ಪೂಜಾ ಕೈಕರ್ಯಗಳಿಗೆ ಚಾಲನೆ ನೀಡಲಾಗುವುದು ಎಂದರು.
             ಮೇ ೩ ರಂದು ಬುಧವಾರ ಬೆಳಗ್ಗೆ ೭ ಗಂಟೆಗೆ ಹೋಮ, ಹವನಗಳು ಆರಂಭವಾಗಲಿದ್ದು ಅಪರೂಪದ 'ಗ'ಕಾರ ಸಹಸ್ರ ಗಣಯಾಗ ನಡೆಯುವುದು ವಿಶೇಷವಾಗಿದೆ.ದೇವಸ್ಥಾನಕ್ಕೆ ಹೊಂದಿ ಕೊಂಡಂತೆ ನಿರ್ಮಿಸಲಾಗಿರುವ ಶ್ರೀ ಸೇವಾಲಾಲ್ ಸಾಂಸ್ಕೃತಿಕ ಸದನ ಸಭಾಂಗಣವನ್ನು ಅದೇದಿನ ಬೆಳಗ್ಗೆ ೧೦.೪೫ಕ್ಕೆ ಕನ್ನಡ ಚಲನಚಿತ್ರ ರಂಗದ ಹಿರಿಯ ನಟರಾದ ಎಸ್.ಶಿವರಾಂ ಲೋಕಾರ್ಪಣೆ ಮಾಡುವರು. ಯಾತ್ರಾರ್ಥಿಗಳ ಅನುಕೂಲಕ್ಕಾಗಿ ನಿರ್ಮಾಣ ಮಾಡಲಾಗಿರುವ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ ಶ್ರೀಮಾತಾ ಯಾತ್ರಿನಿವಾಸ ವಸತಿ ಗೃಹವನ್ನು ಇದೇ ಸಂದರ್ಭದಲ್ಲಿ ಅಯ್ಯಪ್ಪ ಸೇವಾ ಸಮಾಜದ ಅಧ್ಯಕ್ಷ ಟಿ.ಬಿ.ಶೇಖರ್ ಲೋಕಾರ್ಪಣೆ ಮಾಡಲಿದ್ದಾರೆ. ಕಲಾವಿದರಾದ ಶಶಿಧರ ಹಡಪ ಮುಖ್ಯ ಅತಿಥಿಗಳಾಗಿರುವರು. ಅಂದು ಸಂಜೆ ೬ ಗಂಟೆಗೆ ಬೆಂಗಳೂರಿನ ಪ್ರಭಾತ್ ಕಲಾವಿದರಿಂದ ಮಹಿಷಾಸುರ ಮರ್ದಿನಿ ನೃತ್ಯ ರೂಪಕವನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.
           ಮೇ.೪ ರಂದು ಬೆಳಿಗ್ಗೆ ಶಕ್ತಿಪೀಠವಾದ ಶ್ರೀ ಕಂಕಾಳಿ ಮಾತೆ, ಶ್ರೀ ತುಳಜ ಭವಾನಿ, ಶ್ರೀ ಮರಿಯಮ್ಮ, ಶ್ರೀ ಮಹಾಗಣಪತಿ, ಶ್ರೀ ನವಗ್ರಹ ದೇವತೆಗಳು ಹಾಗೂ ಶ್ರೀ ಅನಂತಪದ್ಮನಾಭಸ್ವಾಮಿ ಸ್ಥಿರಬಿಂಬ ಪ್ರತಿಷ್ಠಾಪನೆ ಹಾಗೂ ವಿಮಾನಗೋಪುರ, ಸಹಸ್ರ ಕುಂಭಾಭಿಷೇಕ ಮಹೋತ್ಸವ ಜರುಗಲಿದೆ. ನಾಗಾಸಾಧುಗಳಿಂದ ಏಕಾದಶರುದ್ರಹವನ ಪೂರ್ಣಾಹುತಿ,ಮಹಾಮಂಗಲಳಾರತಿ ತತ್ಸಂಬಂಧ ಹೋಮಹವನಾದಿಗಳು ಜರುಗಲಿದೆ.ಸಂಜೆ ಸಾಯಿ ಆರ್ಟ್ಸ್ ಇಂಟರ್ ನ್ಯಾಷನಲ್ ಬೆಂಗಳೂರು ಇವರಿಂದ ಶಾ.ಸುಪರ್ಣ ವೆಂಕಟೇಶ್ ನಿರ್ದೇಶನದಲ್ಲಿ ಮಹಾಶಕ್ತಿ ನೃತ್ಯರೂಪಕ ಏರ್ಪಡಿಸಲಾಗಿದೆ ಎಂದರು.
ಹುಳಿಯಾರು ಪಟ್ಟಣದ ಕೋಡಿಪಾಳ್ಯದಲ್ಲಿ ಶ್ರೀ ಮಾತಾ ಚಾರಿಟಲ್ ಟ್ರಸ್ಟ್ ವತಿಯಿಂದ ನಿರ್ಮಿಸಿರುವ ಶ್ರೀ ಕಂಕಾಳಿ ಮಾತೆ, ಶ್ರೀ ತುಳಜಾ ಭವಾನಿ, ಶ್ರೀ ಮರಿಯಮ್ಮ, ಶ್ರೀ ಬಲಮುರಿ ಗಣಪತಿ, ಶ್ರೀ ನವಗ್ರಹ ದೇವತೆಗಳ ದೇವಾಲಯ ಸಮುಚ್ಚಯ.
           ಮೇ ೫ ರ ಮಧ್ಯಾಹ್ನ ೧೨.೧೫ಕ್ಕೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಈ ಭವ್ಯ ದೇಗುಲಗಳನ್ನು ಲೋಕಾರ್ಪಣೆಗೊಳಿಸಲಿದ್ದು. ಶಾಸಕ ಸಿ.ಬಿ.ಸುರೇಶ್‌ಬಾಬು ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ, ಮುಜರಾಯಿ ಸಚಿವ ರುದ್ರಪ್ಪ ಮಾನಪ್ಪ ಲಮಾಣಿ, ಮಾಜಿ ಲೋಕೋಪಯೋಗಿ ಖಾತೆ ಸಚಿವ ಹೆಚ್. ಡಿ.ರೇವಣ್ಣ, ಹಾಸನ ಜಿ.ಪಂ.ನ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾದ ಭವಾನಿ ರೇವಣ್ಣ ಅವರುಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
         ಕಾರ್ಯಕ್ರಮದಲ್ಲಿ ಸಂಸದರಾದ ಎಸ್.ಪಿ. ಮುದ್ದಹನುಮೇಗೌಡ, ಡಿ.ಕೆ.ಸುರೇಶ್, ಬಿ.ಎನ್.ಚಂದ್ರಪ್ಪ, ಶಾಸಕರುಗಳಾದ ಕೆ.ಷಡಕ್ಷರಿ, ಎಂ.ಟಿ. ಕೃಷ್ಣಪ್ಪ, ಡಾ.ಎಸ್. ರಫೀಕ್ ಅಹಮದ್, ಬಿ.ಸುರೇಶ್ ಗೌಡ, ಪಿ.ಆರ್.ಸುಧಾಕರಲಾಲ್, ಟಿ.ಎಂ.ತಿಮ್ಮರಾಯಪ್ಪ, ಡಿ.ನಾಗರಾಜಯ್ಯ, ಎಸ್.ಆರ್.ಶ್ರೀನಿವಾಸ್, ಕೆ.ಎನ್. ರಾಜಣ್ಣ, ಕೆ.ಶಿವಮೂರ್ತಿ ನಾಯಕ್, ವಿ.ಪ. ಸದಸ್ಯರಾದ ಬಿ.ಎಂ.ಕಾಂತರಾಜು, ರಮೇಶ್ ಬಾಬು ಮತ್ತು ವಿ.ಎಸ್.ಉಗ್ರಪ್ಪ ಅವರುಗಳು ವಿಶೇಷ ಆಹ್ವಾನಿತರಾಗಿರುತ್ತಾರೆ. ಶಾಸಕರಾದ ಡಾ.ಉಮೇಶ್ ಜಿ.ಜಾಧವ್, ಶಾರದಾ ಪೋರ್ಯಾನಾಯಕ್, ಭೀಮಾನಾಯಕ್, ಪ್ರಭು ಚವ್ಹಾಣ್, ಪಿ.ರಾಜೀವ್, ಮಾಜಿ ಸಚಿವರಾದ ಪಿ.ಟಿ.ಪರಮೇಶ್ವರ ನಾಯಕ್ ಹಾಗೂ ಲಲಿತಾ ನಾಯಕ್, ಕರ್ನಾಟಕ ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಬಾಲರಾಜ್, ಮಾಜಿ ಶಾಸಕರುಗಳಾದ ಜೆ.ಸಿ.ಮಾಧುಸ್ವಾಮಿ, ಕಿರಣ್‌ಕುಮಾರ್, ಕೆ.ಲಕ್ಕಪ್ಪ, ರೇವು ನಾಯಕ್ ಬೆಳಮಗಿ, ಬಸವರಾಜ ನಾಯಕ್, ನೇಮಿರಾಜ್ ನಾಯಕ್, ಚಂದ್ರಾನಾಯಕ್, ವಾಲ್ಮೀಕಿ ನಾಯಕ್, ಸೋಮ್ಲಾನಾಯಕ್, ಎಚ್.ಡಿ. ಲಮಾಣಿ, ಪ್ರಕಾಶ್ ರಾಥೋಡ್ ಮುಂತಾದ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿರುವರು ಎಂದರು..
 ಶ್ರೀ ಸೇವಾಲಾಲ್ ಸಾಂಸ್ಕೃತಿಕ ಸದನ ಸಭಾಂಗಣ

       ಪತ್ರಿಕಾಗೋಷ್ಠಿಯಲ್ಲಿ ಜಿಪಂ ಮಾಜಿ ಅಧ್ಯಕ್ಷ ಜಿ.ರಘುನಾಥ್,ಉಮೇಶ್ ಮಾಯಕ್,ಚಂದ್ರಶೇಖರ್, ತಿಮ್ಮಾನಾಯಕ್,ಸಕ್ರಾ ನಾಯಕ್,ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನೀಯರ್ ನಾಗರಾಜು,ಎಇಇ ಗವೀರಂಗಯ್ಯ, ನಂದೀಹಳ್ಳಿ ಶಿವಣ್ಣ ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹುಳಿಯಾರು ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 96.59 ಶೇಕಡವಾರು ಫಲಿತಾಂಶ

ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ-ವಾಣಿಜ್ಯ- ವಿಜ್ಞಾನ ವಿಭಾಗದಿಂದ ಒಟ್ಟು 272 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಆ ಪೈಕಿ 263 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಕಾಲೇಜಿಗೆ ಶೇಕಡ 96.59 ಫಲಿತಾಂಶ ಲಭಿಸಿದೆ. ವಾಣಿಜ್ಯ ವಿಭಾಗದಲ್ಲಿ 98 ವಿದ್ಯಾರ್ಥಿಗಳ ಪೈಕಿ 97 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 99 % ಫಲಿತಾಂಶ ಲಭಿಸಿದೆ. ಕಲಾವಿಭಾಗದಲ್ಲಿ 92 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 88 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 95.65 % ಫಲಿತಾಂಶ ಲಭಿಸಿದರೆ, ವಿಜ್ಞಾನ ವಿಭಾಗದಲ್ಲಿ 82 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 78 ವಿದ್ಯಾರ್ಥಿಗಳು ಉತ್ತೀರ್ಣರಾಗಿ 95.12 ಶೇಕಡವಾರು ಫಲಿತಾಂಶ ಲಭಿಸಿದೆ. Rakesh ದಿವ್ಯಶ್ರೀ ವಾಣಿಜ್ಯ ವಿಭಾಗದಲ್ಲಿ ದಿವ್ಯಶ್ರೀ ಹಾಗೂ ರಾಕೇಶ್ 577 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನಕ್ಕೆ ಭಾಜನರಾದರೆ, Dayana ಹಾಗೂ ವೆಂಕಟೇಶಮೂರ್ತಿ 574 ಅಂಕ ಗಳಿಸುವ ಮೂಲಕ ದ್ವಿತೀಯ ಸ್ಥಾನ ಮತ್ತು ದಿಲೀಪ್ ಹಾಗೂ ವೀಣಾ 572 ಅಂಕಗಳಿಸುವ ಮೂಲಕ ತೃತೀಯ ಸ್ಥಾನ ಪಡೆದಿದ್ದಾರೆ. ಮಹಾಲಕ್ಷ್ಮಿ ಕಲಾವಿಭಾಗದಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈಯಾಗಿದ್ದು ಮಹಾಲಕ್ಷ್ಮಿ 575 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದರೆ, 570 ಅಂಕಗಳಿಸಿರುವ ಗೀತಾ ಹಾಗೂ ರೂಪ ದ್ವಿತೀಯ ಸ್ಥಾನ ಹಾಗೂ 564 ಅಂಕ ಗಳಿಸಿದ ಕಾವ್ಯ ತೃತೀಯ ಸ್

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ

ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಪಕ್ವಾಡ್ ಕಾರ್ಯಕ್ರಮ

ಚಿಕ್ಕನಾಯಕನಹಳ್ಳಿ ತಾಲೋಕ್ ಮತಿಘಟ್ಟ 01 ವೃತ್ತದ ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ  ಪೋಷಣ್ ಪಕ್ವಾಡ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜಿಲ್ಲಾ ಪೋಷಣ್ ಅಧಿಕಾರಿಯಾದ ಶ್ರೀಮತಿ ರಂಜಿತಾ ಹಾಗೂ ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ವೃತ್ತದ ಮೇಲ್ವಿಚಾರಕರಾದ ಶ್ರೀ ಮತಿ ಶಾರದಮ್ಮನವರು ಬಾಲವಿಕಾಸ ಸಮಿತಿ ಅಧ್ಯಕ್ಷರಾದ ಶ್ರೀ ಮತಿ ಗೀತಾ ಮುಖ್ಯ ಶಿಕ್ಷಕರಾದ ನಾಗರತ್ನಮ್ಮ ಹಾಗೂ ಅರೋಗ್ಯಧಿಕಾರಿ ದಿಲೀಪ್ ರವರು  ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಅಂಗನವಾಡಿ ಕಾರ್ಯಕರ್ತೆ ಗಂಗಮ್ಮ ಸ್ವಾಗತ ಕೋರಿದರು. ಶ್ರೀಮತಿ ರಂಜಿತಾರವರು ಪೋಷಣ್ ಪಾಕ್ವಾಡ್ ದ ಮಹತ್ವವನ್ನು ತಿಳಿಸಿ ಸ್ಥಳೀಯವಾಗಿ ಸಿಗುವ ಆಹಾರಗಳಾದ ಸೊಪ್ಪು ತರಕಾರಿ ಸಿರಿಧಾನ್ಯಗಳ ಬಳಕೆ ಮಾಡುವುದರಿಂದ ಅಪೌಷ್ಠಿಕತೆ ಹೋಗಲಾಡಿಸಲು ಮಾರ್ಗಸೂಚಿ ನೀಡಿದರು. ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ಮಕ್ಕಳ ತೂಕ- ಎತ್ತರ ಹಾಗೂ ಸಮುದಾಯದ ಫಲಾನುಭವಿಗಳಿಗೆ ಪೋಷಣ್ ಪಕ್ವಾಡ್ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಕಾರ್ಯಕರ್ತೆಯಾದ ಸುಮಲತಾ ವಂದಸಿದರು. ಕಾರ್ಯಕ್ರಮದಲ್ಲಿ ಮತಿಘಟ್ಟ ವೃತ್ತದ ಎಲ್ಲಾ ಕಾರ್ಯಕರ್ತೆಯರು ಭಾಗವಹಿಸಿದ್ದರು.