ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ನೇಮಕ ಮಾಡದಿದ್ದಲ್ಲಿ ಜು.೧೫ ಕ್ಕೆ ಧರಣಿ ಹುಳಿಯಾರು: ಜಿಲ್ಲೆಯ ಗಡಿಭಾಗದಲ್ಲಿರುವ ಹುಳಿಯಾರು ಹೋಬಳಿಗೆ ಸೇರಿರುವ ದಸೂಡಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ೩ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ಹುದ್ದೆ ಖಾಲಿಯಿದೆ .ಅಲ್ಲದೆ ಆಸ್ಪತ್ರೆಯಲ್ಲಿ ತುರ್ತು ಪರಿಸ್ಥಿತಿಗೆ ಜರೂರಾಗಿ ಬೇಕಾಗಿರುವ ೧೦೮ ಅಂಬ್ಯೂಲೆನ್ಸ್ ಕೂಡ ಇಲ್ಲವಾಗಿದ್ದು ಸಾಕಷ್ಟು ಸಮಸ್ಯೆ ಎದುರಾಗಿದೆ.ಆರೋಗ್ಯಇಲಾಖೆ ಈ ಕೂಡಲೇ ಇಲ್ಲಿನ ಸಮಸ್ಯೆ ನಿವಾರಿಸದಿದ್ದಲ್ಲಿ ಜುಲೈ.೧೫ ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ದಸೂಡಿ ಮಾಜಿ ಗ್ರಾಪಂ ಅಧ್ಯಕ್ಷ ಹಾಗೂ ಸಾಮಾಜಿಕ ಹೋರಾಟಗಾರ ದಬ್ಬಗುಂಟೆ ರವಿಕುಮಾರ್ ಎಚ್ಚರಿಸಿದರು. ಹುಳಿಯಾರು ಹೋಬಳಿಯ ದಸೂಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರವನ್ನು ದಬ್ಬಗುಂಟೆ ರವಿಕುಮಾರ್ ಉದ್ಘಾಟಿಸಿದರು.ದಸೂಡಿ ಪ್ರಾ.ಆ.ಕೇಂದ್ರದ ವೈದ್ಯಾಧಿಕಾರಿ ಜಯಪ್ರಕಾಶ್, ತಾಲ್ಲೂಕು ಪಂಚಾಯ್ತಿ ಸದಸ್ಯ ಪ್ರಸನ್ನಕುಮಾರ್,ತುಮಕೂರು ಬೆಳ್ಳಿ ರಕ್ತನಿಧಿ ಕೇಂದ್ರದ ಡಾ.ಪ್ರದೀಪ್ , ಆರೋಗ್ಯ ಸಹಾಯಕ ಚಂದ್ರಶೇಖರ್, ದಸೂಡಿ ಗ್ರಾಮಪಂಚಾಯ್ತಿ ಅಧ್ಯಕ್ಷೆ ಶೋಭಾ, ಸದಸ್ಯರುಗಳಾದ ಓಂಕಾರಪ್ಪ,ದಬ್ಬಗುಂಟೆ ಜಯಣ್ಣ ಮೊದಲಾದವರಿದ್ದರು. ಹುಳಿಯಾರು ಹೋಬಳಿಯ ದಸೂಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಸ್ಪತ್ರೆ ವತಿಯಿಂದ ಗುರುವಾರ ಹಮ್ಮ...
📰 ಹುಳಿಯಾರು ಸೇರಿದಂತೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸ್ಥಳಿಯ ಸುದ್ದಿ ಸಮಾಚಾರದ ಬ್ಲಾಗ್........ ✍️ನರೇಂದ್ರಬಾಬು ಹುಳಿಯಾರು-📞9448760070