ಹುಡುಗ ವಿಶೇಷಚೇತನ ಎಂಬುದು ಗೊತ್ತಾಗಿದ್ದೆ ಮದುವೆ ಮಾತುಕತೆಗೆ ಬಂದಾಗ
(ವರದಿ:ಡಿ.ಆರ್.ನರೇಂದ್ರ ಬಾಬು-ಹುಳಿಯಾರು)
ಹುಳಿಯಾರು:ಇಬ್ಬರ ನಡುವೆ ಸಾಮಾಜಿಕ ಜಾಲತಾಣದ ವಾಟ್ಸಪ್ ಮೂಲಕ ಪರಿಚಯವಾಗಿ, ಪರಿಚಯ ನಂತರ ಸ್ನೇಹಕ್ಕೆ ಬೆಳೆದು, ಪ್ರೇಮಕ್ಕೆ ತಿರುಗಿ, ಪ್ರೇಮ ಮದುವೆ ಹಂತಕ್ಕೆ ಬಂದು ನಿಂತಾಗ ಮದುವೆಯ ಮಾತುಕತೆ ಸಮಯದಲ್ಲಿ ತಾನು ಇಷ್ಟಪಟ್ಟ ಹುಡುಗ ಎರಡೂ ಕಾಲಿಲ್ಲದ ದಿವ್ಯಾಂಗನೆಂದು ತಿಳಿದರೂ ಸಹ ಪ್ರೇಮ ಕುರುಡು ಎಂದು ಸಾಬೀತುಪಡಿಸಿದ ಹುಡುಗಿ ತಾನು ಮೆಚ್ಚಿದ ಹುಡುಗನೊಂದಿಗೆ ಇಷ್ಟಪಟ್ಟು ಮದುವೆಯಾದ ಘಟನೆ ಗುರುವಾರ ಹುಳಿಯಾರು ಹೋಬಳಿಯ ಬೆಳ್ಳಾರ ಗ್ರಾಮದ ಅಂಬರಾಪುರದಲ್ಲಿ ನಡೆದಿದೆ..
ಸಾಮಾಜಿಕ ಜಾಲತಾಣವಾದ ವಾಟ್ಸಪ್ ಗೆ ಈಗಾಗಲೇ ಜನ ಮಾರುಹೋಗಿದ್ದು ದಿನದ ಸಮಯವೆಲ್ಲಾ ವ್ಯರ್ಥವಾಗುತ್ತಿದೆ ಎಂಬ ಕೂಗು ಬಲವಾಗಿ ಕೇಳಿಬರುತ್ತಿರುವ ಬೆನ್ನಲ್ಲೇ ಇಂದು ನಡೆದಿರುವ ಮದುವೆ ಸಾಮಾಜಿಕ ತಾಣವೂ ಕೂಡ ಹೇಗೆ ಸಂಬಂಧ ಬೆಸಯಬಲ್ಲದು ಎಂಬುದನ್ನು ಸಾಕ್ಷೀಕರಿಸಿದೆ
ಸಾಮಾಜಿಕ ಜಾಲತಾದ ಮೂಲಕ ಪ್ರೇಮಾಂಕುರಗೊಂಡು ಸತಿ ಪತಿಗಳಾದ ಜ್ಯೋತಿ ಮತ್ತು ನಾಗರಾಜ |
ನಾಗರಾಜುವಿನದು ಹುಳಿಯಾರು ಹೋಬಳಿ ಅಂಬರಾಪುರವಾಗಿದ್ದು ಈತ ಪದವಿಯವರೆಗೂ ಬೋರನಕಣಿವೆ,ಬೆಳಗುಲಿ,ರಂಗೇನಹಳ್ಳಿ ಹಾಗೂ ಚಿಕ್ಕನಾಯಕನಹಳ್ಳಿಯಲ್ಲಿ ವಿದ್ಯಾಭ್ಯಾಸ ನಡೆಸಿದ್ದಾನೆ. ಮಂಡಿಯ ಕೆಳಭಾಗದಿಂದ ಕಾಲೇಇಲ್ಲದೆ ನಾಗರಾಜು ಹುಟ್ಟಾ ಅಂಗವಿಕಲನಾಗಿದ್ದು ಕೂಡ ಬದುಕಿನಲ್ಲಿ ಏನಾದರೂ ಸಾಧಿಸಲೇಬೇಕೆಂಬ ಛಲಹೊತ್ತಿ ಪದವಿ ಕಲಿಯುವ ಸಮಯದಲ್ಲೆ ಕಂಪ್ಯೂಟರ್ ತರಬೇತಿ ಪಡೆದ.ಕಾಲಿಲ್ಲದೆ ಅವರಿವರನ್ನು ಆಶ್ರಯಿಸಿ ಬದುಕಿನಲ್ಲಿ ಒಂದು ಹಂತ ತಲುಪುವುದರೊಳಗೆ ಹೈರಾಣೆದ್ದು ಹೋಗಿದ್ದ.
ಆದರೂ ಕೂಡ ತಾನು ನಂಬಿದ್ದ ಧ್ಯೇಯ ವಾಕ್ಯ 'ನಡೆಯುವಾಗ ಎಡುವುದು,ಬೀಳುವುದು ಸಹಜ ಆದರೆ ಬಿದ್ದ ಜಾಗದಲ್ಲೇ ಬಿದ್ದಿರುವುದು ತಪ್ಪು"ಎಂಬುದನ್ನು ಅರ್ಥಸಿಕೊಂಡು ತನ್ನದೆ ಆದ ಬದುಕು ಕಟ್ಟಿಕೊಂಡ.ಗ್ರಾಮಪಂಚಾಯ್ತಿಗಳಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ನಂತರ ತಾಲ್ಲೂಕ್ ಪಂಚಾಯ್ತಿ ಆನಂತರ ಜಿಲ್ಲಾಪಂಚಾಯ್ತಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸದಲ್ಲಿ ತೊಡಗಿಕೊಂಡ.
ಬದುಕು ಒಂದುಹಂತಕ್ಕೆ ಬಂದು ನಿಂತಾಗ ಅವಶ್ಯಕತೆಗೆ ಎಂದು ಕೊಂಡ ಸ್ಮಾರ್ಟ್ ಫೋನ್ ಈತನ ಬದುಕನ್ನೆ ಬದಲಿಸುತ್ತೆ ಅನ್ನುವ ಕಲ್ಪನೆಯೂ ಇಲ್ಲದ ಆತ ವಾಟ್ಸಪ್ ಹಾಗೂ ಫೇಸ್ ಬುಕ್ಕಿನಲ್ಲಿ ಬಂದ ಫ್ರೆಂಡ್ ರಿಕ್ವೆಸ್ಟ್ ಮೂಲಕ ಪರಿಚಿತರಾದ ಕಡೂರಿನ ಜ್ಯೋತಿಯೊಂದಿಗೆ ಚಾಟಿಂಗ್ ಮೂಲಕ ಮಾತುಕಥೆಗೆ ಶುರುಮಾಡಿದ.ಕಡೆಗದೂ ಅವರಿಬ್ಬರ ನಡುವೆ ಪ್ರೇಮಾಂಕುರವಾಗುವಂತೆ ಮಾಡಿ ವಿವಾಹದವರೆಗೂ ತಂದು ನಿಲ್ಲಿಸಿತು.
ಆತನನ್ನು ವಿವಾಹ ಆಗಲೇಬೇಕೆಂದು ನೋಡಲು ಬಂದಾಗಲೇ ಆಕೆಗೆ ನಾನು ಪ್ರೀತಿಸುವಾತನ ಎರಡೂ ಕಾಲು ಸ್ವಾಧೀನ ಇಲ್ಲವೆಂದು ತಿಳಿದುಬಂದಿದ್ದು. ಆದರೆ ಅಂಗವಿಕಲತೆಗೆ ಸೆಡ್ಡು ಹೊಡೆದ ಯುವತಿ ನಾಗರಾಜನನ್ನು ಒಪ್ಪಿ ಇಂದು ಸರಳವಾಗಿ ವಿವಾಹವಾಗುವ ಮೂಲಕ ಮಾದರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ
ಜ್ಯೋತಿ ಚಿಕ್ಕಮಗಳೂರು ಜಲ್ಲೆಯ ಕಡೂರು ನಿವಾಸಿಯಾಗಿದ್ದು ಬಡ ಕುಟುಂಬದಿಂದ ಬಂದಿದ್ದು ತಂದೆತಾಯಿಯಿಲ್ಲದೆ ಈಕೆ ಪ್ರಸ್ತುತ ತುಮಕೂರು ನಗರದ ಗಾರ್ಮೆಂಟ್ ನಲ್ಲಿ ಕೆಲಸ ಮಾಡುತ್ತಿದ್ದಾಳೆ.
ಸದ್ಯ ಈಗ ತುಮಕೂರು ನಗರದಲ್ಲಿ ವಾಸಿಯಾಗಿರುವ ನಾಗರಾಜ ಕೂಡ ಸಾಮಾಜಿಕ ಜಾಲ ತಾಣದ ಮೂಲಕ ತನ್ನ ವೈವಾಹಿಕ ಜೀವನದ ಬದುಕು ಕಟ್ಟಿ ಕೊಂಡು ವ್ಯಾಟ್ಸ್ ಆಪ್ ಗೆ ಥ್ಯಾಂಕ್ಸ್ ಅನ್ನುತ್ತಾನೆ .
ಸಾಮಾಜಿಕ ಜಾಲತಾದ ಮೂಲಕ ಪ್ರೇಮಾಂಕುರಗೊಂಡು ಸತಿ ಪತಿಗಳಾದ ಜ್ಯೋತಿ ಮತ್ತು ನಾಗರಾಜ ನವ ದಂಪತಿಗಳಿಗೆ ತಾಲ್ಲೂಕ್ ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಸನ್ನ ಕುಮಾರ್. ಸಾಮಾಜಿಕ ಹೋರಾಟಗಾರ ದಬ್ಬಗುಂಟೆ ರವಿ ಸೇರಿದಂತೆ ಮುದುವೆಗೆ ಬಂದಿದ್ದ ಜನ ಇವರ ಮುಂದಿನ ಬದುಕು ಸುಖಕರವಾಗಿರಲಿ ಎಂದು ಶುಭ ಹಾರೈಸಿ ಆಶೀರ್ವದಿಸಿದರು.ಸತಿಪತಿಗಳಿಗೆ ಶುಭಹಾರೈಸಿದ ತಾಲ್ಲೂಕ್ ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಸನ್ನ ಕುಮಾರ್.ಸಾಮಾಜಿಕ ಹೋರಾಟಗಾರ ದಬ್ಬಗುಂಟೆ ರವಿ ,ಮತ್ತಿತರ ಹಿತೈಷಿಗಳು |
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ