ಹುಳಿಯಾರು ಸಮೀಪದ ಜೋಡಿ ತಿರುಮಲಾಪುರದಲ್ಲಿ ಕಾರ್ತಿಕ ಮಾಸದ ದೀಪೋತ್ಸವ ಆರಂಭವಾಗಿದ್ದು ಇಂದು ಕಾರ್ತಿಕ ಪ್ರಥಮ ಸೋಮವಾರ ಅಂಗವಾಗಿ ಸಂಧ್ಯಾಮಂಟಪದಲ್ಲಿನ ಶ್ರೀ ಚಂದ್ರಮೌಳೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಋತ್ವಿಜರಿಂದ ಮಹಾನ್ಯಾಸಪೂರ್ವಕ,ಏಕವಾರ ರುದ್ರಾಭಿಷೇಕ, ಸಹಸ್ರನಾಮ ಬಿಲ್ವಾರ್ಚನೆ ನಡೆಯಿತು. ಶ್ರೀ ಚಂದ್ರಮೌಳೇಶ್ವರ ಸ್ವಾಮಿ, ಪಾರ್ವತಮ್ಮನವರು,ಸುಬ್ರಮಣ್ಯಸ್ವಾಮಿ, ಜ್ಯೋತಿರ್ಲಿಂಗೇಶ್ವರ ಸ್ವಾಮಿ ,ಕಾಶಿ ವಿಶ್ವೇಶ್ವರ ಸ್ವಾಮಿ ಸನ್ನಿಧಿಯಲ್ಲಿ ವಿಶೇಷ ಪೂಜೆ ಜರುಗಿತು. ಮಹಾಮಂಗಳಾರತಿ ನಂತರ ಗ್ರಾಮಸ್ಥರು ಸೇರಿದಂತೆ ಆಗಮಿಸಿದ ಭಕ್ತಾಧಿಗಳಿಗೆ ತೀರ್ಥಪ್ರಸಾದ ವಿನಿಯೋಗ ಹಾಗೂ ಅನ್ನಸಂತರ್ಪಣೆ ಜರುಗಿತು.
📰 ಹುಳಿಯಾರು ಸೇರಿದಂತೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸ್ಥಳಿಯ ಸುದ್ದಿ ಸಮಾಚಾರದ ಬ್ಲಾಗ್........ ✍️ನರೇಂದ್ರಬಾಬು ಹುಳಿಯಾರು-📞9448760070