ಹುಳಿಯಾರಿನ ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ “ಜಾಗತಿಕ ಕೈ ತೊಳೆಯುವ ದಿನ"(Global Hand Washing Day) ಆಚರಣೆ
ಹುಳಿಯಾರು, ಕೆಂಕೆರೆಯ ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ “ಜಾಗತಿಕ ಕೈ ತೊಳೆಯುವ ದಿನ”Global Hand Washing Day)ವನ್ನು ಕಾಲೇಜಿನ ರೆಡ್ ಕ್ರಾಸ್ ಘಟಕ ಹಾಗೂ ಐಕ್ಯುಎಸಿ ಸಹಯೋಗದೊಂದಿಗೆ ಆಚರಿಸಲಾಯಿತು.
ಕಾಲೇಜಿನ ವಿದ್ಯಾರ್ಥಿಗಳಿಗೆ ಕೈ ತೊಳೆಯುವ ಪ್ರಾಮುಖ್ಯತೆ ಹಾಗೂ Transaction ಕಾಪಾಡಿಕೊಳ್ಳಲು ಕೈ ತೊಳೆಯುವುದು ಬಹಳ ಅಗತ್ಯವೆಂದು ಅರಿವು ಮೂಡಿಸುವ ಸಲುವಾಗಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ರೆಡ್ ಕ್ರಾಸ್ ಘಟಕದ ಸಂಚಾಲಕರಾದ ಶ್ರೀಮತಿ ಸಂಗೀತ.ಪಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಜಾಗತಿಕ ಕೈ ತೊಳೆಯುವ ದಿನವನ್ನು ಅಂತರರಾಷ್ಟ್ರೀಯ ನೈರ್ಮಲ್ಯ ವರ್ಷವಾದ 2008 ರಲ್ಲಿ ಎಲ್ಲರಲ್ಲೂ ಸಾಬೂನಿನಿಂದ ಕೈ ತೊಳೆಯುವ ಅಭ್ಯಾಸ ಬೆಳೆಸುವುದು ಹಾಗೂ ಇದರಿಂದ ಆರೋಗ್ಯಕ್ಕೆ ಆಗುವ ಪ್ರಯೋಜನಗಳ ಕುರಿತು ಅರಿವು ಮೂಡಿಸಲು ಈ ಕಾರ್ಯಕ್ರಮವನ್ನು ಆರಂಭಿಸಲಾಯಿತು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಗ್ರಂಥಪಾಲಕರಾದ ಡಾ. ಲೋಕೇಶ್ ನಾಯಕ್ ಅವರು ಮಾತನಾಡಿ ವಿದ್ಯಾರ್ಥಿಗಳು ಕೈ ನೈರ್ಮಲ್ಯದ ಕುರಿತು ತಮ್ಮ ಮನೆಯಲ್ಲಿ ಹಾಗೂ ಸುತ್ತಮುತ್ತಲಿನವರಲ್ಲಿ ಅರಿವು ಮೂಡಿಸಬೇಕೆಂದು ಹೇಳಿದರು.
ಐಕ್ಯೂಎಸಿ ಸಂಚಾಲಕರಾದ ಪ್ರೊ. ಮಂಜುನಾಥ್ ಅವರು ಮಾತನಾಡಿ ಕೊರೋನ, ಅತಿಸಾರ, ನ್ಯೂಮೋನಿಯಾದಂತಹ ರೋಗಗಳ ವಿರುದ್ಧ ರಕ್ಷಿಸುವಲ್ಲಿ ಕೈ ನೈರ್ಮಲ್ಯ ಬಹಳ ಮಹತ್ವದ್ದು ಎಂದರು.
ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಮೋಹನ್ ಕುಮಾರ್ ಎಂ. ಜೆ. ಅವರು ಸೋಪು ಹಾಕಿ ಕೈ ತೊಳೆಯುವ ಹಂತಗಳನ್ನು ವಿವರಿಸಿ,ಶುದ್ಧ ನೀರು ಮತ್ತು ಸಾಬೂನು ಬಳಸಿ ಕನಿಷ್ಠ 40 ರಿಂದ 60 ಸೆಕೆಂಡುಗಳ ಕಾಲ ಕೈ ತೊಳೆಯಬೇಕು ಎಂದರು.
ನಂತರ ಎಲ್ಲ ವಿಭಾಗದ ಮುಖ್ಯಸ್ಥರು ಹಾಗೂ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಸೋಪು ಹಾಕಿ ಕೈ ತೊಳೆಯುವ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ