ಹುಳಿಯಾರು:ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಇತಿಹಾಸದ ಪಾತ್ರ ಎಂಬ ವಿಷಯ ಕುರಿತು ಹುಳಿಯಾರಿನ ಬಿ.ಎಂ.ಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶೇಷ ಉಪನ್ಯಾಸವನ್ನು ಆಯೋಜಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ತುಮಕೂರು ಜಿಲ್ಲೆಯ ಪಾವಗಡದ ವೈ.ಈ.ಆರ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರಾದ ಪ್ರೊ. ಲಿಂಗರಾಜು.ಪಿ ಮಾತನಾಡಿ "ವಿದ್ಯಾಭ್ಯಾಸಕ್ಕೆ ಸಾಮಾನ್ಯವಾಗಿ ಹಲವು ತೊಡಕುಗಳು ಎದುರಾಗುತ್ತವೆ, ಆದರೆ ಛಲ ಹೊಂದಿದ್ದರೆ ಏನು ಬೇಕಾದರೂ ಸಾಧಿಸಬಹುದು" ಎಂದರು.
ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸುವವರು ಕಡ್ಡಾಯವಾಗಿ ಅನುಸರಿಸಬೇಕಾದ ಅಂಶಗಳನ್ನು ತಿಳಿಸಿದರು. "ಮೊದಲು ನಾವು ತಯಾರಾಗಬೇಕಾದ ಪರೀಕ್ಷೆಯನ್ನು ಗುರುತು ಮಾಡಿಕೊಳ್ಳಬೇಕು, ನಂತರ ಪಠ್ಯಕ್ರಮವನ್ನು ಅಧ್ಯಯನ ಮಾಡಬೇಕು.ಅನಂತರದಲ್ಲಿ ಅಧ್ಯಯನ ಸಾಮಗ್ರಿಗಳನ್ನು ಸಿದ್ಧಪಡಿಸಿಕೊಳ್ಳುವುದು, ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುವುದು, ಮಾದರಿ ಪ್ರಶ್ನೆ ಪತ್ರಿಕೆಗಳನ್ನು ತಯಾರು ಮಾಡಿಕೊಳ್ಳುವುದು, ಓದಿದ್ದನ್ನು ಪುನರ್ ಅವಲೋಕನ ಮಾಡುವುದು ಹಾಗೂ ಸ್ವಯಂ ಮೌಲ್ಯಮಾಪನ ಅತ್ಯಗತ್ಯ ಎಂದರು. ಓದಿದ್ದನ್ನು ಕ್ರಮಬದ್ಧಗೊಳಿಸಲು A4 ಶೀಟ್ ಗಳಲ್ಲಿ ಕೀ ನೋಟ್ಸ್ ಮಾಡುವ ಮೂಲಕ ಒಂದು ಫೈಲ್ ತಯಾರು ಮಾಡಿಕೊಳ್ಳುವುದು ಅತ್ಯಗತ್ಯ ಎಂದರಲ್ಲದೇ ಇನ್ನೂ ಅನೇಕ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಹುಳಿಯಾರು-ಕೆಂಕೆರೆ ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ವೀರಣ್ಣ ಎಸ್ .ಸಿ "ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಅಗಾಧ ವಿಶ್ವಾಸ ಬೇಕು.ಜ್ಞಾನ ಎಂಬುದು ಸಂಪತ್ತು, ಅದನ್ನು ಸತತ ಪ್ರಯತ್ನದ ಮೂಲಕ ಗಳಿಸಲು ಸಾಧ್ಯ ಎಂದರು.
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಇತಿಹಾಸ ವಿಭಾಗದ ಮುಖ್ಯಸ್ಥರಾದ ಕೆ.ಸಿ.ಕುಮಾರಸ್ವಾಮಿ "ಸಾಧನೆಗೆ ಕಠಿಣ ಪರಿಶ್ರಮ, ತಾಳ್ಮೆ, ಏಕಾಗ್ರತೆ, ಬಹಳ ಮುಖ್ಯ ಎಂದು ತಿಳಿಸಿದರು.ಗ್ರಂಥ ಪಾಲಕರಾದ ಡಾ|| ಲೋಕೇಶ್ ನಾಯಕ್ ಮಾತನಾಡಿ ಆರೋಗ್ಯದ ಪ್ರಾಮುಖ್ಯತೆಯನ್ನು ತಿಳಿಸಿಕೊಟ್ಟರು.
ಈ ಕಾರ್ಯಕ್ರಮವನ್ನು ತೃತೀಯ ಬಿ.ಎ. ವಿದ್ಯಾರ್ಥಿನಿಯರಾದ ಸೃಷ್ಟಿ ಮತ್ತು ಚೈತ್ರ ರವರು ಆರಂಭ ಗೀತೆಯ ಮೂಲಕ ಪ್ರಾರಂಭಿಸಲಾಯಿತು. ಇತಿಹಾಸ ಉಪನ್ಯಾಸಕರಾದ ನಾರಾಯಣ್ ರವರು ಸ್ವಾಗತಿಸಿದರು.ಅಂತಿಮ ಬಿ.ಎ.ವಿದ್ಯಾರ್ಥಿನಿಯಾದ ಭವ್ಯ .ಆರ್. ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಿಕೊಟ್ಟರು.ತೃತೀಯ ಬಿ.ಕಾಂ. ವಿದ್ಯಾರ್ಥಿ ರೇಣುಕಾ ಪ್ರಸಾದ್ ವಂದಿಸಿದರು.
ಕಾಲೇಜಿನ ಎಲ್ಲಾ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ