ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ವೀರೇಂದ್ರ ಹೆಗ್ಗಡೆಯವರ ವಿರುದ್ಧ ಅಪಪ್ರಚಾರದ ವಿಮೋಚನೆಗೆ ಹುಳಿಯಾರು ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ.
---------------------------------------
ಹುಳಿಯಾರು : ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ವೀರೇಂದ್ರ ಹೆಗ್ಗಡೆಯವರ ವಿರುದ್ಧ ನಡೆಸುತ್ತಿರುವ ಅಪಪ್ರಚಾರ ನಿಲ್ಲಿಸುವಂತೆ ಕೋರಿ ಹುಳಿಯಾರು ಭಾಗದ ಭಕ್ತಾದಿಗಳಿಂದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸ್ವಾಮಿಗೆ ಅಭಿಷೇಕ ಸೇರಿದಂತೆ ವಿಶೇಷ ಪೂಜೆ ಜರುಗಿತು.
ಸಮಸ್ತ ಭಕ್ತಾದಿಗಳ ಪರವಾಗಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆಂಕೆರೆ ಸತೀಶ್, ಸಮಸ್ತ ಹಿಂದೂಗಳ ಆರಾಧ್ಯ ದೈವ ಮಂಜುನಾಥೇಶ್ವರ ನೆಲಸಿರುವ ಪುಣ್ಯಕ್ಷೇತ್ರವಾಗಿರುವ ಧರ್ಮಸ್ಥಳ ಹಾಗೂ ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗಡೆಯವರ ಕುರಿತು ಇತ್ತೀಚೆಗೆ ಕೆಲವರು ಆಧಾರರಹಿತವಾಗಿ ಅಪಪ್ರಚಾರ ನಡೆಸುತ್ತಿದ್ದು, ಈ ಮೂಲಕ ಶ್ರೀಗಳ ವ್ಯಕ್ತಿತ್ವಕ್ಕೆ ಹಾಗೂ ಚಾರಿತ್ರಕ್ಕೆ ಕಳಂಕ ತರವ ಕೆಲಸ ಮಾಡುತ್ತಿದ್ದಾರೆ. ಸತತ ಅಪಪ್ರಚಾರ ಹಾಗೂ ವಿನಾಕಾರಣ ದೂಷಣೆಯಿಂದಾಗಿ ಶ್ರೀ ಕ್ಷೇತ್ರಕ್ಕೆ ಮಸಿ ಹಚ್ಚುವ ಕೆಲಸ ನಡೆಯುತ್ತಿದ್ದು ಇದು ಧರ್ಮಸ್ಥಳ ಶ್ರೀ ಕ್ಷೇತ್ರದ ಅಪಾರ ಭಕ್ತಾಧಿಗಳಿಗೆ ನೋವುಂಟು ಮಾಡಿದೆ. ಇದನ್ನು ತಾವು ಖಂಡಿಸುವುದಾಗಿ ತಿಳಿಸಿದರು.
ಪೂಜ್ಯರು ಮಾಡಿರುವ ಸಮಾಜ ಸೇವಾ ಕೈಂಕರ್ಯ, ಹಾಗೂ ಸಾಧನೆ ಎಲ್ಲರ ಮನಸ್ಸಿನಲ್ಲೂ ಅಚ್ಚಳಿಯದೆ ಉಳಿದಿದ್ದು, ಪೂಜ್ಯರು ಸಮಸ್ತ ಕರ್ನಾಟಕದ ಹೆಮ್ಮೆಯಾಗಿದ್ದು ಪುರಾವೆ ಇಲ್ಲದೆ ಸಾಮಾಜಿಕ ಜಾಲತಾಣಗಳ ಮೂಲಕ ಪೂಜ್ಯ ಹೆಗಡೆಯವರ ವಿರುದ್ಧ ಅಪಪ್ರಚಾರ ನಡೆಸುತ್ತಿರುವುದು ತಕ್ಷಣ ನಿಲ್ಲಬೇಕು ಎಂದು ಕೆಂಕೆರೆ ಸತೀಶ್ ಆಗ್ರಹಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಸಜ್ಜನರಾದ ಹೆಗ್ಗಡೆಯವರ ವಿರುದ್ಧ ಕೆಲವು ದುರ್ಜನರು ಕಳಂಕ ತರುವ ಕೆಲಸ ನಡೆಸುತ್ತಿದ್ದು, ಇದರ ವಿಮೋಚನೆಗಾಗಿ ಹುಳಿಯಾರಿನ ಪುರಾಣ ಪ್ರಸಿದ್ಧ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪಟ್ಟಣದ ಭಕ್ತಾದಿಗಳಿಂದ ಅಭಿಷೇಕ ಪೂಜಾ ಕಾರ್ಯ ನಡೆಯುತ್ತಿದ್ದು, ಸ್ವಾಮಿಯ ಕೃಪಾ ಕಟಾಕ್ಷದಿಂದ ಪೂಜ್ಯರ ವಿರುದ್ಧ ಅಪಪ್ರಚಾರ ನಡೆಸುತ್ತಿರುವ ದುರ್ಜನರು ಕ್ಷೀಣಿಸಲಿ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕು-2 ಯೋಜನಾಧಿಕಾರಿ ಶ್ರೀ ರಾಮಚಂದ್ರ ಅವರು ನುಡಿದರು.
ಪಟ್ಟಣದ ರಾಮಗೋಪಾಲ್ ಸರ್ಕಲ್ ಬಳಿಯಿಂದ ಶ್ರೀ ಆಂಜನೇಯ ದೇವಸ್ಥಾನದವರೆಗೆ ಮೆರವಣಿಗೆಯಲ್ಲಿ ಬಂದ ಭಕ್ತಾಧಿಗಳು ಶ್ರೀಗಳ ಪರ ಘೋಷಣೆ ಕೂಗಿದರು
ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಎಸ್ ಕಿರಣ್ ಕುಮಾರ್,ಧರ್ಮಸ್ಥಳ ಸಂಘದ ಜಿಲ್ಲಾ ನಿರ್ದೇಶಕ ದಿನೇಶ್, ಹುಳಿಯಾರು ಆಂಜನೇಯ ಸ್ವಾಮಿ ದೇವಸ್ಥಾನದ ಅಧ್ಯಕ್ಷ ಬಡಗಿ ರಾಮಣ್ಣ, ಕಾರ್ಯದರ್ಶಿ ಧನಂಜಯ, ಪಟ್ಟಣ ಪಂಚಾಯಿತಿ ಸದಸ್ಯ ದಯಾನಂದ್, ಗೀತಾ ಅಶೋಕ್, ಸ್ಟುಡಿಯೋ ದುರ್ಗರಾಜು, ಯುವ ಮುಖಂಡ ಪ್ರದೀಪ್, ಒಕ್ಕೂಟದ ಅಧ್ಯಕ್ಷ ಸುವರ್ಣಮ್ಮ, ಕಿರಣ್ ಕುಮಾರ್, ವಲಯ ಮೇಲ್ವಿಚಾರಕಿ ಶ್ರೀಮತಿ ಚೈತ್ರ, ಚಿಕ್ಕಬಿದರೆ ಮೇಲ್ವಿಚಾರಕ ಗುರು, ಧರ್ಮಸ್ಥಳ ಸಂಘದ ಸಂದೀಪ್, ಪ್ರಶಾಂತ್, ಚಿದಾನಂದ್,ಯಾಸಿನ್,ಮಹಾಲಿಂಗಣ್ಣ,ಗಂಗಣ್ಣದೇವರಾಜ್ ವಸಂತಕುಮಾರ್, ಕುಮಾರಸ್ವಾಮಿ, ದೊಡ್ಡಬಿದರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಕವಿತಾ, ಚಿಕ್ಕಬಿದರೆ ಹಾಲಿನ ಡೈರಿ ಅಧ್ಯಕ್ಷ ಗೌರಮ್ಮ ಸೇರಿದಂತೆ ಅನೇಕ ಭಕ್ತಧಿಗಳು ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ