ಉಪನ್ಯಾಸಕ ನರೇಂದ್ರಬಾಬು ಮಾತನಾಡಿ ಶೋಷಿತರ ಏಳಿಗೆಗಾಗಿ ಹೋರಾಡಿದ, ಸಮಾನತೆಯ ಮಾರ್ಗ ತೋರಿದ, ಹೋರಾಟದ ಮುಖಾಂತರ ಶೋಷಿತರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಶ್ರಮಿಸಿದ ಅಂಬೇಡ್ಕರ್ ಅವರ ಆದರ್ಶ ಎಲ್ಲರೂ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.
ಎಬಿವಿಪಿ ಸಂಚಾಲಕ ಗುರುಪ್ರಸಾದ್ ಮಾತನಾಡಿ ಅಂಬೇಡ್ಕರ್ ಜನ್ಮದಿನವನ್ನು ವಿಶ್ವ ಜ್ಞಾನ ದಿನ ಎಂದು ಆಚರಿಸಲಾಗುತ್ತಿದ್ದು ಪ್ರತಿಯೊಬ್ಬ ಭಾರತೀಯರ ಪವಿತ್ರ ಗ್ರಂಥವಾದ ಸಂವಿಧಾನದ ಹಿಂದಿನ ಶಕ್ತಿ ಡಾ.ಬಿ.ಆರ್.ಅಂಬೇಡ್ಕರ್ ಅವರಾಗಿದ್ದು, ಅವರ ವಿಚಾರಧಾರೆಗಳು ಇಂದಿಗೂ ಎಂದಿಗೂ ಪ್ರಸ್ತುತ ಎಂದರು.
ಹೆಚ್.ಡಿ.ರಾಮಚಂದ್ರಯ್ಯನವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ನೂರಾನಿ ಮಸೀದಿಯ ಮುತುವಲ್ಲಿ ಆರಿಫ್‌ರವರು, ಕಾಲೋನಿ ಮುಖ್ಯಸ್ಥರಾದಂತಹ ಹೆಚ್.ಎನ್.ದುರ್ಗಯ್ಯನವರು, ಹೆಚ್.ಬಿ.ಕೃಷ್ಣಯ್ಯನವರು, ಪ್ಲೇನಿಂಗ್ ಮಿಲ್ ನಾಗಣ್ಣನವರು, ಶಿಕ್ಷಕ ಹಾಗಲವಾಡಿ ಚಿಕ್ಕಣ್ಣನವರು, ಡಿಎಸ್ಎಸ್ ಸಂಚಾಲಕ ರಾಘವೇಂದ್ರ, ಇಮ್ರಾಜ್ , ಹಾರ್ಡ್ವೇರ್ ಬಸವರಾಜು ಮೊದಲಾದವರು ಹಾಜರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ