ಹುಳಿಯಾರು: ಒಳ ಮೀಸಲಾತಿ ಪರವಾಗಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಸ್ವಾಗತಿಸಿ ದಲಿತ ಸಂಘರ್ಷ ಸಮಿತಿ ಹಾಗೂ ಮಾದಿಗ ದಂಡೋರ ಸಮಿತಿ ಸದಸ್ಯರು ಸೇರಿದಂತೆ ದಲಿತ ಪರ ಸಂಘಟನೆಗಳ ಮುಖಂಡರುಗಳು ಹುಳಿಯಾರು ಪೊಲೀಸ್ ಸ್ಟೇಷನ್ ವೃತ್ತದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು ಒಳ ಮೀಸಲಾತಿ ಪರವಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಮೂರು ದಶಕಗಳ ಕಾಲ ಸತತವಾಗಿ ಹೋರಾಟ ಮಾಡಿಕೊಂಡು ಬಂದಿದ್ದು ಇದೀಗ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಶತಮಾನಗಳಿಂದಲೂ ತುಳಿತಕ್ಕೊಳಗಾಗಿರುವ ದಲಿತರಿಗೆ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿದಂತಾಗಿದೆ. ಈ ಐತಿಹಾಸಿಕ ತೀರ್ಪನ್ನು ನಮ್ಮ ಸಂಘಟನೆ ಸ್ವಾಗತಿಸುತ್ತದೆ ಎಂದು ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಹನುಮಂತಯ್ಯ ನುಡಿದರು.
ಚಿಕ್ಕನಾಯಕನಹಳ್ಳಿ ತಾಲೂಕು ಕೆಡಿಪಿ ಸದಸ್ಯರಾದ ಬರಕನಾಳ್ ಶಂಕರ್ ಮಾತನಾಡಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಶೋಷಿತ ಸಮುದಾಯಗಳಲ್ಲಿ ಹೊಸ ಆಶಾಭಾವನೆಗೆ ಕಾರಣವಾಗಿದ್ದು,ಇದರಿಂದಾಗಿ ಇನ್ನು ಮುಂದೆ ಅತ್ಯಂತ ಹಿಂದುಳಿದ ಸಣ್ಣ ಪುಟ್ಟ ಉಪಜಾತಿಗಳಿಗೂ ಸಹ ಮೀಸಲಾತಿಯ ಲಾಭ ಪಡೆಯುವಂತಾಗಿದೆ. ರಾಜ್ಯ ಸರ್ಕಾರ ಇದನ್ನು ತ್ವರಿತವಾಗಿ ಜಾರಿ ಮಾಡುವ ಮೂಲಕ ಅನ್ಯಾಯ ಮತ್ತು ಅಸ್ಪೃಶ್ಯತೆಯಲ್ಲಿ ಬೆಂದು ನೊಂದಿದ್ದ ಸಣ್ಣ ಸಮುದಾಯಗಳಿಗೆ ನ್ಯಾಯ ಕೊಡಿಸಬೇಕೆಂದರು.
ಈ ವೇಳೆ ಡಿಎಸ್ಎಸ್ ಮುಖಂಡರಾದ ತಮಡಿಹಳ್ಳಿ ನಾಗರಾಜು, ಮೇಲನಹಳ್ಳಿ ಕುಮಾರ್, ರಾಮನಗರ ಕೆಂಚಪ್ಪ,ಹುಳಿಯಾರು ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಕೃಷ್ಣಮೂರ್ತಿ, ಜಗದೀಶ್, ನಂದಿಹಳ್ಳಿ ಗಿರೀಶ್ ಸೇರಿದಂತೆ ದಲಿತ ಮುಖಂಡರುಗಳು ಹಾಜರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ