ಪ್ರತಿ ವರ್ಷ ಡಿಸೆಂಬರ್ 3 ರಂದು ವಕೀಲರ ದಿನವನ್ನಾಗಿ ದೇಶಾದ್ಯಂತ ಆಚರಿಸಲಾಗುತ್ತದೆ...ಪ್ರತಿಯೊಂದು ದೇಶದ ಸ್ವಾತಂತ್ರ್ಯ ಹೋರಾಟದ ನಾಯಕತ್ವದಿಂದ ಪ್ರಾರಂಭವಾಗಿ ಆಯಾ ದೇಶದ ಸಂವಿಧಾನ ರಚಿಸುವಲ್ಲಿ ಮತ್ತು ರಚಿಸಿದ ಸಂವಿಧಾನವನ್ನು ರಕ್ಷಿಸುವಲ್ಲಿ ವಕೀಲವೃಂದದ್ದೆ ಸಿಂಹಪಾಲು.ಇಂತಹ ಶ್ರೇಷ್ಠ ವೃತ್ತಿ ವರ್ಗವನ್ನು ಗೌರವಿಸುವ ಸಲುವಾಗಿ & ಡಾ. ಬಾಬು ರಾಜೇಂದ್ರ ಪ್ರಸಾದ್ ರವರ ಜನ್ಮ ದಿನದ ಸವಿನೆನಪಿಗಾಗಿ ಈ ದಿನವನ್ನ ವಕೀಲರ ದಿನವನ್ನಾಗಿ ಆಚರಿಸಲಾಗುತ್ತದೆ.
ಭಾರತದ ಸ್ವಾತಂತ್ರ್ಯ ಸಂಗ್ರಾಮದ ನಾಯಕತ್ವ ವಹಿಸಿದವರಲ್ಲಿ ಬಹುತೇಕ ಮಂದಿ ವಕೀಲರೇ ಆಗಿದ್ದರು ಅಥವಾ ಆಳವಾಗಿ ಕಾನೂನಿನ ಬಗ್ಗೆ ಅಧ್ಯಯನ ನಡೆಸಿದವರಾಗಿದ್ದರು.ಉದಾಹರಣೆಗೆ ಲಾಲ ಲಜಪತ್ ರಾಯ್,ಮಹಾತ್ಮ ಗಾಂಧಿ,ಬಾಬು ರಾಜೇಂದ್ರ ಪ್ರಸಾದ್, ಸರ್ದಾರ್ ವಲ್ಲಬ್ ಭಾಯಿ ಪಟೇಲ್,ದಾದಾ ಬಾಯಿ ನವರೋಜಿ,ಸುರೇಂದ್ರ ನಾಥ್ ಬ್ಯಾನರ್ಜಿ,ಮದನಮೋಹನ್ ಮಾಳವೀಯ,ಲೋಕಮಾನ್ಯ ಬಾಲಗಂಗಾಧರ ನಾಥ ತಿಲಕ್,ಸಿ.ರಾಜ್ ಗೋಪಾಲ ಚಾರಿ ಈಗೆ ಹಲವಾರು ಮಹಾನೀಯರು ಸ್ವಾತಂತ್ರ್ಯ ಹೋರಾಟದ ಮುಂದಾಳತ್ವ ವಹಿಸಿದ್ದರು...
ಹಾಗೂ ಸ್ವಾತಂತ್ರ್ಯ ನಂತರದ ಸ್ವಾಭಿಮಾನಿ & ಸ್ವಾವಲಂಬಿ ಭಾರತ ನಿರ್ಮಾಣದ ಮಾರ್ಗದರ್ಶಿಯಾದ ನಮ್ಮ ಹೆಮ್ಮೆಯೆ ಸಂವಿಧಾನವನ್ನು ರಚಿಸುವಲ್ಲಿಯು ಕಾನೂನು ತಜ್ಞರ ಪಾತ್ರ ಅದ್ವಿತೀಯವಾದದ್ದು ಅದರಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್,ಬೆನಗಲ್ ನರಸಿಂಗ್ ರಾವ್,ಕೆ.ಎಮ್ ಮುನ್ಷಿ,ಎನ್ ಗೋಪಾಲ ಸ್ವಾಮಿ,ಅಲ್ಲಾಡಿ ಕೃಷ್ಣ ಸ್ವಾಮಿ ಅಯ್ಯರ್,ಮೊಹಮ್ಮದ್ ಸಾದುಲ್ಲ,ಬಿ,ಎಲ್,ಮಿತ್ತರ್ ಇತರರ ಕೊಡುಗೆ ಅನನ್ಯ.
ಜಗತ್ತಿನ ಬಹುತೇಕ ಸಂವಿಧಾನಗಳನ್ನ ಆಳವಾಗಿ ಅಧ್ಯಯನ ಮಾಡಿ ಆ ಸಂವಿಧಾನಗಳಲ್ಲಿ ಅಡಕವಾದ ಮತ್ತು ನಮ್ಮ ಭಾರತದ ವಾಸ್ತವಿಕತೆಗೆ ಅನುಗುಣವಾದ ಅಂಶಗಳನ್ನ ನಮ್ಮ ಸಂವಿಧಾನಕ್ಕೆ ಸೇರಿಸಿ ಬಹು ಸಧೃಡವಾದ ಸಂವಿಧಾನ ರಚಿಸಿದ ಕೀರ್ತಿಯ ಸಿಂಹಪಾಲು ವಕೀಲವೃತ್ತಿಗೆ ಸೇರುತ್ತದೆ ಎಂದರೆ ತಪ್ಪಾಗಲಾರದು.ವಕೀಲರು ಆಗಿದ್ದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ರವರು ವಹಿಸಿದ್ದ ನಾಯಕತ್ವ, ಸಾಮರಸ್ಯತೆ,ಸಮನ್ವಯತೆ ಅಜರಾಮರ.ಇಂದು ನಾವು ನೋಡುತ್ತಿರುವ ಸಂವಿಧಾನ ದೇಶದ ಎಲ್ಲ ಕಾನೂನುಗಳ ಮೂಲ ಮತ್ತು ತಾಯಿಯೆಂದೆ ಹೇಳಬಹುದು.ಈ ಸಂವಿಧಾನದ ಆಶಯಕ್ಕೆ ಯಾವ ಕಾನೂನು ಕೂಡ ಧಕ್ಕೆ ತರುವಂತಿಲ್ಲ.ಬದಲಾಗುತ್ತಿರುವ ಕಾಲಕ್ಕೆ ಅನುಸಾರವಾಗಿ ಅಧ್ಯಯನ ಮಾಡಿ ಸೂಕ್ತವಾಗಿ ವ್ಯಾಖ್ಯಾನ ಮಾಡುತ್ತಿರುವವರು ವಕೀಲರೆ.ಸಾಂವಿಧಾನಿಕ ಪೀಠಗಳನ್ನ ಅಲಂಕರಿಸಿ ಸೂಕ್ತ ತೀರ್ಪುಗಳನ್ನ ನೀಡುವವರೂ ಕೂಡ ಮೂಲತಃ ವಕೀಲರೇ ಆಗಿರುತ್ತಾರೆ.ಹಾಗಾಗಿ ವಕೀಲರ ಸ್ಥಾನಮಾನ ಮತ್ತು ಜವಾಬ್ದಾರಿ ಗಳನ್ನ ಯಾರು ಕೂಡ ಅಲ್ಲಗೆಳೆಯುವಂತಿಲ್ಲ.ಈ ರೀತಿಯ ವಕೀಲ ವೃಂದದ ಕೊಡುಗೆ ಮತ್ತು ಜವಾಬ್ದಾರಿ ಗಳನ್ನ ಅವಲೋಕಿಸುವ ಸಲುವಾಗಿ ಮತ್ತು ಡಾ.ಬಾಬು ರಾಜೇಂದ್ರಪ್ರಸಾದ್ ರವರ ಜನ್ಮ ದಿನದ ಸವಿನೆನಪಿಗಾಗಿ ಪ್ರತಿವರ್ಷ ಡಿಸೆಂಬರ್ 3 ರಂದು ವಕೀಲರ ದಿನ ವನ್ನಾಗಿ ದೇಶಾದ್ಯಂತ ಆಚರಿಸುವ ಮೂಲಕ. ಇಡೀ ವಕೀಲರ ವೃಂದಕ್ಕೆ ಗೌರವ ಸಮರ್ಪಿಸಲಾಗುತ್ತಿದೆ.
ವಕೀಲ ವೃತ್ತಿ ಕೇವಲ ವೃತ್ತಿಯಲ್ಲ ಅದೊಂದು ಸಾಮಾಜಿಕ ಜವಾಬ್ದಾರಿ.ಈ ಮಾತು ಅಕ್ಷರಶಃ ಸತ್ಯ..ಸದಾ ಅಧ್ಯಯನ ಶೀಲರಾಗಿ ಇರುವಂತಹ ವೃತ್ತಿ ಎಂದರೆ ವಕೀಲ ವೃತ್ತಿ. ಪ್ರತಿ ದಿನ,ಪ್ರತಿ ಕ್ಷಣ ಹೊಸ ವಿಚಾರಗಳನ್ನು.ಹೊಸ ಅನುಭವಗಳನ್ನು ಪಡೆಯುತ್ತ ಹೋಗುವ ವೃತ್ತಿ ಇದು.ಅದಕ್ಕಾಗಿಯೇ ವಕೀಲರನ್ನ ಮತ್ತು ಕಾನೂನು ಪಂಡಿತರನ್ನು Learned Counsel (ಪ್ರಾಜ್ಞ)ಎಂದು ಸಂಭೋದಿಸುತ್ತಾರೆ.ನ್ಯಾಯಾಧೀಶರು & ವಕೀಲರು ನ್ಯಾಯಾಂಗ ವ್ಯವಸ್ಥೆಯ ಎರಡು ಆಧಾರ ಸ್ಥಂಭಗಳೆಂದು ಕರೆಯುವ ವಾಡಿಕೆ ಇದೆ.ಪರಸ್ಪರ ಪ್ರೀತಿ,ವಿಶ್ವಾಸ,ಪ್ರಾಮಾಣಿಕತೆಯಿಂದ ನ್ಯಾಯಾಲಯದ ಪಾವಿತ್ರ್ಯತೆ ಕಾಪಾಡಿಕೊಂಡು ಹೋಗುವುದು ಈರ್ವರ ಜವಾಬ್ದಾರಿಯಾಗಿದೆ.
ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಕ್ಷೇತ್ರಗಳಲ್ಲಿ ನ್ಯಾಯಾಂಗ ವ್ಯವಸ್ಥೆಯು ಒಂದು.ಈಗಾಗಲೇ ಸುಮಾರು 24 ಲಕ್ಷ ವಕೀಲರು ನೋಂದಾಣಿ ಮಾಡಿಕೊಂಡು ನ್ಯಾಯಾಂಗದ ಹಲವಾರು ವಿಭಾಗಗಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.ವಕೀಲ ವೃತ್ತಿಯನ್ನು "ನೋಬೆಲ್ ಪ್ರೊಫೆಷನ್" ಎಂದು ಕೊಂಡಾಡುವಂತಹ ಸಂಧರ್ಭದಲ್ಲಿ ವಕೀಲರು ಪ್ರಾಮಾಣಿಕತೆಯಿಂದ. ಸಾಮಾಜಿಕ ಕಳಳಿಯಿಂದ ವೃತ್ತಿಧರ್ಮ ಪಾಲಿಸಬೇಕಾಗಿದೆ.ಸಮಾಜದ ಡೊಂಕನ್ನು ತಿದ್ದುವಲ್ಲಿಯು ವಕೀಲರ ಪಾತ್ರ ಹಿರಿಯದ್ದೆ ಆಗಿದೆ ಆಗಾಗಿ ವಕೀಲರನ್ನು "ಸಾಮಾಜಿಕ ವೈದ್ಯರು" ಹಾಗೂ "ಸಾಮಾಜಿಕ ಎಂಜಿನಿಯರ್" ಗಳು ಎಂದು ಸಂಭೋಧಿಸಲಾಗಿದೆ.
ಪ್ರತಿಯೊಬ್ಬ ವಕೀಲರು ಕೂಡ ದೀನ ದಲಿತರ,ಶೋಷಿತರ,ಬಡವರ,ಅನ್ಯಾಯಕ್ಕೆ ಒಳಾಗಾದವರ ಧ್ವನಿಯಾಗಿ ಪ್ರಾಮಾಣಿಕತೆಯಿಂದ ನಿಸ್ವಾರ್ಥಪರತೆಯಿಂದ ತಮ್ಮ ವೃತ್ತಿ ನಿರ್ವಹಿಸಿದಲ್ಲಿ ಮಾತ್ರ ಭವ್ಯ ಭಾರತವನ್ನು ಕಟ್ಟಬಹುದು...
ವಕೀಲ ವೃತ್ತಿಗೆ ಹೊಸದಾಗಿ ಬರುವ ಯುವ ವಕೀಲರಿಗೆ ಮಾರ್ಗದರ್ಶನ,ಪ್ರೋತ್ಸಾಹ,ಅವಕಾಶ ನೀಡುವುದು ಹಿರಿಯ ವಕೀಲರದ್ದಾದರೆ,ಗೌರವದಿಂದ ಸಿಕ್ಕಿದ ಅವಕಾಶಗಳನ್ನ ಶ್ರದ್ಧೆಯಿಂದ ಸದುಪಯೋಗ ಪಡಿಸಿಕೊಳ್ಳುವುದರೊಂದಿಗೆ ವೃತ್ತಿ ನೈಪುಣ್ಯತೆ ಗಳಿಸುವುದು ಕಿರಿಯ ವಕೀಲರ ಕರ್ತವ್ಯವಾಗಿದೆ.
ಅಂದಿನಿಂದ ಇಂದಿನವರೆಗೂ ಸಮಾಜಕ್ಕೆ ನಾಯಕತ್ವ ವಹಿಸಿಕೊಂಡು ಬಂದಿರುವ ಕಾನೂನು ಕ್ಷೇತ್ರ ನಿಜಕ್ಕೂ ಮಹತ್ತರವಾದುದು.ಮತ್ತು ಈ ಕ್ಷೇತ್ರದ ಸಾಧನೆಯೂ ಶ್ಲಾಘನೀಯ.ಇದು ಈ ಮುಂದೆಯೂ ಹೀಗೆಯೇ ಮುಂದುವರೆಯಲಿ....
ಪ್ರಶಾಂತ್ ದಸೂಡಿ.
ವಕೀಲರು & ಕಾನೂನು ಸಲಹೆಗಾರರು..
ದೂರವಾಣಿ:8197579795
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ