ವಿಷಯಕ್ಕೆ ಹೋಗಿ

ಹುಳಿಯಾರು ಪಟ್ಟಣ ಪಂಚಾಯಿತಿಯ 2025- 26 ನೇ ಸಾಲಿನ ಆಯವ್ಯಯ ಮಂಡನೆ : ₹40,48,515 ರೂಪಾಯಿಗಳ ಉಳಿತಾಯ ಬಜೆಟ್

ಹುಳಿಯಾರು ಪಟ್ಟಣ ಪಂಚಾಯಿತಿಯ 2025- 26 ನೇ ಸಾಲಿನ ಆಯವ್ಯಯ ಮಂಡನೆ : ₹40,48,515 ರೂಪಾಯಿಗಳ ಉಳಿತಾಯ ಬಜೆಟ್

ಕಳೆದ ಸಾಲಿನ ಆಯವ್ಯಯದ ಆಗು-ಹೋಗುಗಳ ಬಗ್ಗೆ ಮಾಹಿತಿ ನೀಡಲು ಒತ್ತಾಯ...

ಸಭೆಗೆ ಗೈರಾದ ಪಟ್ಟಣ ಪಂಚಾಯಿತಿ ಇಂಜಿನಿಯರ್ ಮೇಲೆ ದೂರುಗಳ ಸುರಿಮಳೆ

ಪಟ್ಟಣ ಪಂಚಾಯಿತಿಯ ಹೊಸ ಕಚೇರಿ ಕಟ್ಟಡ ನಿರ್ಮಾಣಕ್ಕೆ 200 ಲಕ್ಷ ರೂ ಮೀಸಲು.

ಆಯವ್ಯಯದ ಪ್ರಮುಖ ಅಂಕಿ ಅಂಶ ಹಾಗೂ ವಿಶೇಷ ಅಭಿವೃದ್ಧಿ ಯೋಜನೆಗಳ ಬಗ್ಗೆ  ವಿವರಣೆ ನೀಡಿದ ಅಧ್ಯಕ್ಷೆ ಶ್ರೀಮತಿ ರತ್ನಮ್ಮ

------------------------------

✍️ ನರೇಂದ್ರಬಾಬು-ಹುಳಿಯಾರು

      9448760070

-------------------------------

ಹುಳಿಯಾರು : ಹುಳಿಯಾರು ಪಟ್ಟಣ ಪಂಚಾಯಿತಿಯ 2025- 26 ನೇ ಸಾಲಿನ ಆಯವ್ಯಯವನ್ನು ಅಧ್ಯಕ್ಷೆ ಶ್ರೀಮತಿ ರತ್ನಮ್ಮ ಮಂಡಿಸಿದ್ದು ಪಟ್ಟಣ ಪಂಚಾಯಿತಿಗೆ ವಿವಿಧ ಮೂಲಗಳಿಂದ ಒಟ್ಟು 33,08,62,000 ರೂ ಆದಾಯ ನಿರೀಕ್ಷಿಸಲಾಗಿದ್ದು ಹಾಗೂ 41,00,75,729 ರೂ ವೆಚ್ಚ ನಿರೀಕ್ಷಿಸಲಾಗಿದ್ದು ಒಟ್ಟು 40,48,515 ರೂಪಾಯಿ ಆಖೈರು ಶಿಲ್ಕಿನೊಂದಿಗೆ ಉಳಿತಾಯ ಬಜೆಟ್ ಮಂಡಿಸಲಾಯಿತು.   
                                            

ಮಂಗಳವಾರ ಬೆಳಗ್ಗೆ 11 ಗಂಟೆಗೆ  ಪಟ್ಟಣ ಪಂಚಾಯಿತಿ ಅಧ್ಯಕ್ಷೆ  ರತ್ನಮ್ಮ ಅಧ್ಯಕ್ಷತೆಯಲ್ಲಿ ಪಟ್ಟಣ ಪಂಚಾಯತಿ ಸಭಾಂಗಣದಲ್ಲಿ ಕರೆಯಲಾಗಿದ್ದ  2025-26 ನೇ ಸಾಲಿನ ಆಯವ್ಯಯ ಮಂಡನೆ ಸಭೆಯಲ್ಲಿ  ₹40,48,515 ರೂಪಾಯಿಗಳ ಉಳಿತಾಯ ಬಜೆಟ್ ಮಂಡಿಸಲಾಯಿತಾದರೂ ಪ್ರಾರಂಭದಲ್ಲಿ ಸಭೆಗೆ ಗೈರಾಗಿದ್ದ ಇಂಜಿನಿಯರ್ ಬಗ್ಗೆ ಎಲ್ಲಾ ಸದಸ್ಯರುಗಳು ವಕ್ಕೋರಿಲಿನಿಂದ ಸಮಸ್ಯೆಗಳ ಸುರಿಮಳೆಗೈದರು. ಕಳೆದ ಸಾಲಿನ ಬಜೆಟ್ ನಲ್ಲಿ ಮೀಸಲಿಟ್ಟಿದ್ದ ಹಣಕ್ಕೆ ಕ್ರಿಯಾಯೋಜನೆ ಮಾಡದೆ ಹಣ ಪೋಲು ಮಾಡಿದ್ದಾರೆ ಎಂದು ಆರೋಪಿಸಿದರು. ಯಾರ ಫೋನಿಗೂ ಸಿಗದೇ, ನಿಯಮಿತವಾಗಿ ಕಚೇರಿಗೆ ಆಗಮಿಸದೆ, ಯಾವ ಸದಸ್ಯರಿಗೂ ಸ್ಪಂದಿಸದಿರುವ ಇಂಜಿನಿಯರ್ ಈ ಪಂಚಾಯಿತಿಗೆ ಅಗತ್ಯ ಇಲ್ಲ ಪಿಡಿಗೆ ಫೋನ್ ಮಾಡಿ ಅವರನ್ನು ಕೂಡಲೇ ಬದಲಾಯಿಸಿ ಎಂದು ದಯಾನಂದ್, ದಸ್ತಗಿರಿ ಸಾಬ್, ಮಾಜಿ ಅಧ್ಯಕ್ಷ ಕಿರಣ್ ಕುಮಾರ್ ಸೇರಿದಂತೆ ಹಲವು ಸದಸ್ಯರು ಒತ್ತಾಯಿಸಿದರು.

ಬ‌ಜೆಟ್‌ ಮಂಡನೆ ಹಾಗೂ ಅನುಮೋದನೆಗಾಗಿ ಇಂದು ಸಭೆ ಕರೆಯಲಾಗಿತ್ತಾದರೂ ಆರಂಭದಲ್ಲಿಯೇ ಇದು ಬಜೆಟ್ ಸಭೆಯೊ ಅಥವಾ ಕುಂದು ಕೊರತೆಯ ಸಭೆಯೋ ಎನ್ನುವಂತೆ ಸದಸ್ಯರುಗಳು ಮುಖ್ಯಾಧಿಕಾರಿ ನಾಗಭೂಷಣ್ ಅವರ ಬಳಿ ಪಟ್ಟಣದ ಹತ್ತು ಹಲವು ಸಮಸ್ಯೆಗಳ ಬಗ್ಗೆ ಪ್ರಶ್ನೆಗಳ ಸುರಿಮಳೆಗೆರೆದರು.

ಇದರ ನಡುವೆಯೇ ಆಸ್ತಿತೆರಿಗೆ ದರವನ್ನು ಶೇಕಡ 5% ಹೆಚ್ಚಿಸುವ ಮೂಲಕ ಪರಿಷ್ಕರಿಸಲು ಒಪ್ಪಲಾಯಿತು.ನೀರಿನ ಕರ ಹೆಚ್ಚಿಸುವುದರ ಕುರಿತು ಕಂದಾಯಾಧಿಕಾರಿ ಸಭೆಯಲ್ಲಿ ಪ್ರಸ್ತಾಪ ಮಾಡುತ್ತಿದ್ದಂತೆ, ಇದುವರೆಗೂ ಪಟ್ಟಣದಲ್ಲಿ ನೀರು ಕೊಡಲು ಪಟ್ಟಣ ಪಂಚಾಯಿತಿಯಿಂದ ಸಾಧ್ಯವಾಗಿಲ್ಲ, ಹಾಗಿದ್ದೂ ಪುನಃ ನೀರಿನ ಕರ ಹೆಚ್ಚಿಸಿದಲ್ಲಿ ಸಮಸ್ಯೆ ಉಂಟಾಗುತ್ತದೆ ಎನ್ನುವ ಮಾತು ಕೇಳಿ ಬಂತು.ಕಡೆಗೆ ಹಾಲಿ ಇರುವ 80 ರೂಪಾಯಿಗಳ ಬದಲಿಗೆ 90 ರೂಪಾಯಿಗೆ ಹೆಚ್ಚಳ ಮಾಡುವಂತೆ ಸೂಚಿಸಲಾಯಿತು.

ಅಧ್ಯಕ್ಷೆ ರತ್ನಮ್ಮ  2025-26 ನೇ ಸಾಲಿನ ನಿರೀಕ್ಷಿತ ಆದಾಯ ಮತ್ತು ವೆಚ್ಚಗಳ ಯೋಜನೆಯ ಪಟ್ಟಿಯನ್ನು ಓದುವುದರ ಮೂಲಕ ಬಜೆಟ್ ಮಂಡಿಸಿದರು.

                                        

ಬಜೆಟ್ ಪ್ರಮುಖ ಅಂಶಗಳು :

-------------------------

ಸ್ವಯಂಘೋಷಿತ ಆಸ್ತಿ ತೆರಿಗೆಯಿಂದ 120 ಲಕ್ಷ ರೂಪಾಯಿ, ನೀರು ಸರಬರಾಜು ಸಂಪರ್ಕಗಳಿಂದ 30 ಲಕ್ಷ ರೂಪಾಯಿ, ವಾಣಿಜ್ಯ ಸಂಕೀರ್ಣಗಳ ಬಾಡಿಗೆಯಿಂದ 50 ಲಕ್ಷ ರೂಪಾಯಿ, ಪರಿವೀಕ್ಷಣ ಶುಲ್ಕ- ಉದ್ಯಮ ಪರವಾನಿಗೆ- ಕಟ್ಟಡ ಪರವಾನಿಗೆ -ಖಾತಾ ನಕಲು ಮತ್ತಿತರ ಶುಲ್ಕಗಳಿಂದ 1.05 ಕೋಟಿ ರೂಪಾಯಿ, ವೇತನ ಮತ್ತು ವಿದ್ಯುತ್ ಅನುದಾನ ಮೂಲಗಳಿಂದ 548 ಲಕ್ಷ ,ಎಸ್ ಎಫ್ ಸಿ ವಿಶೇಷ ಮತ್ತು ಇತರೆ ಮೂಲಗಳಿಂದ 69 ಲಕ್ಷ ರೂಪಾಯಿ ಆದಾಯ ನಿರೀಕ್ಷಿಸಲಾಗಿದೆ ಎಂದರು.

                                           

ಯೋಜನೆಗಳಿಗೆ ಖರ್ಚು-ವೆಚ್ಚ

---------------------------

             ಕೊಳವೆ ಬಾವಿ ಕೊರೆಸುವುದು, ಪೈಪ್ಲೈನ್ ನಿರ್ಮಾಣ, ಸಾರ್ವಜನಿಕರಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು 340 ಲಕ್ಷ ರೂಪಾಯಿ ವೆಚ್ಚ ತಗಲಬಹುದೆಂದು ನಿರೀಕ್ಷಿಸಲಾಗಿದೆ.

                ಉದ್ಯಾನವನ ನಿರ್ಮಿಸಲು 18 ಲಕ್ಷ ರೂಪಾಯಿ, ರುದ್ರಭೂಮಿ ಮತ್ತು ಖಬರಸ್ಥಾನಗಳ ಮೂಲಭೂತ ಅಭಿವೃದ್ಧಿಗಾಗಿ 80 ಲಕ್ಷ ರೂ, ಘನತ್ಯಜ ವಸ್ತು ವಿಲೇವಾರಿ ಘಟಕದ ಅಭಿವೃದ್ಧಿ ಮತ್ತು ನಿರ್ವಹಣೆಗಾಗಿ 194 ಲಕ್ಷ, ದೀನ ದಯಾಳ್ ಅಂತ್ಯೋದಯ ಯೋಜನೆ ಅಡಿಯಲ್ಲಿ ಯುವಕ ಯುವತಿಯರಿಗೆ ತರಬೇತಿ ಆಯೋಜಿಸಲು ಹಾಗೂ ಉದ್ಯೋಗ ಮೇಳ ನಡೆಸಲು 50 ಲಕ್ಷ ರೂಪಾಯಿ,ಹುಳಿಯಾರು ಪಟ್ಟಣ ಪಂಚಾಯಿತಿ ಸಿಬ್ಬಂದಿಗಳ ವೇತನಕ್ಕೆ 1 ಕೋಟಿ 65 ಲಕ್ಷ ರೂಪಾಯಿ ಕಾಯ್ದಿರಿಸಲಾಗಿದೆ.

                       ಪಟ್ಟಣ ಪಂಚಾಯಿತಿ ಆಡಳಿತ ವೆಚ್ಚ ಮತ್ತು ಮಾಸಿಕ ಬಾಡಿಗೆ ಆಧಾರದ ಮೇಲೆ ವಾಹನ ಖರೀದಿ ಇನ್ನಿತರ ವೆಚ್ಚಗಳಿಗಾಗಿ 85.04 ಲಕ್ಷ ರೂಪಾಯಿ ಕಾಯ್ದಿರಿಸಲಾಗಿದೆ. ಹೊಸ ಕಚೇರಿ ಕಟ್ಟಡ ನಿರ್ಮಾಣ ಮಾಡಲು 200ಲಕ್ಷ ರೂ ಮೀಸಲಿಡಲಾಗಿದೆ.

                                 ಹುಳಿಯಾರು ಪಟ್ಟಣ ಪಂಚಾಯಿತಿಯ ನಾಗರೀಕರಿಗೆ ದಿನನಿತ್ಯದ ಅತ್ಯವಶ್ಯಕವಾಗಿರುವಂತಹ ಕುಡಿಯುವ ನೀರಿನ ವ್ಯವಸ್ಥೆ ರಸ್ತೆ ಮತ್ತು ಚರಂಡಿ ಬೀದಿ ದೀಪ, ಸ್ವಚ್ಛತೆ ನಿರ್ವಹಣೆ ಮೊದಲ ಆದ್ಯತೆ ನೀಡಲಾಗಿದೆ ಎಂದರು.


2025-26 ನೇ ಸಾಲಿನ ಪಟ್ಟಣ ಪಂಚಾಯಿತಿಯ ಆಯವ್ಯಯದ ಘೋಷ್ವಾರೆ ಹೀಗಿದೆ.

ಪ್ರಾರಂಭಿಕ ಶಿಲ್ಕು     ರೂ 8,32,62,244

ನೀರಿಕ್ಷಿತ ಆದಾಯ.  ರೂ.33,08,62,000

ನಿರೀಕ್ಷಿತ ಖರ್ಚು      ರೂ.41,00,75,729

ಆಖೈರು ಶಿಲ್ಕು        ರೂ. 40,48,515

ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಕಾವ್ಯ ರಾಣಿ, ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಶೇಖರ ರಾವ್, ಸದಸ್ಯರುಗಳಾದ ಹೇಮಂತ ಕುಮಾರ್, ಬೀಬೀ ಫಾತಿಮಾ, ಶೃತಿ ಸನತ್ ,ಮಾಜಿ ಅಧ್ಯಕ್ಷ ಕಿರಣ್ ಕುಮಾರ್, ಪ್ರೀತಿ ರಾಘವೇಂದ್ರ, ರಾಜು ಬಡಗಿ, ದಯಾನಂದ್, ಮಂಜಾ ನಾಯ್ಕ, ದಸ್ತಗಿರಿ ಸಾಬ್, ಅಬೂಬಕ್ಕರ್ ಸಿದ್ದಿಕ್, ಮಹಮ್ಮದ್ ಜುಬೇರ್, ನಾಮಿನಿ ಸದಸ್ಯರಾದ ವೆಂಕಟೇಶ್ ಹಾಗೂ ಸೈಯದ್ ನೂರ್ ಫಕ್ರುದ್ದೀನ್ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಗಭೂಷಣ್, ಕಂದಾಯಾಧಿಕಾರಿ ಪ್ರದೀಪ್ ಸೇರಿದಂತೆ ಸಿಬ್ಬಂದಿಗಳಿದ್ದರು.




ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ...

ಹುಳಿಯಾರು: ಹನುಮ ಜಯಂತಿ ನಿಮಿತ್ತ ಸೌಹಾರ್ದ ಸಭೆ

ಹುಳಿಯಾರು ಪಟ್ಟಣದಲ್ಲಿ ಹನುಮ ಜಯಂತಿಯನ್ನು ಯಾವುದೇ ಸಮಸ್ಯೆಗೆ ಎಡೆ ಮಾಡಿಕೊಡದಂತೆ ಸೌಹಾರ್ದಯುತವಾಗಿ ಆಚರಿಸಬೇಕೆಂದು ಪಿಎಸೈ ಧರ್ಮಾಂಜಿ ಸೂಚನೆ ನೀಡಿದರು. ಹುಳಿಯಾರು ಪೋಲಿಸ್ ಠಾಣೆಯಲ್ಲಿ ಹನುಮಜ್ಜಯಂತಿ ಹಬ್ಬದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತ ಕ್ರಮಕೈಗೊಳ್ಳುವ ಬಗ್ಗೆ ಇಲಾಖೆಯಿಂದ ಆಯೋಜಿಸಲಾಗಿದ್ದ ಸೌಹಾರ್ದ ಸಭೆಯಲ್ಲಿ ಮಾತನಾಡಿದ ಅವರು ಇದುವರೆಗೂ ಪಟ್ಟಣದಲ್ಲಿ ಎಲ್ಲಾ ಸಮುದಾಯದವರು ಆಚರಿಸಿಕೊಂಡು ಬರುತ್ತಿರುವ ಉತ್ಸವಗಳಲ್ಲಿ ಯಾವುದೇ ಸಮಸ್ಯೆ ಎದುರಾಗಿಲ್ಲ. ಅದೇ ರೀತಿ ಹನುಮ ಜಯಂತಿ ಕಾರ್ಯಕ್ರಮ ಕೂಡ ಎಲ್ಲಾ ಸಮುದಾಯದವರ ಸಹಕಾರದೊಂದಿಗೆ, ಎಲ್ಲರೂ ಪಾಲ್ಗೊಳ್ಳುವ ಮೂಲಕ ಸೌಹಾರ್ದಯುತವಾಗಿ ನಡೆಯಬೇಕೆಂದು ಕೆಲವೊಂದು ಸೂಚನೆಗಳನ್ನು ನೀಡಿದರು.  ಆಯೋಜಕರು ಪೊಲೀಸ್ ಠಾಣೆಗೆ ಕೊಟ್ಟಿರುವ ಮಾರ್ಗದಲ್ಲಿಯೇ ಉತ್ಸವ ನಡೆಸಬೇಕು, ಸಮಯ ಪರಿಪಾಲನೆ ಮಾಡಬೇಕು ಯಾವುದೇ ಪ್ರಚೋದನೆಗೆ ಒಳಗಾಗದೆ ಜಾತಿ ಧರ್ಮದ ಘೋಷಣೆಗಳನ್ನು ಕೂಗದೆ ಶಾಂತಿಯುತವಾಗಿ ಉತ್ಸವ ಸಾಗಲು ಸಹಕರಿಸಬೇಕು ಎಂದರು. ಪಟ್ಟಣದ ಎಲ್ಲಾ ಸಮುದಾಯದ ನಾಗರಿಕರು ಉತ್ಸವ ಹಬ್ಬಗಳನ್ನು ನೆಮ್ಮದಿ ಮತ್ತು ಸಂತೋಷದಿಂದ ಆಚರಿಸುವಂತಾಗಬೇಕು ಎಂಬುದು ಇಲಾಖೆಯ ಆಶಯವಾಗಿದ್ದು. ಆ ನಿಟ್ಟಿನಲ್ಲಿ ಎಲ್ಲರೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು. ಮುಸಲ್ಮಾನ ಬಂಧುಗಳು ಸಹ ಮಸೀದಿಯಲ್ಲಿ ಹನುಮ ಜಯಂತಿ ಉತ್ಸವಕ್ಕೆ ಎಲ್ಲರೂ ಸಹಕರಿಸಬ...

ಡಾ||ರಂಗನಾಥ್‌ಗೆ ಮುಖ್ಯಮಂತ್ರಿಗಳಿಂದ "ಶ್ರೇಷ್ಠ ವೈದ್ಯ ಪ್ರಶಸ್ತಿ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಇಂದು ಬೆಂಗಳೂರಿನಲ್ಲಿ ಆಯೋಜಿಸಿದ್ದ 'ರಾಷ್ಟ್ರೀಯ ವೈದ್ಯರ ದಿನಾಚರಣೆ'ಯಲ್ಲಿ ಮುಖ್ಯಮಂತ್ರಿಗಳಿಂದ "ಶ್ರೇಷ್ಠ ವೈದ್ಯ ಪ್ರಶಸ್ತಿ"ಯನ್ನು ಡಾ||ರಂಗನಾಥ್ ರವರು ಪಡೆದರು. ಡಾ||ರಂಗನಾಥ್ ಅವರು ಸದ್ಯ ಹಾಸನ ಜಿಲ್ಲೆಯ ಕಣಕಟ್ಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಈ ಹಿಂದೆ ಹುಳಿಯಾರಿನಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿ ಜನಪ್ರಿಯರಾಗಿದ್ದರು. ಈ ಸಂದರ್ಭದಲ್ಲಿ ಹುಳಿಯಾರಿನ ಕಿರಣ್ ಕೇಶವಪುರ ಹಾಗೂ ಸ್ನೇಹಿತರು ಪಾಲ್ಗೊಂಡಿದ್ದರು.