ಪಟ್ಟಣದ ಎಸ್‌ವಿಬಿ ಅಕಾಡೆಮಿಯಿಂದ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಪ್ರಶಸ್ತಿ ಪತ್ರ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಎಸ್‌ವಿಬಿ ಅಕಾಡೆಮಿಯ ಮಾರ್ಗದರ್ಶಕರಾದ ಶ್ರುತಿರವರು ಎಲ್ಲಾ ಮಕ್ಕಳಿಗೂ ಅಬಕಸ್ ತರಬೇತಿ ಉತ್ತಮವಾಗಿ ನೀಡುತ್ತಿದ್ದು ಪಟ್ಟಣದ ರೀತಿಯಲ್ಲಿಯೇ ಹಳ್ಳಿಯ ಮಕ್ಕಳಿಗೂ ಸಹ ಉತ್ತಮ ಜ್ಞಾನ, ಶಿಕ್ಷಣ ನೀಡುತ್ತಿದ್ದಾರೆ ತಮ್ಮ ಮಕ್ಕಳ್ಳನ್ನು ಇಲ್ಲಿ ದಾಖಲಿಸಿಸುವ ಮೂಲಕ ಮಕ್ಕಳಿಗೆ ಉತ್ತಮ ಶಿಕ್ಷಣ ಪಡೆದುಕೊಳ್ಳಿ ಎಂದರು.
"ಶಿಕ್ಷಣವೇ ಸಂಪತ್ತು ಎಂದು ತಿಳಿಸಿದ ಅವರು ಜೀವನದಲ್ಲಿ ಸಂಸ್ಕಾರ- ಯೋಗಜ್ಞಾನ ವೃದ್ಧಿಸಿಕೊಳ್ಳುವುದು ಹೇಗೆ ಎಂಬ ಬಗ್ಗೆ ಮಕ್ಕಳಿಗೆ ಜ್ಞಾನ ನೀಡಿದರು.
SVB ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ಮಕ್ಕಳ ಪೋಷಕರಾದ ಅಶ್ವಿನಿ ಮಾತನಾಡಿ ಅಬಾಕಸ್ ಬೇರೆ ಊರುಗಳಲ್ಲಿ ನಡೆಯುತ್ತಿತ್ತು, ಇದೀಗ ಹುಳಿಯಾರಿನಲ್ಲಿ ಎಸ್‌ವಿಬಿ ಅಕಾಡೆಮಿಯಿಂದ ಮಕ್ಕಳಿಗೆ ಗುಣಾತ್ಮಕವಾಗಿ ತರಬೇತಿ ನೀಡುತ್ತಿರುವುದು ಸಂತೋಷದ ವಿಷಯ ಎಂದರು.
ಮತ್ತೊಬ್ಬ ಪೋಷಕರಾದ ಶಿಕ್ಷಕಿ ಇಂದ್ರಮ್ಮ ಮಾತನಾಡಿ ನಮ್ಮ ಮಕ್ಕಳು ಅಬಾಕಸ್ ತರಬೇತಿ ಪಡೆಯುತ್ತಿರುವುದರಿಂದ ಮಕ್ಕಳ ಕಲಿಕೆ ಉತ್ತಮವಾಗುತ್ತಿದೆ ಎಂದು ತಿಳಿಸಿದರು.
ತಿಪಟೂರು ಬೆಸ್ಕಾಂನ SO ಉಮೇಶ್ ನಾಯಕ್ ಮಾತನಾಡಿ ಎಸ್‌ವಿಬಿ ಅಕಾಡೆಮಿಯಲ್ಲಿ ಅಬಕಸ್ ತರಬೇತಿ ಹೊಂದಿದ ಮಕ್ಕಳಿಗೆ ರಾಜ್ಯ ರಾಷ್ಟ್ರಮಟ್ಟದಲ್ಲಿ ಹೆಚ್ಚು ಪ್ರಶಸ್ತಿಗಳು ಸಿಗಲಿ ಎಂದು ಶುಭ ಹಾರೈಸಿದರು.ನಿವೃತ್ತಿ ಮುಖ್ಯ ಶಿಕ್ಷಕಿಯಾದ ಪ್ರೇಮಲೀಲಾ ಮಾತನಾಡಿ SVB ಅಕಾಡೆಮಿಯು ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.
ಅಬಾಕಸ್ನಲ್ಲಿ ಲೆವೆಲ್ ಕಂಪ್ಲೀಟ್ ಆಗಿರುವ ಮಕ್ಕಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.SVB ಅಕಾಡೆಮಿಯ ಮಾರ್ಗದರ್ಶಕಿಯಾದ ಶೃತಿ ಕಾರ್ಯಕ್ರಮ ನಿರೂಪಿಸಿ SVB ಅಕಾಡೆಮಿಯಲ್ಲಿ ದಿನಾಂಕ 10- 4 -2025 ರಿಂದ ಉಚಿತವಾಗಿ ಬೇಸಿಗೆ ಶಿಬಿರ ನಡೆಸಲಾಗುತ್ತಿದ್ದು ಆಸಕ್ತ ಮಕ್ಕಳು ಭಾಗವಹಿಸಬಹುದೆಂದು ತಿಳಿಸಿದರು.
--------------------------------------------
ಹುಳಿಯಾರು ಪಟ್ಟಣದ ಎಸ್‌ವಿಬಿ ಅಕಾಡೆಮಿಯಲ್ಲಿ ಅಬಕಸ್ ಮತ್ತು ವೇದಿಕ್ ಮ್ಯಾಥ್ಸ್ ತರಗತಿ ಪ್ರಾರಂಭವಾಗಿದ್ದು ಆಸಕ್ತಿಯುಳ್ಳವರು SVB ಅಕಾಡೆಮಿ, 99643912529 ಸಂಪರ್ಕಿಸಬಹುದಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ