ಪಟ್ಟಣದ ಕ್ರಿಯಾಶೀಲ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಪತ್ರಕರ್ತ ದಿವಂಗತ ಡಿ.ಎಸ್.ರಾಜಪ್ಪನವರ ಸ್ಮರಣಾರ್ಥ ರಾಜ್ಯ ಮಟ್ಟದ ಆಹ್ವಾನಿತ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಇಂದಿನಿಂದ( ಜೂ.10) ರಿಂದ 12ರ ವರೆಗೆ ಒಟ್ಟು ಮೂರು ದಿನಗಳ ಕಾಲ ಹುಳಿಯಾರಿನ ಎಂ.ಪಿ.ಎಸ್. ಆವರಣದಲ್ಲಿ ನಡೆಯಲಿದೆ.
ಸಂಘ ಸ್ಥಾಪನೆಯ ಉದ್ದೇಶ ಹಾಗೂ ಅದರ ಕಾರ್ಯಚಟುವಟಿಕೆಗಳ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ಪುಟ್ಟಸ್ವಾಮಿ ಗೌಡ ಗ್ರಾಮಾಂತರ ಪ್ರದೇಶಗಳಲ್ಲಿನ ಕ್ರೀಡಾ ಮತ್ತು ಸಾಂಸ್ಕೃತಿಕ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಜೊತೆಗೆ ಸಮಾಜಮುಖಿ ಕಾರ್ಯಗಳನ್ನು ಏರ್ಪಡಿಸುವ ನಿಟ್ಟಿನಲ್ಲಿ ಸಂಸ್ಥೆಯನ್ನು ಅಸ್ತಿತ್ವಕ್ಕೆ ತರಲಾಗಿದ್ದು ಮುಂದಿನ ದಿನಗಳಲ್ಲಿ ಇದೇ ರೀತಿಯ ಹಲವಾರು ಕಾರ್ಯಚಟುವಟಿಕೆಗಳನ್ನು ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಜೂ.10 ರ ಬೆಳಿಗ್ಗೆ 10 ಗಂಟೆಗೆ ತುಮಕೂರು ಜಿಲ್ಲಾಧಿಕಾರಿ ಡಾಸಿ.ಸೋಮಶೇಖರ್ ಪಂದ್ಯಾವಳಿಗೆ ಚಾಲನೆ ನೀಡಲಿದ್ದಾರೆ.ಶಾಸಕ ಸಿ.ಬಿ.ಸುರೇಶ್ ಬಾಬು ಪತ್ರಕರ್ತ ದಿವಂಗತ ಡಿ.ಎಸ್.ರಾಜಪ್ಪನವರ ಕುರಿತ ಸ್ಮರಣಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ರಾಷ್ತ್ರೀಯ ಬ್ಯಾಡ್ಮಿಂಟನ್ ಕ್ರೀಡಾಪಟು ಹೆಚ್.ಎಲ್.ಸತೀಶ್ ಪ್ರಾಸ್ತಾವಿಕ ನುಡಿ ಆಡಲಿದ್ದಾರೆ.ಕ್ರಿಯಾಶೀಲ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಸ್ಥೆಯ ಮಹಾಪೋಷಕರಾದ ಸುಶೀಲಮ್ಮ,ತಹಸಿಲ್ದಾರ್ ಟಿ.ಸಿ.ಕಾಂತರಾಜು,ಆರಕ್ಷಕ ವೃತ್ತನಿರೀಕ್ಷಕ ಪಿ.ರವಿಪ್ರಸಾದ್,ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಿ.ಸಿ.ನಾಗೇಶ್ ಅತಿಥಿಗಳಾಗಿ ಆಗಮಿಸಲಿದ್ದು ಕ್ರಿಯಾಶೀಲ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ಪುಟ್ಟಸ್ವಾಮಿಗೌಡ ಅಧ್ಯಕ್ಷತೆ ವಹಿಸಲಿದ್ದಾರೆ.
ಜೂನ್ 12 ರ ಭಾನುವಾರದಂದು ಶಿವಮೊಗ್ಗ ನಂದನ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಕೆ.ಈ.ಕಾಂತೇಶ್ ಅವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು ರಂಗಕಲಾವಿದ ನಟರತ್ನಾಕರ ಮಾಸ್ಟರ್ ಹಿರಣ್ಣಯ್ಯ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಿದ್ದಾರೆ.ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ,ವಿ.ಸುಶೀಲಮ್ಮ ,ಪ್ರಕಾಶ್ ಸ್ಪಾಂಜ್ ಐರನ್ ಲಿಮಿಟೆಡ್ ಛೇರ್ಮನ್ ಶ್ರೀನಿವಾಸುಲು,ಪುಟ್ಟಸ್ವಾಮಿಗೌಡ ,ರಾಜ್ ಮಿನರಲ್ಸ್ ಗಣಿಮಾಲಿಕ ಅಶ್ಪಕ್ ಅಹ್ಮದ್ ಖಾನ್ ಭಾಗವಹಿಸಲಿದ್ದಾರೆ.
ಪಂದ್ಯಾವಳಿಯಲ್ಲಿ ಬೆಂಗಳೂರಿನ ಕೆನರಾ ಬ್ಯಾಂಕ್, ಮೈಕೊ ತಂಡ,ಭದ್ರಾವತಿಯ ಸ್ಪುಟ್ನಿಕ್ , ತುಮಕೂರಿನ ಎಸ್.ಬಿ.ಬಿ.ಸಿ, ಮೂಡಬಿದರೆಯ ಆಳ್ವಾಸ್ ತಂಡಗಳ ಜೊತೆ ವಿವಿಧ ಹೆಸರಾಂತ ಕ್ರೀಡಾ ತಂಡಗಳು ಭಾಗವಹಿಸಲಿವೆ.
ಕ್ರೀಡಾ ಕೂಟಕ್ಕೆ ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಮೂಲಕ ಕ್ರೀಡಾ ಪಟುಗಳಿಗೆ ಪ್ರೋತ್ಸಾಹಿಸಬೇಕಾಗಿ ಸಂಸ್ಥೆಯ ಕಾರ್ಯದರ್ಶಿ ಹೆಚ್.ಎಲ್. ಸತೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ