ಹುಳಿಯಾರಿನ ಅಂಬೇಡ್ಕರ್ ಭವನದಲ್ಲಿ ಜಿ.ಪಂ,ಜಿಲ್ಲಾ ಕೈಗಾರಿಕ ಕೇಂದ್ರ ಹಾಗೂ ಬಾಷ್ ಕಂಪನಿಯ ಸಂಯುಕ್ತಾಶ್ರಯದಲ್ಲಿ ಕುಶಲಕರ್ಮಿಗಳು ಮತ್ತು ಐಟಿಐ ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಉದ್ಯಮಶೀಲತ ಜಾಗೃತಿ ಶಿಬಿರದಲ್ಲಿ ಅವರು ಮಾತನಾಡಿ ಭಾರತವು ಕೃಷಿ ಆಧಾರಿತ ದೇಶವಾಗಿದ್ದರೂ ಸಹ ಸಾಕಷ್ಟು ಮಂದಿ ಗುಡಿ ಕೈಗಾರಿಕೆಯನ್ನು ಅವಲಂಬಿಸಿದ್ದಾರೆ. ಗುಡಿ ಕೈಗಾರಿಕೆಗೆಗಳನ್ನು ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಸರ್ಕಾರ ಗುಡಿಕೈಗಾರಿಕಾ ಉಪಕರಣಗಳ ಖರೀದಿಗೆ ರಿಯಾಯಿತಿ ದರದಲ್ಲಿ ಸಾಲ ಸೌಲಭ್ಯ ನೀಡುತ್ತಿದೆ. ಇದನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡು ಹೆಚ್ಚಿನ ಉತ್ಪಾದನೆಯಲ್ಲಿ ತೊಡಗಬೇಕು ಎಂದರು.
ಶಿಬಿರ ಉದ್ಘಾಟಿಸಿದ ಜಿ.ಪಂ.ಸದಸ್ಯೆ ಮಂಜುಳಾ ಮಾತನಾಡುತ್ತಾ ಇಂದಿನ ದಿನಗಳಲ್ಲಿ ಅನೇಕ ಗ್ರಾಮೀಣ ಭಾಗದ ಜನರು ಕೆಲಸಕ್ಕಾಗಿ ಪಟ್ಟಣಗಳತ್ತ ವಲಸೆ ಹೋಗಿತ್ತಿದ್ದು ,ಇದನ್ನು ತಡೆಯುವ ನಿಟ್ಟಿನಲ್ಲಿ ಪಿ.ಎಂ.ಆರ್.ವೈ, ಮತ್ತು ಆರ್.ಇ.ಜಿ.ಪಿ. ಯೋಜನೆಗಳನ್ನು ಒಗ್ಗೂಡಿಸಿ ಜಾರಿಗೆ ತಂದಿರುವ ಪಿ.ಎಂ.ಇ.ಜಿ.ಪಿ ಎಂಬ ಹೊಸ ಯೋಜನೆ ಗ್ರಾಮೀಣ ಜನತೆಗೆ ತುಂಬಾ ಸಹಕಾರಿಯಾಗಿದೆ ಎಂದರು.
ಶಿಬಿರದಲ್ಲಿ ಗ್ರಾ,ಪಂ,ಅಧ್ಯಕ್ಷ ಸಯ್ಯದ್ ಅನ್ಸರ್ ಆಲಿ,ತಾ.ಪಂ.ಸದಸ್ಯ ನವೀನ್,ಗ್ರಾ.ಪಂ.ಸದಸ್ಯ ಪುಟ್ಟರಾಜು,ಕಿರಣ್ ಕುಮಾರ್,ಸಿದ್ದಗಂಗಮ್ಮ,ಮಹೇಶ್ ಮತ್ತಿತರರು ಹಾಜರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ