ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜನವರಿ, 2013 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಪೋಟೊ ಕ್ಯಾಪ್ಷನ್

ಸ್ವಾಮಿ ವಿವೇಕಾನಂದ ಜನ್ಮದಿನಾಚರಣೆ ಅಂಗವಾಗಿ ಹುಳಿಯಾರಿನ ಕೇಶವ ವಿದ್ಯಾಮಂದಿರದ ಮಕ್ಕಳಿಗೆ ವಿವೇಕಾನಂದರ ದಿವ್ಯ ಸಂದೇಶಗಳನ್ನು ತಿಳಿಸಲಾಯಿತು ಹುಳಿಯಾರು-ಕೆಂಕೆರೆ ಸರ್ಕಾರಿ ಪ್ರೌಢಶಾಲೆಯ ವಾರ್ಷಿಕೋತ್ಸವದ ಉದ್ಘಾಟನೆಯನ್ನುಗ್ರಾ.ಪಂ.ಅಧ್ಯಕ್ಷೆ ಪುಟ್ಟಿಭಾಯಿ ನೆರವೇರಿಸಿದರು.ಉಪಪ್ರಾಂಶುಪಾಲೆ ಇಂದಿರ,ಉಪನ್ಯಾಸಕರಾದ ಶಶಿಭೂಷಣ್,ಶಿವರುದ್ರಯ್ಯ,ಶಿಕ್ಷಕರಾಜಣ್ಣ ಇದ್ದಾರೆ.

ತ್ಯಾಗದಿಂದ ಸಾಧನೆಯ ಮೆಟ್ಟಿಲನ್ನೇರಿ : ಸತ್ಯಮೇದಾವಿ

ಹುಳಿಯಾರಿನ ಸನ್ಮಾರ್ಗ ಥಿಯಸಾಫಿಕಲ್ ಸೊಸೈಟಿಯಲ್ಲಿ ವಿವೇಕಾನಂದರ ದಿವ್ಯ ಸಂದೇಶ ಕುರಿತಂತೆ ಗೋಕಾಕ್ ನ ಸತ್ಯಮೇದಾವಿ ಉಪನ್ಯಾಸ ನೀಡಿದರು.              ಮಾನವ ಜೀವನವೆಂಬುದು ಜಗತ್ತಿನಲ್ಲಿನ ಇತರೇ ಜೀವರಾಶಿಗಳಿಗಿಂತ ಭಿನ್ನ ಹಾಗೂ ಶ್ರೇಷ್ಠವಾದದ್ದು,ಮಾನವರಾಗಿ ಹುಟ್ಟಿದ ಮೇಲೆ ಏನನ್ನಾದರೂ ಸಾಧಿಸಿರೆ ಮಾನವ ಜನ್ಮಕ್ಕೆ ಶ್ರೇಷ್ಠತೆ ಬರುತ್ತದೆ,ಜೀವನದಲ್ಲಿ ಯಾರು ತ್ಯಾಗಿಗಳಾಗಿ ಇತರರಿಗೆ ಒಳ್ಳೆಯದನ್ನು ಬಯಸುತ್ತಾರೆ ಅವರು ಸಾಧನೆಯ ಶಿಖರವನ್ನೇರುತ್ತಾರೆಂದು ಗೋಕಾಕ್ ನ ಯೋಗಮಯ ಜೀವನ ಮಂದಿರದ ಸತ್ಯಮೇದಾವಿ ಅವರು ತಿಳಿಸಿದರು. ಹುಳಿಯಾರಿನ ಸನ್ಮಾರ್ಗ ಥಿಯಸಾಫಿಕಲ್ ಸೊಸೈಟಿ ಅವರು ಸ್ವಾಮಿ ವಿವೇಕಾನಂದ ಜನ್ಮದಿನಾಚರಣೆ ಅಂಗವಾಗಿ ಎರಡು ದಿನಗಳ ಕಾಲ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ವಿವೇಕಾನಂದರ ದಿವ್ಯ ಸಂದೇಶಗಳನ್ನು ಒಳಗೊಂಡಂತೆ ಉಪನ್ಯಾಸ ನೀಡಿದರು.            ಸ್ವಾಮಿ ವಿವೇಕಾನಂದರ ಯೋಗಮಯ ಜೀವನವನ್ನು ಕುರಿತಂತೆ ಉಪನ್ಯಾಸವನ್ನು ನೀಡಿ ಮಾತನಾಡಿದ ಅವರು ತತ್ವ ತ್ಯಾಗದ ಬಗ್ಗೆ ಬೋಧಿಸಿ, ಭಾವನೆಗಳಲ್ಲಿ ಮನುಷ್ಯನನ್ನು ಬದುಕಿಸುವ ಗುಣವಿದ್ದು,ಮಾನವರು ಭಾವನಾತ್ಮಕತೆಯನ್ನು ಹೊಂದಬೇಕು ಎಂದರು.ನಾವು ಮಾಡುವ ಕಾರ್ಯವನ್ನು ಮನಸಂತೃಪ್ತಿಯಿಂದ ಮಾಡಬೇಕು,ನಮ್ಮ ಕರ್ಮಗಳಿಗೆ ನಾವೇ ಜವಾಬ್ದಾರರು,ಪ್ರತಿಯೊಂದು ಕಾರ್ಯ ಮಾಡುವಾಗ ಉತ್ತಮ ಪ್ರಜ್ಞೆಯಿಂದ ಮಾಡಿದಾಗ ಆ ಕಾರ್ಯದಲ್ಲಿ ಸಫಲರಾಗುತ

ನೇತ್ರ ತಪಾಸಣಾ ಶಿಬಿರ:192 ಜನರ ತಪಾಸಣೆ

ಹುಳಿಯಾರಿನ ಸನ್ಮಾರ್ಗ ಥಿಯಸಾಫಿಕಲ್ ಸೊಸೈಟಿಯವರು ಆಯೋಜಿಸಿದ್ದ ಉಚಿತ ನೇತ್ರ ತಪಾಸಣಾ ಶಿಬಿರಕ್ಕೆ ಆಗಮಿಸಿದ್ದ ಜನರನ್ನು ಪರೀಕ್ಷಿಸುತ್ತಿರುವ ವೈದ್ಯರು.                ಪಟ್ಟಣದ ಸನ್ಮಾರ್ಗ ಥಿಯಸಾಫಿಕಲ್ ಸೊಸೈಟಿ ಹಾಗೂ ಬೆಂಗಳೂರಿನ ಕಾರ್ತೀಕ್ ನೇತ್ರಾಲಯ ಅವರ ಸಹಯೋಗದಲ್ಲಿ ಶನಿವಾರದಂದು ನಡೆದ ಉಚಿತ ನೇತ್ರ ತಪಾಸಣೆ ಮತ್ತು ಮಧುಮೇಹ ತಪಾಸಣಾ ಶಿಬಿರದಲ್ಲಿ ಹೋಬಳಿಯ ಸುತ್ತಮುತ್ತಲಿನ ಹಲವಾರು ಜನ ಪಾಲ್ಗೊಂಡಿದ್ದು ಶಿಬಿರ ಯಶಸ್ವಿಗಾಗಿ ಜರುಗಿತು.                ಶಿಬಿರದಲ್ಲಿ 192 ಮಂದಿಯ ಕಣ್ಣಿನ ಪರೀಕ್ಷೆ ಹಾಗೂ ಮಧುಮೇಹದ ತಪಾಸಣೆ ಮಾಡಿಲಾಗಿದ್ದು,ಕನ್ನಡಕದ ಬಳಕೆಯ ಬಗ್ಗೆ,ಡಯಾಬಿಟಿಸ್ ಖಾಯಿಲೆ ಯಾವರೀತಿ ಪ್ರಾರಂಭವಾಗುತ್ತದೆ,ಅದರಿಂದ ದೂರವಿರುವ ಬಗೆ,ಡಯಾಬಿಟಿಸ್ ಇರುವವರು ಯಾವ ರೀತಿ ಔಷಧ ಕ್ರಮಗಳನ್ನು ಬಳಸಬೇಕೆಂಬುದನ್ನು ಕಾರ್ತೀಕ್ ನೇತ್ರಾಲಯದ ವೈದ್ಯ ವೃಂದದವರು ತಿಳಿಸಿದರು.ಶಿಬಿರದಲ್ಲಿ ಡಾ|| ಕಾರ್ತಿಕ್,ಚಂದನ, ಥಿಯಸಾಫಿಕಲ್ ಸೊಸೈಟಿಯ ಅಧ್ಯಕ್ಷ ಹೆಚ್.ಬಿ.ಗೋಪಾಲ್ ರಾವ್,ಎಂ.ಆರ್.ಗೋಪಾಲ್,ಸತೀಶ್ ಉಪಸ್ಥಿತರಿದ್ದು,ಶಿಕ್ಷಕ ಜಗದೀಶ್ ಸ್ವಾಗತಿಸಿ ವಂದಿಸಿದರು.

ಕರವೇಯಿಂದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ

ಹುಳಿಯಾರು ಹೋಬಳಿ ಕರವೇಯ 2013ನೇ ನೂತನ ವರ್ಷದ ಕ್ಯಾಲೆಂಡರನ್ನು ಮಂಗಳವಾರ ಪಟ್ಟಣದ ಕರವೇ ವೃತ್ತದಲ್ಲಿ ಕೆ.ಸಿ.ಈಶ್ವರಯ್ಯ ಬಿಡುಗಡೆ ಮಾಡಿದರು,ಪದಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು. ಹೋಬಳಿ ಕರ್ನಾಟಕ ರಕ್ಷಣಾ ವೇದಿಕೆಯವರು ಹೊಸವರ್ಷ ಆಚರಣೆ ಅಂಗವಾಗಿ 2013 ನೇ ಸಾಲಿನ ನೂತನ ದಿನದರ್ಶಿಕೆಯನ್ನು ಪಟ್ಟಣದ ಕರವೇ ವೃತ್ತದಲ್ಲಿ ಭುವನೇಶ್ವರಿಗೆ ಪೂಜೆ ಸಲ್ಲಿಸಿ ಪಟಾಕಿ ಸಿಡಿಸಿ ಬಿಡುಗಡೆ ಮಾಡಿದರಲ್ಲದೆ ಸಿಹಿ ವಿತರಿಸುವ ಮೂಲಕ ಸಂಭ್ರಮಿಸಿದರು. 2013 ನೇ ನೂತನ ವರ್ಷದ ಕರವೇ ಕ್ಯಾಲೆಂಡರನ್ನು ಮಲ್ಲಿಕಾರ್ಜುನ ಮೆಡಿಕಲ್ಸ್ ನ ಮಾಲೀಕರಾದ ಕೆ.ಸಿ.ಈಶ್ವರಯ್ಯ ಬಿಡುಗಡೆ ಮಾಡಿದರು.ಈ ಸಂಧರ್ಭದಲ್ಲಿ ಹುಳಿಯಾರು ಕರವೇ ಅಧ್ಯಕ್ಷ ಕೋಳಿ ಶ್ರೀನಿವಾಸ್,ಗೌರವಾಧ್ಯಕ್ಷ ಬೀರಪ್ಪ, ಉಪಾಧ್ಯಕ್ಷ ಅಂಜನಮೂರ್ತಿ,ಎಚ್,ಎನ್,ಮಂಜುನಾಥ್ ,ಎಚ್.ಡಿ.ಲಕ್ಷ್ಮಿಕಾಂತ್ ,ಖಜಾಂಚಿ ಮೆಡಿಕಲ್ ಚನ್ನಬಸವಯ್ಯ, ಸಹ ಕಾರ್ಯದರ್ಶಿ ಜಿ.ಮುರುಳಿ, ಕೆ.ಕುಮಾರ್,ಸಂಘಟನಾ ಕಾರ್ಯದರ್ಶಿ ದಿವಾಕರ್,ಬಸವರಾಜು ನಾಯ್ಕ, ನಾಗರಾಜು,ಪದಾಧಿಕಾರಿಗಳಾದ ರಘು,ಗಣೇಶ್,ಲಕ್ಷ್ಮಿಕಾಂತ,ಅಂಜನಮೂರ್ತಿ ಇತರರು ಪಾಲ್ಗೊಂಡು ಸಂಭ್ರಮದಿಂದ ಹೊಸ ವರ್ಷಾಚರಣೆ ಮಾಡಿದರು.

ರೈತ ಸಂಘ ಅಧಿಕಾರಕ್ಕೆ ಬಂದರೆ ರೈತರ ಕೃಷಿ ಸಾಲ ಮನ್ನಾ: ಕೋಡಿಹಳ್ಳಿ ಚಂದ್ರಶೇಖರ್

ಹುಳಿಯಾರು ಸಮೀಪದ ಬರಗೂರಿನಲ್ಲಿ ನಡೆದ ರೈತರ ಸಮಾವೇಶದಲ್ಲಿ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿದರು. ಮುಂಬರುವ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಈ ಬಾರಿ ರೈತ ಸಂಘ ತನ್ನ ಅಭ್ಯರ್ಥಿಗಳನ್ನು ಚುನಾವಣಾ ಕಣಕ್ಕಿಳಿಸಲಿದ್ದು ಮತದಾರರು ರೈತಸಂಘದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೂಲಕ ಅಧಿಕಾರದ ಗದ್ದುಗೆ ಏರಿಸಿದರೆ ರಾಜ್ಯದ ಎಲ್ಲಾ ರೈತರ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡುವುದಾಗಿ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಭರವಸೆ ನೀಡಿದರು. ಹುಳಿಯಾರು ಸಮೀಪದ ಬರಗೂರಿನಲ್ಲಿ ರಾಜ್ಯ ರೈತಸಂಘ ಮತ್ತು ಹಸಿರು ಸೇನೆ ವತಿಯಿಂದ ಹಮ್ಮಿಕೊಂಡಿದ್ದ ರೈತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ರೈತರ 25 ಸಾವಿರ ರೂ. ಕೃಷಿ ಸಾಲ ಮನ್ನಾ ಮಾಡುವುದಾಗಿ ಹೇಳಿರುವುದು ಇನ್ನೂ ಘೋಷಣೆಯಾಗಿಯೇ ಉಳಿದಿದೆಯೇ ಹೊರತು ಕಾರ್ಯರೂಪಕ್ಕೆ ಬಂದಿಲ್ಲ. ಈ ಘೋಷಣೆ ಕಾರ್ಯರೂಪಕ್ಕೆ ಬರಬೇಕೆಂದರೆ ರಾಜ್ಯದ ಬಜೆಟ್ ಮಂಡನೆ ಯಾಗಬೇಕು. ಅಷ್ಟರಲ್ಲಿ ಜಗದೀಶ್ ಶೆಟ್ಟರ್ ಸರ್ಕಾರ ಪತನವಾದರೆ ಸಾಲ ಮನ್ನವಾಗುವುದು ಅನುಮಾನದ ಮಾತು ಎಂದರು. ಚುನಾವಣೆಯಲ್ಲಿ ರೈತ ಸಂಘ ಅಧಿಕಾರಕ್ಕೆ ಬಂದರೆ ಮೊಟ್ಟ ಮೊದಲನೆಯದಾಗಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡಿ ನಂತರ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ನೀರಾವರಿ ಯೋಜನೆ ಜಾರಿಗೆ ತರುವ ಉದ್ದೇಶಗಳನ್ನು ಹೊಂದಿದ್ದು ಅವುಗಳನ್ನು ಜಾರಿಗೊಳ