ಹುಳಿಯಾರಿನ ಸನ್ಮಾರ್ಗ ಥಿಯಸಾಫಿಕಲ್ ಸೊಸೈಟಿಯಲ್ಲಿ ವಿವೇಕಾನಂದರ ದಿವ್ಯ ಸಂದೇಶ ಕುರಿತಂತೆ ಗೋಕಾಕ್ ನ ಸತ್ಯಮೇದಾವಿ ಉಪನ್ಯಾಸ ನೀಡಿದರು. |
ಮಾನವ ಜೀವನವೆಂಬುದು ಜಗತ್ತಿನಲ್ಲಿನ ಇತರೇ ಜೀವರಾಶಿಗಳಿಗಿಂತ ಭಿನ್ನ ಹಾಗೂ ಶ್ರೇಷ್ಠವಾದದ್ದು,ಮಾನವರಾಗಿ ಹುಟ್ಟಿದ ಮೇಲೆ ಏನನ್ನಾದರೂ ಸಾಧಿಸಿರೆ ಮಾನವ ಜನ್ಮಕ್ಕೆ ಶ್ರೇಷ್ಠತೆ ಬರುತ್ತದೆ,ಜೀವನದಲ್ಲಿ ಯಾರು ತ್ಯಾಗಿಗಳಾಗಿ ಇತರರಿಗೆ ಒಳ್ಳೆಯದನ್ನು ಬಯಸುತ್ತಾರೆ ಅವರು ಸಾಧನೆಯ ಶಿಖರವನ್ನೇರುತ್ತಾರೆಂದು ಗೋಕಾಕ್ ನ ಯೋಗಮಯ ಜೀವನ ಮಂದಿರದ ಸತ್ಯಮೇದಾವಿ ಅವರು ತಿಳಿಸಿದರು.
ಹುಳಿಯಾರಿನ ಸನ್ಮಾರ್ಗ ಥಿಯಸಾಫಿಕಲ್ ಸೊಸೈಟಿ ಅವರು ಸ್ವಾಮಿ ವಿವೇಕಾನಂದ ಜನ್ಮದಿನಾಚರಣೆ ಅಂಗವಾಗಿ ಎರಡು ದಿನಗಳ ಕಾಲ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ವಿವೇಕಾನಂದರ ದಿವ್ಯ ಸಂದೇಶಗಳನ್ನು ಒಳಗೊಂಡಂತೆ ಉಪನ್ಯಾಸ ನೀಡಿದರು.
ಸ್ವಾಮಿ ವಿವೇಕಾನಂದರ ಯೋಗಮಯ ಜೀವನವನ್ನು ಕುರಿತಂತೆ ಉಪನ್ಯಾಸವನ್ನು ನೀಡಿ ಮಾತನಾಡಿದ ಅವರು ತತ್ವ ತ್ಯಾಗದ ಬಗ್ಗೆ ಬೋಧಿಸಿ, ಭಾವನೆಗಳಲ್ಲಿ ಮನುಷ್ಯನನ್ನು ಬದುಕಿಸುವ ಗುಣವಿದ್ದು,ಮಾನವರು ಭಾವನಾತ್ಮಕತೆಯನ್ನು ಹೊಂದಬೇಕು ಎಂದರು.ನಾವು ಮಾಡುವ ಕಾರ್ಯವನ್ನು ಮನಸಂತೃಪ್ತಿಯಿಂದ ಮಾಡಬೇಕು,ನಮ್ಮ ಕರ್ಮಗಳಿಗೆ ನಾವೇ ಜವಾಬ್ದಾರರು,ಪ್ರತಿಯೊಂದು ಕಾರ್ಯ ಮಾಡುವಾಗ ಉತ್ತಮ ಪ್ರಜ್ಞೆಯಿಂದ ಮಾಡಿದಾಗ ಆ ಕಾರ್ಯದಲ್ಲಿ ಸಫಲರಾಗುತ್ತೀರ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಸೊಸೈಟಿಯ ಅಧ್ಯಕ್ಷ ಹೆಚ್.ಬಿ.ಗೋಪಾಲ್ ರಾವ್ ವಹಿಸಿದ್ದು,ಶಿಕ್ಷಕ ಜಗದೀಶ್ ನಿರೂಪಿಸಿ ವಂದಿಸಿದರು.ಥಿಯಸಾಫಿಕಲ್ ಸೊಸೈಟಿಯ ಎಂ.ಆರ್.ಗೋಪಾಲ್,ಸತೀಶ್,ಭುವನೇಶ್ವರಿ ಹಾಗೂ ಬಳಗದವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ