ಹುಳಿಯಾರಿನ ಸನ್ಮಾರ್ಗ ಥಿಯಸಾಫಿಕಲ್ ಸೊಸೈಟಿಯವರು ಆಯೋಜಿಸಿದ್ದ ಉಚಿತ ನೇತ್ರ ತಪಾಸಣಾ ಶಿಬಿರಕ್ಕೆ ಆಗಮಿಸಿದ್ದ ಜನರನ್ನು ಪರೀಕ್ಷಿಸುತ್ತಿರುವ ವೈದ್ಯರು. |
ಪಟ್ಟಣದ ಸನ್ಮಾರ್ಗ ಥಿಯಸಾಫಿಕಲ್ ಸೊಸೈಟಿ ಹಾಗೂ ಬೆಂಗಳೂರಿನ ಕಾರ್ತೀಕ್ ನೇತ್ರಾಲಯ ಅವರ ಸಹಯೋಗದಲ್ಲಿ ಶನಿವಾರದಂದು ನಡೆದ ಉಚಿತ ನೇತ್ರ ತಪಾಸಣೆ ಮತ್ತು ಮಧುಮೇಹ ತಪಾಸಣಾ ಶಿಬಿರದಲ್ಲಿ ಹೋಬಳಿಯ ಸುತ್ತಮುತ್ತಲಿನ ಹಲವಾರು ಜನ ಪಾಲ್ಗೊಂಡಿದ್ದು ಶಿಬಿರ ಯಶಸ್ವಿಗಾಗಿ ಜರುಗಿತು.
ಶಿಬಿರದಲ್ಲಿ 192 ಮಂದಿಯ ಕಣ್ಣಿನ ಪರೀಕ್ಷೆ ಹಾಗೂ ಮಧುಮೇಹದ ತಪಾಸಣೆ ಮಾಡಿಲಾಗಿದ್ದು,ಕನ್ನಡಕದ ಬಳಕೆಯ ಬಗ್ಗೆ,ಡಯಾಬಿಟಿಸ್ ಖಾಯಿಲೆ ಯಾವರೀತಿ ಪ್ರಾರಂಭವಾಗುತ್ತದೆ,ಅದರಿಂದ ದೂರವಿರುವ ಬಗೆ,ಡಯಾಬಿಟಿಸ್ ಇರುವವರು ಯಾವ ರೀತಿ ಔಷಧ ಕ್ರಮಗಳನ್ನು ಬಳಸಬೇಕೆಂಬುದನ್ನು ಕಾರ್ತೀಕ್ ನೇತ್ರಾಲಯದ ವೈದ್ಯ ವೃಂದದವರು ತಿಳಿಸಿದರು.ಶಿಬಿರದಲ್ಲಿ ಡಾ|| ಕಾರ್ತಿಕ್,ಚಂದನ, ಥಿಯಸಾಫಿಕಲ್ ಸೊಸೈಟಿಯ ಅಧ್ಯಕ್ಷ ಹೆಚ್.ಬಿ.ಗೋಪಾಲ್ ರಾವ್,ಎಂ.ಆರ್.ಗೋಪಾಲ್,ಸತೀಶ್ ಉಪಸ್ಥಿತರಿದ್ದು,ಶಿಕ್ಷಕ ಜಗದೀಶ್ ಸ್ವಾಗತಿಸಿ ವಂದಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ