ಹುಳಿಯಾರು ಹೋಬಳಿ ಕರವೇಯ 2013ನೇ ನೂತನ ವರ್ಷದ ಕ್ಯಾಲೆಂಡರನ್ನು ಮಂಗಳವಾರ ಪಟ್ಟಣದ ಕರವೇ ವೃತ್ತದಲ್ಲಿ ಕೆ.ಸಿ.ಈಶ್ವರಯ್ಯ ಬಿಡುಗಡೆ ಮಾಡಿದರು,ಪದಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು. |
ಹೋಬಳಿ ಕರ್ನಾಟಕ ರಕ್ಷಣಾ ವೇದಿಕೆಯವರು ಹೊಸವರ್ಷ ಆಚರಣೆ ಅಂಗವಾಗಿ 2013 ನೇ ಸಾಲಿನ ನೂತನ ದಿನದರ್ಶಿಕೆಯನ್ನು ಪಟ್ಟಣದ ಕರವೇ ವೃತ್ತದಲ್ಲಿ ಭುವನೇಶ್ವರಿಗೆ ಪೂಜೆ ಸಲ್ಲಿಸಿ ಪಟಾಕಿ ಸಿಡಿಸಿ ಬಿಡುಗಡೆ ಮಾಡಿದರಲ್ಲದೆ ಸಿಹಿ ವಿತರಿಸುವ ಮೂಲಕ ಸಂಭ್ರಮಿಸಿದರು.
2013 ನೇ ನೂತನ ವರ್ಷದ ಕರವೇ ಕ್ಯಾಲೆಂಡರನ್ನು ಮಲ್ಲಿಕಾರ್ಜುನ ಮೆಡಿಕಲ್ಸ್ ನ ಮಾಲೀಕರಾದ ಕೆ.ಸಿ.ಈಶ್ವರಯ್ಯ ಬಿಡುಗಡೆ ಮಾಡಿದರು.ಈ ಸಂಧರ್ಭದಲ್ಲಿ ಹುಳಿಯಾರು ಕರವೇ ಅಧ್ಯಕ್ಷ ಕೋಳಿ ಶ್ರೀನಿವಾಸ್,ಗೌರವಾಧ್ಯಕ್ಷ ಬೀರಪ್ಪ, ಉಪಾಧ್ಯಕ್ಷ ಅಂಜನಮೂರ್ತಿ,ಎಚ್,ಎನ್,ಮಂಜುನಾಥ್ ,ಎಚ್.ಡಿ.ಲಕ್ಷ್ಮಿಕಾಂತ್ ,ಖಜಾಂಚಿ ಮೆಡಿಕಲ್ ಚನ್ನಬಸವಯ್ಯ, ಸಹ ಕಾರ್ಯದರ್ಶಿ ಜಿ.ಮುರುಳಿ, ಕೆ.ಕುಮಾರ್,ಸಂಘಟನಾ ಕಾರ್ಯದರ್ಶಿ ದಿವಾಕರ್,ಬಸವರಾಜು ನಾಯ್ಕ, ನಾಗರಾಜು,ಪದಾಧಿಕಾರಿಗಳಾದ ರಘು,ಗಣೇಶ್,ಲಕ್ಷ್ಮಿಕಾಂತ,ಅಂಜನಮೂರ್ತಿ ಇತರರು ಪಾಲ್ಗೊಂಡು ಸಂಭ್ರಮದಿಂದ ಹೊಸ ವರ್ಷಾಚರಣೆ ಮಾಡಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ