ಪ್ರಾರಂಭವಾಗುವವರೆಗೂ ಸ್ಥಳ ಬಿಟ್ಟು ಕದಲೆವು;ಹೈಸ್ಕೂಲ್ ವಿದ್ಯಾರ್ಥಿಗಳು ಭಾಗಿ
ಹಾಸ್ಟಲ್ ಸ್ಥಳಾಂತರ ಗ್ರಾಮೀಣ ಪ್ರದೇಶದ ಮಕ್ಕಳ ಶೈಕ್ಷಣಿಕ ಸೌಲಭ್ಯಕ್ಕೆ ಎಸಗುವ ವಂಚನೆ
--------------
ಹುಳಿಯಾರು: ಅಧಿಕಾರಿಗಳು ಕುಂಟುನೆಪ ಒಡ್ಡಿ ಸ್ಥಳಾಂತರ ಮಾಡಲು ಹೊರಟಿರುವ ನಮ್ಮೂರಿನ ಹಾಸ್ಟಲ್ ಸ್ಥಳಾಂತರಗೊಳಿಸಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ.ಅಲ್ಲದೆ ಈಗ ಹಾಸ್ಟಲ್ ಸೇರಲು ಸಿದ್ಧವಾಗಿರುವ ನಮ್ಮೂರ ಸುತ್ತಮುತ್ತಲ ಗ್ರಾಮಗಳ ೪೫ ಮಕ್ಕಳಿಗೆ ಇಲ್ಲಿ ಹಾಸ್ಟಲ್ ತೆರೆಸಿ ಅವಕಾಶ ಕಲ್ಪಿಸಿಯೇ ತೀರುವೆವು.ಅಲ್ಲಿಯವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಸ್ಥಳಿಯ ಪಂಚಾಯ್ತಿ ಪ್ರತಿನಿಧಿಗಳು, ಗ್ರಾಮಸ್ಥರು,ಸಂಘಸಂಸ್ಥೆಗಳ ಪ್ರತಿನಿಧಿಗಳು,ಫೋಷಕರುಗಳು ಆಹೋರಾತ್ರಿ ಧರಣಿ ಪ್ರಾರಂಭಿಸಿರುವ ಘಟನೆ ಹುಳಿಯಾರು ಹೋಬಳಿಯ ಹೊಯ್ಸಳ ಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೋರನಕಣಿವೆಯಲ್ಲಿ ಜರುಗಿದೆ.
ಬೋರನಕಣಿವೆಯಲ್ಲಿನ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯದ ಆರಂಭಕ್ಕೆ ಒತ್ತಾಯಿಸಿ ಸೋಮವಾರದಿಂದ ಅಹೋರಾತ್ರಿ ಧರಣಿ ಪ್ರಾರಂಭವಾಗಿದ್ದು ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು,ಪೋಷಕರುಗಳು ಅವರೊಂದಿಗೆ ಸ್ಥಳಿಯ ಪಂಚಾಯ್ತಿ ಪ್ರತಿನಿಧಿಗಳು ಧರಣಿ ಕೂತಿದ್ದಾರೆ.ಈಗಾಗಲೇ ಇಲ್ಲಿ ನಡೆದಿರುವ ಪ್ರತಿಭಟನೆಯ ಸುದ್ದಿ ತಿಳಿದಿದ್ದರೂ ಕೂಡ ಅಧಿಕಾರಿಗಳು ತಮ್ಮ ಧೋರಣೆಯನ್ನು ಮುಂದುವರಿಸಿದ್ದು ಇದಕ್ಕೂ ತಮಗೂ ಸಂಬಂಧವಿಲ್ಲದಂತೆ ನಿರ್ಲಕ್ಷ್ಯ ಮನೋಭಾವ ಮೆರೆದಿದ್ದಾರೆ.ಹಾಸ್ಟಲ್ ಅಸ್ಥಿತ್ವದ ಅಳಿವು ಉಳಿವು ಪ್ರಶ್ನೆ ಎದುರಾಗಿರುವುದರಿಂದ ಪ್ರತಿಭಟನೆ ಇನ್ನೂ ತೀವ್ರವಾಗುವ ಲಕ್ಷಣಗಳಿದೆ.
ಸಮಸ್ಯೆ ಏನು:ಬೋರನಕಣಿವೆಯ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಬಿಸಿಎಂ ಇಲಾಖೆ ಕಳೆದ 30 ವರ್ಷಗಳ ಹಿಂದೆ ವಿದ್ಯಾರ್ಥಿನಿಲಯ ತೆರೆದಿತ್ತು. ಇದರಿಂದ ಸುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಅನುಕೂಲವಾಗಿತ್ತು. ಆದರೆ ಈ ಶೈಕ್ಷಣಿಕ ವರ್ಷದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ವಿದ್ಯಾರ್ಥಿಗಳು ಕಡಿಮೆ ಇದ್ದಾರೆ ಎಂಬ ನೆಪವೊಡ್ಡಿ ವಿದ್ಯಾರ್ಥಿ ನಿಲಯವನ್ನು ಪ್ರಾರಂಭಿಸದೆ ಬೇರೆಡೆ ಸ್ಥಳಾಂತರಿಸಲು ಮುಂದಾಗಿ ವಿದ್ಯಾರ್ಥಿನಿಲಯ ಮುಚ್ಚಿದ್ದಾರೆ.
ಗ್ರಾಮಸ್ಥರ ಅಹವಾಲು:ಅಧಿಕಾರಿಗಳು ಕೇವಲ ಸಬೂಬು ಹೇಳುತ್ತಿದ್ದಾರೆಯೇ ಹೊರತು ಹಾಸ್ಟಲ್ ಅಭಿವೃದ್ಧಿಗೆ ಮುಂದಾಗುತ್ತಿಲ್ಲ.ಮಕ್ಕಳ ಸಂಖ್ಯೆ ಕಡಿಮೆಯಿದೆ ಎನ್ನುತ್ತಿದ್ದಂತೆ ನಾವು ಈ ಬಗ್ಗೆ ಕೆಲವು ಪೋಷಕರುಗಳ ಮನವೊಲಿಸಿದ್ದು ಮಕ್ಕಳ ಸಂಖ್ಯೆ ೫೦ ತಲುಪಲಿದೆ.ಅಲ್ಲದೆ ಹಾಸ್ಟಲ್ ಶಿಥಿಲವಾಗಿದೆ ಎನ್ನುವ ಸಬೂಬು ಕೂಡ ಇವರು ನೀಡುತ್ತಿದ್ದು ಹಾಸ್ಟಲ್ ನ ತಾರಸಿಯಲ್ಲಿ ಮಳೆನೀರು ಹನುಕಿದೆ.ಆದರೆ ಶಿಥಿಲವಾಗಿಲ್ಲ.ಇದನ್ನು ರಿಪೇರಿ ಮಾಡಬಹುದಾಗಿದ್ದರೂ ಕೂಡ ಆ ಕೆಲಸಕ್ಕೆ ಮುಂದಾಗುತ್ತಿಲ್ಲ.ಇಲ್ಲಸಲ್ಲದ ಕುಂಟುನೆಪ ಹೇಳುವ ಬದಲು ರಿಪೇರಿ ಮಾಡಿಸಿ ಹಾಸ್ಟಲ್ ಶುರುಮಾಡಿಸಿ.ನಮ್ಮೂರಿನ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸಹಕರಿಸಿ ಎನ್ನುವ ಗ್ರಾಮಸ್ಥರು ಯಾವುದೇ ಕಾರಣಕ್ಕೂ ಹಾಸ್ಟಲ್ ಪುನರಾರಂಭಿಸುವವರೆಗೂ ಸ್ಥಳದಿಂದ ಕದಲೆವು ಎಂದು ಬಿಗಿಪಟ್ಟು ಹಿಡಿದ್ದಿದ್ದಾರೆ.
ಈ ಬಗ್ಗೆ ಮಾತನಾಡಿದ ಸುವರ್ಣ ವಿದ್ಯಾ ಚೇತನದ ಅಧ್ಯಕ್ಷ ರಾಮಕೃಷ್ಣಪ್ಪ ಹಾಸ್ಟಲ್ ಸ್ಥಳಾಂತರ ಸರ್ಕಾರಿ ಶಾಲೆಯ ದುರ್ಬಲಿಕರಣ ಮಾಡುವ ಹುನ್ನಾರವಾಗಿದ್ದು ಇದು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಶೈಕ್ಷಣಿಕ ಸೌಲಭ್ಯಕ್ಕೆ ಎಸಗುವ ವಂಚನೆಯಾಗಿದೆ.ಹಾಸ್ಟಲ್ ಇಲ್ಲಿಯೇ ಉಳಿಯಬೇಕು,ನಮ್ಮ ಸುತ್ತಮುತ್ತಲ ಹಳ್ಳಿಯ ಮಕ್ಕಳಿಗೆ ಶೈಕ್ಷಣಿಕ ಸೌಲಭ್ಯ ದೊರೆಯಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಗ್ರಾಪಂ ಅಧ್ಯಕ್ಷೆ ಮಂಜುಳಾ ಹೆಂಜಾರಪ್ಪ,ಉಪಾಧ್ಯಕ್ಷೆ ಸಣ್ಣಮ್ಮ,ಸದಸ್ಯರುಗಳಾದ ಗಿರೀಶ್,ರಘುವೀರ್,ರಮೇಶ್,ಚಿಕ್ಕಣ್ಣ, ರಂಗನಾಥ್, ರತ್ನಮ್ಮ,ಮಂಗಳ ಲೋಕೇಶ್,ನರಸಿಂಹರಾಜು, ಮಂಗಳ ಶಿವಾನಂದ್,ದಸೂಡಿ ತಾಪಂ ಸದಸ್ಯ ಪ್ರಸನ್ನ ಕುಮಾರ್,ಸಾಮಾಜಿಕ ಹೋರಾಟಗಾರ ದಬ್ಬಗುಂಟೆ ರವಿಕುಮಾರ್, ತಾಪಂ ಮಾಜಿ ಸದಸ್ಯೆ ಕವಿತಾ ಪ್ರಕಾಶ್,ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ವದ್ದೀಗಯ್ಯ,ಮುಖಂಡರುಗಳಾದ ಮಲ್ಲೇಶಣ್ಣ,ಕಲ್ಲೇನಹಳ್ಳಿ ಶಿವಕುಮಾರ್,ಮಂಜುನಾಥ್ ಎಲ್.ಬಿ.,ಗುರು, ಕಾಂತರಾಜು,ತಿಮ್ಮಯ್ಯ,ಕೋದಂಡಪ್ಪ ಮತ್ತಿತರರು ಸೇರಿದಂತೆಎಸ್ ಡಿ ಎಂ ಸಿ ಸಮಿತಿಯವರು, ಪೋಷಕರುಗಳು ಹಾಜರಿದ್ದರು.
---------
ಕಳೆದ 30ವರ್ಷಗಳಿಂದ ಇದು ಸರ್ಕಾರಿ ಹಾಸ್ಟಲ್ ಆಗಿದ್ದರೂ ಕೂಡ ಅದಕ್ಕೂ ಮುನ್ನಾ 1963 ರಲ್ಲಿ ಶಾಲೆಯನ್ನು 30 ಹಳ್ಳಿಗಳ ಗ್ರಾಮಸ್ಥರು 50ರೂ,100ರೂ ವಂತಿಗೆಯೆತ್ತಿ ಆರಂಭಿಸಿದ್ದು ಮಕ್ಕಳ ಅನೂಕೂಲಕ್ಕಾಗಿ ಆಗಲೇ ಹಾಸ್ಟಲ್ ಕೂಡ ಆರಂಭ ಮಾಡಿ ಮಕ್ಕಳ ಊಟಕ್ಕೆ ಬೇಕಾದ ಅಕ್ಕಿ,ಬೇಳೆ,ಉಪ್ಪು,ಹುಣುಸೆಹಣ್ಣು ನೀಡಿ 24ವರ್ಷಗಳ ಕಾಲ ಸಾರ್ವಜನಿಕರ ಉದಾರ ಹೃದಯದ ಸಹಕಾರದಿಂದ ನಡೆದಿತ್ತು.1987ರಿಂದ ಈಚೆಗೆ ಸರ್ಕಾರ ಶಾಲೆಯನ್ನು ಹಾಗೂ ಹಾಸ್ಟಲ್ ಅನ್ನು ವಹಿಸಿಕೊಂಡು ಬಂದಿದೆ.
------------
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ