ಹುಳಿಯಾರು ; ಪಟ್ಟಣದ ಬಸ್ ನಿಲ್ದಾಣದಲ್ಲಿ ಭಾನುವಾರ ಮಧ್ಯಾಹ್ನದಿಂದ ಬೆಂಗಳೂರಿಗೆ ತೆರಳುವ ಪ್ರಯಾಣಿಕರಿಂದ ಜನಜಂಗುಳಿಯಾಗಿ ಬೆಂಗಳೂರಿಗೆ ತೆರಳುವ ಯಾವೊಂದು ಬಸ್ ಬಂದರೂ ಸಾಕು ಹರಸಾಹಸ ಮಾಡಿಯಾದರು ಬಸ್ ನೊಳಗೆ ಪ್ರವೇಶ ಮಾಡೀಯೇ ತೀರುವ ಪರಿಸ್ಥಿತಿ ಪ್ರಯಾಣಿಕರಲ್ಲಿ ಉಂಟಾಗಿತ್ತು.ದೀಪಾವಳಿ ಹಬ್ಬದ ಸಾಲು ರಜಾ ದಿನ ಮುಗಿಸಿ ವಾಪಸ್ ತೆರಳಲು ಹುಳಿಯಾರು ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದ ಜನರಿಗೆ ಬರುತ್ತಿದ್ದ ಬಸ್ಸುಗಳು ಭರ್ತಿಯಾಗಿ ಬರುತ್ತಿದ್ದರಿಂದ ಬಸ್ ಹತ್ತಲು ಹೈರಾಣಾಗುವ ಸ್ಥಿತಿ ಉಂಟಾಗಿತ್ತು. ಬೆಂಗಳೂರು ಕಡೆ ಹೋಗಲು ಯಾವ ಬಸ್ ಬಂದರೂ ಸಹ ಅವೆಲ್ಲಾ ಹೊಸದುರ್ಗದಿಂದಲೇ ಭರ್ತಿಯಾಗಿ ಬರುತ್ತಿದ್ದರಿಂದ ಕಾಲಿಡುವುದಕ್ಕು ಆಸ್ಪದವಿರಲಿಲ್ಲ.
ಹುಳಿಯಾರು ಸೇರಿದಂತೆ ಸುತ್ತಮುತ್ತಲ ಹಳ್ಳಿಗಳ ಸಾಕಷ್ಟು ಮಂದಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವವರೇ ಆಗಿದ್ದು ದೀಪಾವಳಿ ಹಬ್ಬಕ್ಕೆಂದು ತಂತಮ್ಮ ಊರುಗಳಿಗೆ ಬಂದಿದ್ದರು. ಹಬ್ಬದ ರಜೆ ಮುಗಿಸಿ ಸೋಮವಾರದಂದು ವಾಪಸ್ಸ್ ಕೆಲಸಕ್ಕೆ ಹಾಜರಾಗಲು ಎಲ್ಲರೂ ಮಧ್ಯಾಹ್ನದಿಂದಲೇ ಬಂದಿದ್ದರಿಂದ ಬಸ್ ನಿಲ್ದಾಣ ಗಿಜುಗುಟ್ಟುತ್ತಿತ್ತು. ಎಲ್ಲಾ ಕೆಎಸಾರ್ಟಿಸಿ ಬಸ್ಸುಗಳು ಹೊಸದುರ್ಗದಿಂದ ಬರುತ್ತಿದ್ದವಾದ್ದರಿಂದ ಹುಳಿಯಾರಿಗೆ ಬರುವಷ್ಟರಲ್ಲೇ ಬಸ್ ಸೀಟ್ ಗಳೆಲ್ಲಾ ತುಂಬಿದ್ದು ಪ್ರಯಾಣಿಕರು ಪರದಾಡುವಂತಾಗಿತ್ತು. ಬರುತ್ತಿದ್ದ ಬಸ್ ಗೆ ಒಮ್ಮೆಲೆ ಎಲ್ಲಾ ಪ್ರಯಾಣಿಕರು ನುಗ್ಗುತ್ತಿದ್ದರಿಂದ ಬಸ್ ಹತ್ತುವುದೆ ತ್ರಾಸದಾಯಕವಾಗಿತ್ತು.ಕೆಲವೊಂದು ಬಸ್ಸುಗಳು ಭರ್ತಿಯಾಗಿದರಿಂದ ನಿಲ್ದಾಣಕ್ಕೂ ಬಾರದೆ ಹಾಗೆಯೇ ಹೋಗುತ್ತಿದ್ದರಿಂದ ಬಾರದ ಬಸ್ ಕಾಯುವ ಪರಿಸ್ಥಿತಿ ಉಂಟಾಗಿತ್ತು.
ಸರ್ಕಾರಿ ಬಸ್ ಜೊತೆಗೆ ಇಂದು ಹೆಚ್ಚುವರಿಯಾಗಿ ಖಾಸಗಿ ಬಸ್ ಗಳು ಸಂಚರಿಸಿದ್ದರೂ ಕೂಡ ಎಲ್ಲಾ ಬಸ್ ಗಳು ಪುಲ್ ರಶ್ ಆಗಿದ್ದು ನಿಂತುಕೊಂಡು ಹೋಗಲು ಕೂಡ ಆಗದಷ್ಟು ಕಿಕ್ಕಿರಿದು ಪ್ರಯಾಣಿಕರು ತುಂಬಿದ್ದರು. ಇದರಿಂದ ಬೆಂಗಳೂರಿಗೆ ಹೋಗುವುದು ಬಲು ಪ್ರಯಾಸವಾಗಿಬಿಟ್ಟಿತ್ತು.
ಖಾಸಗಿ ಬಸ್ ನವರು ಸೀಟ್ ಗೆ 150 ರೂ ಹಾಗೂ ಸ್ಟಾಂಡಿಂಗ್ 120ರೂ ನಂತೆ ಹಣವಸೂಲಿ ಮಾಡುತ್ತಿದ್ದರು ಸಹ ಇದ್ಯಾವುದರ ಬಗ್ಗೆ ತಲೆಕೆಡಿಸಿಕೊಳ್ಳದ ಜನ ಹೇಗಾದರೂ ಸರಿ ಬೆಂಗಳೂರು ತಲುಪಬೇಕೆಂದು ಧಾವಂತದಲ್ಲಿದ್ದರು.
ಒಟ್ಟಾರೆ ಪ್ರತಿ ವರ್ಷ ದೀಪಾವಳಿ ಹಾಗೂ ಆಯುಧ ಪೂಜೆ ಸಮಯದಲ್ಲಿ ಪ್ರಯಾಣಿಕ ಈ ಸಮಸ್ಯೆ ಬಗ್ಗೆ ಸಾರಿಗೆ ಇಲಾಖೆಯವರಿಗೆ ಅರಿವಿದ್ದರು ಸಹ ಹೆಚ್ಚುವರಿ ಬಸ್ ಗಳನ್ನು ಬಿಡದೆ ಇರುವುದು ಪ್ರಯಾಣಿಕರಲ್ಲಿ ಇಲಾಖೆಯ ಕಾರ್ಯವೈಖರಿ ಬಗ್ಗೆ ಹರಿಹಾಯುತ್ತಿದ್ದರು.ಡಿಪೋ ವ್ಯವಸ್ಥಾಪಕರು ಹಬ್ಬಗಳ ಸಮಯದಲ್ಲಿ ಕೆಲ ಬಸ್ಗಳು ಹುಳಿಯಾರಿನಿಂದಲೇ ಹೊರಡುವ ವ್ಯವಸ್ಥೆ ಮಾಡಬೇಕಾಗಿ ಪ್ರಯಾಣಿಕರು ಆಗ್ರಹಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ