ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಡಿಸೆಂಬರ್, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಎಬಿವಿಪಿ ಹುಳಿಯಾರು ಘಟಕದವತಿಯಿಂದ ವಿದ್ಯಾರ್ಥಿಗಳಿಗೆ ಭದ್ರತೆ ನೀಡಲು ಕೋರಿ ಪೊಲೀಸ್ ಹಾಗೂ ಪಟ್ಟಣ ಪಂಚಾಯತಿ ಅಧ್ಯಕ್ಷರಿಗೆ ಮನವಿ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಘಟಕದವತಿಯಿಂದ ವಿದ್ಯಾರ್ಥಿಗಳ ಸಮಸ್ಯೆಗಳು ಮತ್ತು ಹೆಚ್ಚಿನ ಭದ್ರತೆಯನ್ನು  ಹೆಚ್ಚಿಸುವ ಬಗ್ಗೆ ಹುಳಿಯಾರು ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಕಿರಣ್ ಕುಮಾರ್ ಹಾಗೂ ಪೊಲೀಸ್ ಠಾಣಾಧಿಕಾರಿಗಳಾದ ಕೆ.ವಿ ಮೂರ್ತಿ ಅವರಿಗೆ ಮನವಿ ಸಲ್ಲಿಸಲಾಯಿತು. ಮನವಿ : ಕರ್ನಾಟಕ ಪಬ್ಲಿಕ್ ಸ್ಕೂಲ್ ಹುಳಿಯಾರು-ಕೆಂಕೆರೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹುಳಿಯಾರು-ಕೆಂಕೆರೆ ಶಾಲಾ ಕಾಲೇಜುಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಎಲ್ಲಾ ವಿದ್ಯಾರ್ಥಿಗಳಿಗೂ ಹೆಚ್ಚಿನ ಭದ್ರತೆ ಒದಗಿಸುವ ಕಾರಣದಿಂದ ಶಾಶ್ವತ ಗೇಟ್ ವ್ಯವಸ್ಥೆ ಮತ್ತು ಸಿಸಿಟಿವಿ ಅಳವಡಿಸಿ ವಿದ್ಯಾರ್ಥಿಗಳು ಸಂಚರಿಸುವ ಸಮಯದಲ್ಲಿ ಹೆಚ್ಚಿನ ನಿಗಾ ವಹಿಸಬೇಕೆಂದು ಮನವಿ ನೀಡಲಾಯಿತು. ಮನವಿ ಪತ್ರ ಸ್ವೀಕರಿಸಿದ ಪಟ್ಟಣ ಪಂಚಾಯಿತಿ ಅಧ್ಯಕ್ಷ ಕಿರಣ್ ಕುಮಾರ್ ಮುಂದಿನ 15 ದಿನಗಳಲ್ಲಿ ಶಾಶ್ವತ ಪರಿಹಾರವನ್ನು ಒದಗಿಸುವ ಭರವಸೆ ನೀಡಿದರು. ವಿದ್ಯಾರ್ಥಿಗಳ ಮನವಿ ಪತ್ರ ಸ್ವೀಕರಿಸಿದ ಪೊಲೀಸ್ ಠಾಣಾಧಿಕಾರಿ ಕೆ.ವಿ.ಮೂರ್ತಿ  ಸೋಮವಾರದಿಂದಲೇ ಹೆಚ್ಚಿನ ನಿಗಾವಹಿಸಿ ಸಿಸಿಟಿವಿ ಅಳವಡಿಸುವ ಭರವಸೆ ನೀಡಿದರು. ಈ ವೇಳೆಯಲ್ಲಿ ಅತಿಥಿ ಉಪನ್ಯಾಸಕರಾದ ನರೇಂದ್ರಬಾಬು,ಕಾರ್ಯಕರ್ತರಾದ ಹರೀಶ್ ಎಸ್.ಎನ್ ರಾಕೇಶ್ ಹಾಗೂ ಗಿರೀಶ್ , ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಚಿಕ್ಕನಾಯಕನಹಳ್ಳಿ ತಾಲೂ

ಮತಿಘಟ್ಟದಲ್ಲಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಚಿಕ್ಕನಾಯಕನಹಳ್ಳಿ ತಾ ಮತ್ತಿಘಟ್ಟದಲ್ಲಿ ತಿಪಟೂರಿನ ಶಾಲಾ ಕಾಲೇಜುಗಳಿಗೆ ತೆರಳಲು ಬೆಳಿಗ್ಗೆಯಿಂದ 9 ಘಂಟೆಯವರವಿಗೂ KSRTC ಬಸ್ಸುಗಳು ಸರಿಯಾಗಿ ಬರುವುದಿಲ್ಲ ಎಂದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಇಂದು ಸಹ ಸರಿಯಾಗಿ ಬಸ್ಸು ಬಾರದಿದ್ದು ಪ್ರತಿಭಟನೆಗೆ ಕಾರಣವಾಯಿತು. ಹಂದನಕೆರೆ ಪೋಲೀಸರು ಬಂದು ಮೇಲಧಿಕಾರಿಗಳ ಗಮನಕ್ಕೆ ತಂದು ನಾಳೆಯಿಂದ ಸರಿಪಡಿಸುತ್ತೇವೆ ಎಂದು ತಿಳಿಸಿದರು.ವಿದ್ಯಾರ್ಥಿಗಳಿಗೆ  ಸಂಬಂಧ ಪಟ್ಟ ಅಧಿಕಾರಿಗಳಿಗೆ ದೂರು ನೀಡಲು ತಿಳಿಸಿದರು. ಮತಿಘಟ್ಟದಲ್ಲಿ ದಿನನಿತ್ಯ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ತಿಪಟೂರಿಗೆ ಓಡಾಡುತ್ತಾರೆ.ಸರಿಯಾದ ಸಮಯಕ್ಕೆ ಬಸ್ಸುಗಳು ಬರುವುದಿಲ್ಲ.ಇಲ್ಲಿಗೊಂದು ಬಸ್ ನಿಲ್ದಾಣ ಮಾಡಬೇಕು,ಇಲ್ಲಿಗೊಬ್ಬರು TC ಸಿಬ್ಬಂದಿ ನೇಮಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು.

ಹುಳಿಯಾರಿನ ಅಲೆಮಾರಿ ಬುಡಕಟ್ಟು ಮಹಾಸಭಾವತಿಯಿಂದ 26.12.2022 ರ ಸೋಮವಾರದಿಂದ ಮತ್ತೆ ನಾಡಕಚೇರಿ ಮುಂಭಾಗದಲ್ಲಿ ಅಹೋರಾತ್ರಿ ಧರಣಿ

ಹುಳಿಯಾರಿನ ಅಲೆಮಾರಿ ಬುಡಕಟ್ಟು ಮಹಾಸಭಾವತಿಯಿಂದ  21.12.2022 ಪೂರ್ವ ಸಿದ್ಧತಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು  ಹುಳಿಯಾರಿನ ಶಂಕರಾಪುರ ಬಡಾವಣೆಯಲ್ಲಿ ವಾಸವಾಗಿದ್ದಂತಹ ಅಲೆಮಾರಿ ಜನರಿಗೆ ನಿವೇಶನ ಕಲ್ಪಿಸಿ ಕೊಡುವಂತೆ ಒತ್ತಾಯಿಸಿ ಅಕ್ಟೋಬರ್ 2 ನೇ ತಾರೀಖಿನಂದು 21 ದಿನಗಳ ಕಾಲ ಹುಳಿಯಾರು ನಾಡಕಛೇರಿ ಮುಂಭಾಗ ಅಹೋರಾತ್ರಿ ಧರಣಿಯನ್ನು ನಡೆಸಿದ ಸಂದರ್ಭದಲ್ಲಿ ಚಿಕ್ಕನಾಯಕನಹಳ್ಳಿ ತಾಲೂಕು ದಂಡಾಧಿಕಾರಿಗಳು ಮತ್ತು ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿಗಳು ಭೇಟಿ ನೀಡಿ ಒಂದು ವಾರದ ಒಳಗಾಗಿ ಸಂಪೂರ್ಣ ಕೆಲಸ ಮುಗಿಸಿ ನಿವೇಶನಗಳನ್ನು ಹಂಚಿಕೆ ಮಾಡುವುದಾಗಿ ತಿಳಿಸಿದ್ದರು. ಆದರೆ ಇಲ್ಲಿಯವರೆಗೆ ಎರಡು ತಿಂಗಳು ಕಳೆದರೂ ಇನ್ನೂ ನಿವೇಶನಗಳು ಕೈ ಸೇರಿಲ್ಲ. ಆದಕಾರಣ ಹುಳಿಯಾರು ಕೆರೆ ತುಂಬಿ ಬೀದಿಗೆ ಬಿದ್ದಿರುವ ಅಲೆಮಾರಿ ಜನಗಳ ಕಷ್ಟವನ್ನು ನಿರ್ಲಕ್ಷ ಮಾಡುತ್ತಿರುವ ಕಾರಣ 26.12.2022 ಸೋಮವಾರ ದಂದು ಮತ್ತೆ ಹುಳಿಯಾರಿನ ನಾಡಕಚೇರಿ ಮುಂಭಾಗದಲ್ಲಿ ಅಹೋರಾತ್ರಿ ಧರಣಿ ಮಾಡಲು ತೀರ್ಮಾನ ತೆಗೆದುಕೊಳ್ಳಲಾಯಿತು.

ರೈತರಲ್ಲಿ ತಾರತಮ್ಯ ಮಾಡದೆ ರಾಗಿ ಬೆಳೆಯುವ ಎಲ್ಲಾ ರೈತರ ರಾಗಿಯನ್ನು ಖರೀದಿಸಲು ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಒತ್ತಾಯ

ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮದಿಂದ ಉತ್ತಮ ಗುಣಮಟ್ಟದ ರಾಗಿಯನ್ನು ಜಿಲ್ಲೆಯ ವಿವಿಧ ಎಪಿಎಂಸಿ ಆವರಣದಲ್ಲಿ ತೆರೆಯಲಾಗಿರುವ ರಾಗಿ ಖರೀದಿ ಕೇಂದ್ರದಲ್ಲಿ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಸಲು ರೈತರ ನೋಂದಣಿ ಆರಂಭವಾಗಿರುವುದು ಸರಿಯಷ್ಟೇ. ಪ್ರಸ್ತುತವಾಗಿ ಸಣ್ಣ ಮತ್ತು ಅತಿ ಸಣ್ಣ ರೈತರಿಂದ ಗರಿಷ್ಠ 20 ಕ್ವಿಂಟಾಲ್ ರಾಗಿ ಖರೀದಿಸಲು ಮುಂದಾಗಿದ್ದು, 5 ಎಕರೆಗೂ ಮೇಲ್ಪಟ್ಟು ಜಮೀನು ಹೊಂದಿರುವ ದೊಡ್ಡ ರೈತರಿಗೆ ರಾಗಿ ಮಾರಾಟ ಮಾಡಲು ಅವಕಾಶವಿಲ್ಲದಿರುವುದು ಸಮಸ್ಯೆಗೆ ಕಾರಣವಾಗಿದೆ. ಸರ್ಕಾರ ರೈತರನ್ನು ಸಣ್ಣ -ಅತಿ ಸಣ್ಣ-ದೊಡ್ಡ ರೈತರು ಎಂದು ವರ್ಗೀಕರಿಸದೆ/ ತಾರತಮ್ಯ ಮಾಡದೆ ಎಲ್ಲಾ ರೈತರ ರಾಗಿಯನ್ನು ಖರೀದಿಸಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳು  ಸರ್ಕಾರಕ್ಕೆ ಸಮಸ್ಯೆಯ ಬಗ್ಗೆ ಮನವರಿಕೆ ಮಾಡಿಕೊಟ್ಟು ಸಮಸ್ಯೆ ಪರಿಹರಿಸುವಂತೆ ಮಾಜಿ ಶಾಸಕರು ಹಾಗೂ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು ಆಗಿರುವ ಕೆ ಎಸ್ ಕಿರಣ್ ಕುಮಾರ್ ಒತ್ತಾಯಿಸಿದರು. ಹುಳಿಯಾರಿನ ಎಪಿಎಂಸಿ ಆವರಣದಲ್ಲಿನ ರಾಗಿ ಖರೀದಿ ಕೇಂದ್ರಕ್ಕೆ ಇಂದು ಭೇಟಿ ಕೊಟ್ಟು ರೈತರ ಸಮಸ್ಯೆ ಆಲಿಸಿ, ಸರ್ಕಾರದ ಮಾರ್ಗಸೂಚಿಯನ್ನು ಪರಿಶೀಲಿಸಿ ಅವರು ಮಾತನಾಡಿದರು. ತಾರತಮ್ಯ ಏಕೆ??? ರೈತರು ಬೆಳೆಯುವ ಬೆಳೆಯಲ್ಲಿ ತಾರತಮ್ಯ ಮಾಡುತ್ತಿರುವ ಸರ್ಕಾರದ ನೀತಿಯ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿದ ಅವರು, ಜೋಳ ಬೆಳೆಯುವ ಪ್ರತಿ ರೈತರು