ಹುಳಿಯಾರಿನ ಅಲೆಮಾರಿ ಬುಡಕಟ್ಟು ಮಹಾಸಭಾವತಿಯಿಂದ 26.12.2022 ರ ಸೋಮವಾರದಿಂದ ಮತ್ತೆ ನಾಡಕಚೇರಿ ಮುಂಭಾಗದಲ್ಲಿ ಅಹೋರಾತ್ರಿ ಧರಣಿ
ಹುಳಿಯಾರಿನ ಶಂಕರಾಪುರ ಬಡಾವಣೆಯಲ್ಲಿ ವಾಸವಾಗಿದ್ದಂತಹ ಅಲೆಮಾರಿ ಜನರಿಗೆ ನಿವೇಶನ ಕಲ್ಪಿಸಿ ಕೊಡುವಂತೆ ಒತ್ತಾಯಿಸಿ ಅಕ್ಟೋಬರ್ 2 ನೇ ತಾರೀಖಿನಂದು 21 ದಿನಗಳ ಕಾಲ ಹುಳಿಯಾರು ನಾಡಕಛೇರಿ ಮುಂಭಾಗ ಅಹೋರಾತ್ರಿ ಧರಣಿಯನ್ನು ನಡೆಸಿದ ಸಂದರ್ಭದಲ್ಲಿ ಚಿಕ್ಕನಾಯಕನಹಳ್ಳಿ ತಾಲೂಕು ದಂಡಾಧಿಕಾರಿಗಳು ಮತ್ತು ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿಗಳು ಭೇಟಿ ನೀಡಿ ಒಂದು ವಾರದ ಒಳಗಾಗಿ ಸಂಪೂರ್ಣ ಕೆಲಸ ಮುಗಿಸಿ ನಿವೇಶನಗಳನ್ನು ಹಂಚಿಕೆ ಮಾಡುವುದಾಗಿ ತಿಳಿಸಿದ್ದರು.ಆದರೆ ಇಲ್ಲಿಯವರೆಗೆ ಎರಡು ತಿಂಗಳು ಕಳೆದರೂ ಇನ್ನೂ ನಿವೇಶನಗಳು ಕೈ ಸೇರಿಲ್ಲ.ಆದಕಾರಣ ಹುಳಿಯಾರು ಕೆರೆ ತುಂಬಿ ಬೀದಿಗೆ ಬಿದ್ದಿರುವ ಅಲೆಮಾರಿ ಜನಗಳ ಕಷ್ಟವನ್ನು ನಿರ್ಲಕ್ಷ ಮಾಡುತ್ತಿರುವ ಕಾರಣ 26.12.2022 ಸೋಮವಾರ ದಂದು ಮತ್ತೆ ಹುಳಿಯಾರಿನ ನಾಡಕಚೇರಿ ಮುಂಭಾಗದಲ್ಲಿ ಅಹೋರಾತ್ರಿ ಧರಣಿ ಮಾಡಲು ತೀರ್ಮಾನ ತೆಗೆದುಕೊಳ್ಳಲಾಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ