ಚಿಕ್ಕನಾಯಕನಹಳ್ಳಿ ತಾ ಮತ್ತಿಘಟ್ಟದಲ್ಲಿ ತಿಪಟೂರಿನ ಶಾಲಾ ಕಾಲೇಜುಗಳಿಗೆ ತೆರಳಲು ಬೆಳಿಗ್ಗೆಯಿಂದ 9 ಘಂಟೆಯವರವಿಗೂ KSRTC ಬಸ್ಸುಗಳು ಸರಿಯಾಗಿ ಬರುವುದಿಲ್ಲ ಎಂದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.ಇಂದು ಸಹ ಸರಿಯಾಗಿ ಬಸ್ಸು ಬಾರದಿದ್ದು ಪ್ರತಿಭಟನೆಗೆ ಕಾರಣವಾಯಿತು.
ಹಂದನಕೆರೆ ಪೋಲೀಸರು ಬಂದು ಮೇಲಧಿಕಾರಿಗಳ ಗಮನಕ್ಕೆ ತಂದು ನಾಳೆಯಿಂದ ಸರಿಪಡಿಸುತ್ತೇವೆ ಎಂದು ತಿಳಿಸಿದರು.ವಿದ್ಯಾರ್ಥಿಗಳಿಗೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ದೂರು ನೀಡಲು ತಿಳಿಸಿದರು.ಮತಿಘಟ್ಟದಲ್ಲಿ ದಿನನಿತ್ಯ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ತಿಪಟೂರಿಗೆ ಓಡಾಡುತ್ತಾರೆ.ಸರಿಯಾದ ಸಮಯಕ್ಕೆ ಬಸ್ಸುಗಳು ಬರುವುದಿಲ್ಲ.ಇಲ್ಲಿಗೊಂದು ಬಸ್ ನಿಲ್ದಾಣ ಮಾಡಬೇಕು,ಇಲ್ಲಿಗೊಬ್ಬರು TC ಸಿಬ್ಬಂದಿ ನೇಮಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ