ರೈತರಲ್ಲಿ ತಾರತಮ್ಯ ಮಾಡದೆ ರಾಗಿ ಬೆಳೆಯುವ ಎಲ್ಲಾ ರೈತರ ರಾಗಿಯನ್ನು ಖರೀದಿಸಲು ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಒತ್ತಾಯ
ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮದಿಂದ ಉತ್ತಮ ಗುಣಮಟ್ಟದ ರಾಗಿಯನ್ನು ಜಿಲ್ಲೆಯ ವಿವಿಧ ಎಪಿಎಂಸಿ ಆವರಣದಲ್ಲಿ ತೆರೆಯಲಾಗಿರುವ ರಾಗಿ ಖರೀದಿ ಕೇಂದ್ರದಲ್ಲಿ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಸಲು ರೈತರ ನೋಂದಣಿ ಆರಂಭವಾಗಿರುವುದು ಸರಿಯಷ್ಟೇ. ಪ್ರಸ್ತುತವಾಗಿ ಸಣ್ಣ ಮತ್ತು ಅತಿ ಸಣ್ಣ ರೈತರಿಂದ ಗರಿಷ್ಠ 20 ಕ್ವಿಂಟಾಲ್ ರಾಗಿ ಖರೀದಿಸಲು ಮುಂದಾಗಿದ್ದು, 5 ಎಕರೆಗೂ ಮೇಲ್ಪಟ್ಟು ಜಮೀನು ಹೊಂದಿರುವ ದೊಡ್ಡ ರೈತರಿಗೆ ರಾಗಿ ಮಾರಾಟ ಮಾಡಲು ಅವಕಾಶವಿಲ್ಲದಿರುವುದು ಸಮಸ್ಯೆಗೆ ಕಾರಣವಾಗಿದೆ. ಸರ್ಕಾರ ರೈತರನ್ನು ಸಣ್ಣ -ಅತಿ ಸಣ್ಣ-ದೊಡ್ಡ ರೈತರು ಎಂದು ವರ್ಗೀಕರಿಸದೆ/ ತಾರತಮ್ಯ ಮಾಡದೆ ಎಲ್ಲಾ ರೈತರ ರಾಗಿಯನ್ನು ಖರೀದಿಸಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಸಮಸ್ಯೆಯ ಬಗ್ಗೆ ಮನವರಿಕೆ ಮಾಡಿಕೊಟ್ಟು ಸಮಸ್ಯೆ ಪರಿಹರಿಸುವಂತೆ ಮಾಜಿ ಶಾಸಕರು ಹಾಗೂ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು ಆಗಿರುವ ಕೆ ಎಸ್ ಕಿರಣ್ ಕುಮಾರ್ ಒತ್ತಾಯಿಸಿದರು.ಹುಳಿಯಾರಿನ ಎಪಿಎಂಸಿ ಆವರಣದಲ್ಲಿನ ರಾಗಿ ಖರೀದಿ ಕೇಂದ್ರಕ್ಕೆ ಇಂದು ಭೇಟಿ ಕೊಟ್ಟು ರೈತರ ಸಮಸ್ಯೆ ಆಲಿಸಿ, ಸರ್ಕಾರದ ಮಾರ್ಗಸೂಚಿಯನ್ನು ಪರಿಶೀಲಿಸಿ ಅವರು ಮಾತನಾಡಿದರು.
ತಾರತಮ್ಯ ಏಕೆ???
ರೈತರು ಬೆಳೆಯುವ ಬೆಳೆಯಲ್ಲಿ ತಾರತಮ್ಯ ಮಾಡುತ್ತಿರುವ ಸರ್ಕಾರದ ನೀತಿಯ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿದ ಅವರು, ಜೋಳ ಬೆಳೆಯುವ ಪ್ರತಿ ರೈತರು ಗರಿಷ್ಠ 20 ಕ್ವಿಂಟಾಲ್ ಜೋಳ ಮಾರಾಟ ಮಾಡಲು ಅವಕಾಶ ಕಲ್ಪಿಸಿರುವ ಸರ್ಕಾರ, ಅದೇ ರಾಗಿ ಮಾರಾಟ ಮಾಡುವ ರೈತರ ಅಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರು ಎಂದು ವರ್ಗೀಕರಿಸಿ ಗರಿಷ್ಠ 20 ಕ್ವಿಂಟಾಲ್ ರಾಗಿ ಖರೀದಿಸಲು ಅವಕಾಶ ಕಲ್ಪಿಸಿದೆ.
ಜೋಳ ಬೆಳೆಯುವ ಎಲ್ಲಾ ರೈತರನ್ನು ಸಣ್ಣ & ದೊಡ್ಡ ರೈತರು ಎಂದು ವರ್ಗೀಕರಿಸದ ಸರ್ಕಾರ ಕೇವಲ ರಾಗಿ ಬೆಳೆಯುವ ರೈತರನ್ನು ಮಾತ್ರ ಈ ದೃಷ್ಟಿಯಲ್ಲಿ ನೋಡುವುದು ಸರಿಯಲ್ಲ. ಐದು ಎಕರೆಗೂ ಮೇಲ್ಪಟ್ಟಿರುವ ರೈತರು ರಾಗಿ ಬೆಳೆದಲ್ಲಿ ಅವರಿಗೆ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಲು ಅವಕಾಶ ನಿರಾಕರಿಸುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.ಸರ್ಕಾರ ಈಗಲಾದರೂ ಈ ತಾರತಮ್ಯ ನೀತಿ ಕೈ ಬಿಟ್ಟು, ರಾಗಿ ಬೆಳೆಯುವ ಎಲ್ಲಾ ರೈತರ ರಾಗಿಕೊಳ್ಳುವಂತೆ ಅವರು ಆಗ್ರಹಿಸಿದರು
------------
ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕರಾಗಿ ಪೋನಾಯಿಸಿದರಾದರೂ, ಅವರುಗಳು ಬೇರೊಂದು ಸಭೆಯಲ್ಲಿ ತೊಡಗಿದ್ದರಿಂದ ಲಭ್ಯವಾಗಲಿಲ್ಲ
-----------
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ